ಹಾಸನ: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿ ರುವ ಆರೋಪಿ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ತಂಡ ಹೊಳೆನರಸೀಪುರದ ಚೆನ್ನಾಂ ಬಿಕ ನಿವಾಸಕ್ಕೆ ಕರೆತರಲಾಗಿದ್ದು ಸ್ಥಳ ಮಹಜರ್ ನಡೆಸುತ್ತಿದ್ದಾರೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ೪೩ ದಿನಗಳ ಬಳಿಕ ತಮ್ಮ ಹುಟ್ಟೂರಿಗೆ ಎಸ್‌ಐಟಿ ತಂಡ ಕರೆತಂದಿದ್ದು ಚೆನ್ನಾಂಭಿಕ ನಿವಾಸ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ ಕ್ಯೂಆರ್‍ಟಿ ವಾಹನದಲ್ಲಿ ಕ್ಯಾಮೆರಾಗಿಳಿಗೂ ಕಾಣದಂತೆ ಪ್ರಜ್ವಲ್ ರೇವಣ್ಣ ಅವರನ್ನು ಕರೆತರಲಾಗಿತ್ತು.

ಹಾಸನದ ಸರ್ಕಾರಿ ಅತಿಥಿ ಗೃಹ, ಹೊಳೆನರಸೀಪುರದ ನಿವಾಸದಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿ, ಅದರ ವಿಡಿಯೋ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಈ ಆರೋಪದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ.

ಅವರ ಮನೆಯಲ್ಲಿ ಬೆಡ್ ಶೀಟ್‌ಗಳ ಮೇಲೆ ಸಂಶಯ ಸ್ಪಾದ ಕೆಲೆಗಳು ಕಂಡುಬಂದಿರುವ ಬಗ್ಗೆ ಪ್ರಶ್ನೆ ಮಾಡಿದೆ. ಬೆಡ್ ಶೀಟ್ ಕಲೆಗಳ ಬಗ್ಗೆ ಎಸ್‌ಐ ಪ್ರಶ್ನಿಸಿದಾಗ ಪ್ರಜ್ವಲ್ ರೇವಣ್ಣ ಅವರು ಆ ಕಲೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಹೇಳಿದ್ದಾರೆ ಎಂದು ಮೂಲ ಗಳಿಂದ ಮಾಹಿತಿ ತಿಳಿದು ಬಂದಿತ್ತು.

ಪ್ರಜ್ವಲ್ ಆಗಮನಕ್ಕೂ ಒಂದು ದಿನ ಮೊದಲೇ ನಡೆಸಲಾದ ಈ ತಪಾಸಣೆಯ ವೇಳೆ ಅನುಮಾನದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಲವು ವಸ್ತುಗಳನ್ನು ಕೊಂಡೊಯ್ಯಲಾಗಿದ್ದು ಈ ವೇಳೆ ಪತ್ತೆಯಾದ ವಸ್ತುಗಳ ಬಗ್ಗೆ ಕೋರ್ಟ್‌ಗೆ ಮಾಹಿತಿ ಒದಗಿಸ ಲಾಗಿತ್ತು. ಒನ್ ಸೈಟ್ ಕಾಟ್ ಹಾಸಿಗೆ ಮೇಲೆಯೂ ಅಲ್ಲಲ್ಲಿ ಸಂಶಯಾಸ್ಪದ ಕಲೆಗಳನ್ನು ಹೊಂದಿದ್ದು, ಜೊತೆಗೆ ಒಂದು ಗ್ರೇ ಕಲರ್ ಅದರ ಮೇಲೆ ಸಿಲ್ವರ್ ಕಲರ್ ಕಲರ್‌ವುಳ್ಳ ವಾಲ್ ಪೇಪರ್ ತುಣುಕು ಸಿಕ್ಕಿತ್ತು.

ಲೋಕಸಭಾ ಚುನಾವಣೆ ಬಳಿಕ ವಿದೇಶದಲ್ಲಿ ತಲೆ ಮರೆಸಿ ಕೊಂಡಿದ್ದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇ. ೩೧ ರ ರಾತ್ರಿ ಸ್ವದೇಶಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿಯೇ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ತಂಡ ವಶ ಪಡೆಯಲಾಗಿತ್ತು. ಇನ್ನೂ ಎಸ್‌ಐಟಿ ತಂಡ ನಗರದಲ್ಲಿ ಸ್ಥಳ ಮಹಜರು ಮುಂದುವರೆಸಿದ್ದು ತನಿಖೆ ಕೈಗೊಂಡಿದ್ದಾರೆ.