ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿ ಬಯೋಟಿಕ್ ಗುಣಗಳಿವೆ. ಇದನ್ನು ನೀರಿಗೆ ಹಾಕಿ ಸ್ನಾನ ಮಾಡಿದರೆ ತುರಿಕೆ, ದದ್ದು, ಮೊಡವೆ ಮತ್ತಿತರ ತ್ವಚೆ ಸಮಸ್ಯೆ ದೂರವಾಗುತ್ತದೆ. ಚರ್ಮವು ಪ್ರಕಾಶಮಾನವಾಗಿ ಹೊಳೆಯುತ್ತದೆ. ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನವಾಗಿ ಕಾರ್ಯನಿರ್ವಹಿಸುತ್ತದೆ.
ಸ್ನಾನ ಮಾಡುವಾಗ ಕರ್ಪೂರದ ವಾಸನೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ತಲೆನೋವು ಮತ್ತು ಬೆನ್ನುನೋವು ಕೂಡ ಕಡಿಮೆಯಾಗುತ್ತದೆ. ಕೀಲು ನೋವು ಮತ್ತು ಹುಣ್ಣುಗಳಿಂದ ಬಳಲುತ್ತಿರುವವರು ನಿತ್ಯ ಕರ್ಪೂರ ಸ್ನಾನ ಮಾಡಿದರೆ ಉತ್ತಮ ಉಪಶಮನ ದೊರೆಯುತ್ತದೆ.
ಉಗುರು ಬೆಚ್ಚಗಿನ ನೀರಿನಲ್ಲಿ ಕರ್ಪೂರ ಹಾಕಿ ಸ್ನಾನ ಮಾಡಿದರೆ ಸುಸ್ತು, ನಿಶ್ಯಕ್ತಿ ಕಡಿಮೆಯಾಗುತ್ತದೆ. ಕ್ರಿಯಾಶೀಲರಾಗುತ್ತೀರಿ. ಇದು ನವಚೈತನ್ಯ, ನವ ಶಕ್ತಿ ತುಂಬುತ್ತದೆ. ಈ ನೀರಿನಿಂದ ಒಳ್ಳೆಯ ಪರಿಮಳ ಬರುತ್ತಿದ್ದಂತೆ.. ಮನಸ್ಸು ಪ್ರಶಾಂತವಾಗುತ್ತದೆ. ರಾತ್ರಿ ವೇಳೆ ಹೀಗೆ ಕರ್ಪೂರ ಸ್ನಾನ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.

