ತರಕಾರಿ ಜ್ಯೂಸ್ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೀಟ್ ರೂಟ್ ಜ್ಯೂಸ್ ಕುಡಿದರೆ ನೀವು ನೂರ್ಕಾಲ ಬಾಳಬಹುದು. ಮಣ್ಣಿನಡಿಯಲ್ಲಿ ಸಿಗುವಂತಹ ಕೆಲವು ತರಕಾರಿಗಳಲ್ಲಿ ಬೇರೆ ತರಕಾರಿಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇರುತ್ತವೆ ಎಂದು ಹೇಳಲಾಗುತ್ತದೆ.

ಬೀಟ್ ರೂಟ್ ಒಂದು ಅದ್ಭುತವಾದ ತರಕಾರಿ ಎಂದರೂ ತಪ್ಪಾಗದು. ಯಾಕೆಂದರೆ ಇದರಲ್ಲಿ ಹಲವಾರು ವಿಧದ ವಿಟಮಿನ್ ಗಳು ಖನಿಜಾಂಶಗಳು ಇವೆ. ಬೀಟ್ ರೂಟ್ ತಿಂದರೆ ಅಥವಾ ಅದರ ಜ್ಯೂಸ್ ಕುಡಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೀಟ್ ರೂಟ್ ಜ್ಯೂಸ್ ಹೆಚ್ಚು ಜನಪ್ರಿಯವಾಗುತ್ತಲಿದೆ. ಇದಕ್ಕೆ ಮುಖ್ಯ ಕಾರಣ ಅದರಲ್ಲಿ ಇರುವಂತಹ ಪೋಷಕಾಂಶಗಳು. ಬೀಟ್ ರೂಟ್ ನ್ನು ಆಹಾರದಲ್ಲಿ ಬಳಸುದಕ್ಕಿಂತಲೂ ಜ್ಯೂಸ್ ಮಾಡಿ ಕುಡಿದರೆ ದೇಹವು ಬೇಗನೆ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವುದು.

ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವಂತಹ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದು ಮತ್ತು ರಕ್ತ ಸಂಚಾರವನ್ನು ಸುಗಮಗೊಳಿಸಲು ನೆರವಾಗುವುದು. ಮೆದುಳಿನ ಸಹಿತ ದೇಹದ ಪ್ರತಿಯೊಂದು ಅಂಗಾಂಗವು ಹೆಚ್ಚಿನ ರಕ್ತ ಸಂಚಾರವನ್ನು ಪಡೆದರೆ, ಆಗ ದೇಹವು ಹೆಚ್ಚು ಆಮ್ಲಜನಕ ಸರಬರಾಜು ಮಾಡಿದೆ ಎಂದರ್ಥವಾಗಿದೆ.

ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ದೇಹದ ತ್ರಾಣವು ಹೆಚ್ಚಾಗುವುದು. ಇದೇ ನೈಟ್ರೇಟ್ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡ ಬಳಿಕ ವ್ಯಾಯಾಮ ಮತ್ತು ಇತರ ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಉಪಯೋಗವನ್ನು ತಗ್ಗಿಸುವ ಪರಿಣಾಮವಾಗಿ ದಣಿವು ಕಡಿಮೆ ಆಗುವುದು. ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದು ದೈನಂದಿನ ಕಾರ್ಯಕ್ಕೆ ಶಕ್ತಿ ನೀಡುವುದು ಮತ್ತು ದೀರ್ಘಕಾಲ ದೈಹಿಕ ಚಟುವಟಿಕೆಯನ್ನು ದಣಿವಿಲ್ಲದೆ ಮಾಡಬಹುದಾಗಿದೆ.

ಬೀಟ್ ರೂಟ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಆಂಶವು ಹಲವಾರು ವಿಧದ ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ಸಿ ಮತ್ತು ಬೆಟಲೈನ್ ಗಳು ದೇಹದಲ್ಲಿ ಫ್ರೀ ರ್ಯಾಡಿಕಲ್ ನ್ನು ನಿರ್ಮೂಲನೆ ಮಾಡಿ, ಅಣುಗಳಲ್ಲಿ ಎಲೆಕ್ಟ್ರಾನ್ ಗಳನ್ನು ನಿರ್ವಹಿಸಲು ನೆರವಾಗುವುದು. ಇದರಿಂದ ಡಿಎನ್ ಎ ಮತ್ತು ಅಣುಗಳಿಗೆ ಹಾನಿ ಆಗುವುದು ತಪ್ಪುತ್ತದೆ.

ಬೀಟ್ ರೂಟ್ ಜ್ಯೂಸ್ ನ್ನು ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್ ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

ಬೀಟ್ ರೂಟ್ ಜ್ಯೂಸ್ ಕೂದಲಿನ ಕಾಂತಿ ಮತ್ತು ಹೊಳಪವನ್ನು ಕಾಪಾಡಿಕೊಂಡು ಸಂಪೂರ್ಣ ಆರೋಗ್ಯ ಕಾಪಾಡುವುದು. ನೈಸರ್ಗಿಕವಾಗಿ ಸೌಂದರ್ಯ ಪಡೆಯಲು ನೀವು ಕೂದಲಿಗೆ ಕೂಡ ಬೀಟ್ ರೂಟ್ ಬಳಸಬಹುದು. ಬೀಟ್ ರೂಟ್ ಕೂದಲಿನ ಗುಣಮಟ್ಟವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುವುದು. ಒಣ ತಲೆಬುರುಡೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ನೀವು ಬೀಟ್ ರೂಟ್ ಜ್ಯೂಸ್ ಬಳಸಿ. ಬೀಟ್ ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ ರೂಟ್ ಜ್ಯೂಸ್ ಗೆ ವಿನೇಗರ್ ಹಾಕಿದರೆ ಆಗ ಒಣ ತಲೆಬುರುಡೆ ಸಮಸ್ಯೆ ನಿವಾರಣೆ ಆಗುವುದು.