ಹಾಸನ : ಹಣ ತೊಡಗಿಸಿ ಆನ್‌ಲೈನ್‌ನಲ್ಲಿ ಆಡುವಂಥ ರಮ್ಮಿ ಆಟ ನಿಷೇಧ ಮಾಡುವ ಬಗ್ಗೆ ಉಪ ತಹಶೀಲ್ದಾರ್‌ ಮುಖಾಂತರ ರಾಜ್ಯ ಸರ್ಕಾರಕ್ಕೆ ವರುಣ್ ಚಕ್ರವರ್ತಿ ಹಾಸನ ಮನವಿ ಮಾಡಿದರು.

ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಜೂಜಾಟ ಸೇರಿದಂತೆ ವ್ಯತಿರಿಕ್ತ ದಂಧೆಯಲ್ಲಿ ತೊಡಗಿರುವ ಯುವ ಸಮೂಹ ಆನ್ ಲೈನ್ ಆಟವನ್ನು ಗೀಳಾಗಿಸಿಕೊಂಡಿದ್ದಾರೆ. ಈ ಗೀಳು ಅವರ ಜೀವನವನ್ನೇ ಆಹುತಿ ಪಡೆಯುತ್ತಿದೆ. ಕಂಡೂ ಕಾಣದಂತಿದ್ದ ಈ ಪ್ರಕ್ರಿಯೆ ಮಾನಸಿಕ ತಜ್ಞರ ಹುಬ್ಬೆರಿಸುವಷ್ಟು ವ್ಯಾಪಕವಾಗಿ ಬೆಳೆದಿದೆ.

ಆನ್‌ಲೈನ್ ಗೇಮ್‌ಗಳಾದ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ, ಪೊಕ‌ರ್ ಸೇರಿದಂತೆ ಅನೇಕ ಆದಾಯದ ಆಮಿಷವೊಡ್ಡುವ ಕ್ರೀಡೆಗಳಿಗೆ ಯುವ ಸಮೂಹ ಬಲಿಯಾಗುತ್ತಿದೆ. ಜತೆಗೆ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದೆ. ಇದರಿಂದ ಅನೇಕರು ಜೀವ ಕಳೆದುಕೊಂಡ ಉದಾಹರಣೆಗಳು ಇವೆ. ಈ ಕುರಿತ ಮಾಹಿತಿ ಮತ್ತು ನಿವಾರಣೋಪಾಯಗಳು ಈ ವಾರದ ಸುದ್ದಿಸುತ್ತಾಟದಲ್ಲಿ ರಾಜಧಾನಿಯಲ್ಲಿ ಇತ್ತೀಚೆಗೆ ಆನ್‌ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್, ಜೂಜಾಟಕ್ಕೆ ಯುವ ಸಮೂಹ ಬಲಿಯಾಗುತ್ತಿದ್ದು, ಕುಟುಂಬ ವ್ಯವಸ್ಥೆಮೇಲೂ ಇದು ಪರಿಣಾಮ ಬೀರುತ್ತಿದೆ.

ವಿದ್ಯಾರ್ಥಿಗಳು, ವಯಸ್ಕರು ಹೀಗೆ ಎಲ್ಲ ವಯೋಮಾನದವರು ಆನ್‌ಲೈನ್‌ ಗೇಮ್‌ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೂಂದೆಡೆ ಕೌಟುಂಬಿಕವಾಗಿ ಸಮಸ್ಯೆಗಳು ಎದುರಿಸುವಂತಾಗಿದೆ. ಪ್ರಾರಂಭದಲ್ಲಿ ಸಮಯ ಕಳೆಯಲು ಮೊಬೈಲ್‌ನಲ್ಲಿ ಆ್ಯಪ್‌ಗೃಮೂಲಕ ಆನ್‌ಲೈನ್ ಗೇಮ್‌ಗಳು ಆಕರ್ಷಿತರಾಗುವ ಯುವ ಸಮೂಹ ನಂತರ ಅದನ್ನೇ ಹವ್ಯಾಸವನ್ನಾಗಿಸಿ ಚಟ ಹತ್ತಿಸಿಕೊಳ್ಳುತ್ತಿರುವ ನೂರಾರು ಘಟನೆಗಳು ನಡೆಯುತ್ತಿವೆ. ಕೊರೊನಾ ಸಂದರ್ಭದಲ್ಲಿ ವರ್ಕ್‌ಫ್ರಮ್ ಹೋಮ್, ಆನ್‌ಲೈನ್ ತರಗತಿಗಳು ಜನರನ್ನು ಅತಿಯಾಗಿ ಮೊಬೈಲ್‌ಗೆ ಅಂಟಿಕೊಳ್ಳುವಂತೆ ಮಾಡಿತ್ತು.

ಮೊದಲು ಮನರಂಜನೆಗಾಗಿ ಆಡುತ್ತಿದ್ದ ಆನ್‌ಲೈನ್ ಗೇಮ್‌ಗಳು ಹಂತ ಹಂತವಾಗಿ ಹವ್ಯಾಸದಿಂದ ವ್ಯಸನಕ್ಕೆ ತಿರುಗಿ ಸಾಕಷ್ಟು ಹಣವನ್ನು ಕಳೆದು ಕೊಂಡಿರುವುದರ ಜತೆಗೆ, ಕುಟುಂಬದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಪ್ರಕರಣಗಳು ಇವೆ. ಮನೋರೋಗಕ್ಕೆ ಚಿಕಿತ್ಸೆ ನೀಡುವ ಕೇಂದ್ರಗಳಲ್ಲಿ ಜೂಜಾಟ, ಗೇಮಿಂಗ್ಸ್‌ಗೆ ಬಲಿಯಾಗಿರುವ ತಮ್ಮ ಕುಟುಂಬದವರನ್ನು ಸರಿಮಾಡಿ ಎಂದು ಪೋಷಕರು ಕೌನ್ಸೆಲಿಂಗ್‌ಗಾಗಿ ಕರೆತರುವಂತಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ ಹಾಸನ ಅಧ್ಯಕ್ಷ ವರುಣ್ ಚಕ್ರವರ್ತಿ ಮತ್ತು ಡಿಎಸ್ಎಸ್ ಸಂಚಾಲಕ ಮನೋಜ್ ನಾಯಕ್ ಅವರು ನವೀನ ರಘು ತಾಲ್ಲೂಕು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.