ಹಾಸನ : ಹಾಸನ ನಗರಸಭೆ ವತಿಯಿಂದ ಎಲ್ಲಾ ವಾರ್ಡ್ಗಳಲ್ಲಿ ನಾಮಫಲಕ ಅಳವಡಿಸಿರುವಂತೆ ಚನ್ನರಾಯಪಟ್ಟಣ ತಾಲ್ಲೂಕು 23 ವಾರ್ಡ್ ಗಳಿಗೂ ನಾಮಫಲಕ ರಸ್ತೆ ಹೆಸರು ವಾರ್ಡ್ ನಂಬರ್ ಬೋರ್ಡ್ ಅಳವಡಿಸುವಂತೆ ಸಾರ್ವಜನಿಕವಾಗಿ ಮನವಿ ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್ಗಳಲ್ಲಿ ಹೆಸರು ಮತ್ತು ವಾರ್ಡ್ ನಂಬರ್ ತಿಳಿಸುವ ಯಾವುದೇ ಇರುವುದಿಲ್ಲ. ಇದು ಸಾರ್ವಜನಿಕರಲ್ಲಿ ಬೇಸರ ತಂದಿದೆ .

ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುವ ಪುರಸಭೆಗೆ ಅರ್ಥವಾಗದ ವಿಷಯವೇನಲ್ಲ ಹಾಗೂ ಪ್ರತಿನಿತ್ಯ ಸಾವಿರಾರು ಮಂದಿ ಚನ್ನರಾಯಪಟ್ಟಣಕ್ಕೆ ವ್ಯಾಪಾರ ವಹಿವಾಟು ಇತರೆ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ ಅವರಿಗೆ ಬೇಕಾದ ವಿಳಾಸ ಹುಡುಕಲು ಪರದಾಡುತ್ತಾರೆ ಹಾಲಿವಾಸ ಇರುವ ನಿವಾಸಿಗಳಿಗೆ ಬಹುತೇಕ ಯಾವ ವಾರ್ಡಿನಲ್ಲಿ ಇದ್ದೇವೆ ಎಂಬುದು ಅವು ಯಾವ ರಸ್ತೆಯಲ್ಲಿ ಇದ್ದೇವೆ ಎಂಬುದು ಗೊಂದಲ ಗೂಡಾಗಿದೆ ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್ಗಳಲ್ಲಿ ಮತ್ತು ರಸ್ತೆಗಳಲ್ಲಿ ವಾರ್ಡ್‌ ನಂಬರ್‌ ತಿಳಿಸುವ ಹೆಸರು ಕೂಡ ಇರುವುದಿಲ್ಲ.

ಇದು ಬೇಸರದ ಸಂಗತಿಯಾಗಿದೆ ಆದಷ್ಟು ಬೇಗ ಅಧಿಕಾರಿಗಳು ಇದರ ಬಗ್ಗೆ ಅತಿ ಶೀಘ್ರದಲ್ಲಿ ನಾಮಫಲಕ ಅಳವಡಿಸಬೇಕು ವರ್ಷಗಳ ಹಿಂದೆ ಪಟ್ಟಣದ ಅದ್ಯಂತ ಎಲ್ಲಾ ವಾರ್ಡ್ ಮತ್ತು ರಸ್ತೆಗಳಲ್ಲಿ ಅಳವಡಿಸಿದ್ದಂತಹ ಕಾಂಕ್ರೀಟ್ ವೀರ ರಸ್ತೆ ಮತ್ತು ಕಾಮಗಾರಿಗಳ ಹೊಡೆತಕ್ಕೆ ನಶಿಸಿಹೋಗಿದೆ ಆದುದರಿಂದ ಮಾನ್ಯ ಪುರಸಭಾ ಅಧಿಕಾರಿಗಳು ಇದರ ಬಗ್ಗೆ ಖುದ್ದಾಗಿ ಶೀಘ್ರದಲ್ಲೇ ನಾಮಫಲಕ ಅಳವಡಿಸಬೇಕು ಇದು ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ವರುಣ್ ಚಕ್ರವರ್ತಿ ಮತ್ತು  ಜಬಿ ಕಾಂಗ್ರೆಸ್ ಮುಖಂಡರು ಹಾಗೂ   ರವಿ ರೈತ ಸಂಘದ ಮುಖಂಡರು ಪ್ರೇಮ ಅಕ್ಕ ರೈತ ಸಂಘ ಸಿನ ರೈತ ಮುಖಂಡರು ಪುರಸಭೆ ಮುಖ್ಯ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು