ಹಾಸನ: ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಹಾಸನದ ಶಿರಾಡಿಘಾಟ್ನಲ್ಲಿ ಸಂಚಾರ ಆರಂಭವಾಗಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಗುಡ್ಡ ಕುಸಿದಿತ್ತು. ಕೂಡಲೆ ಕಾರ್ಯಪ್ರವೃಹತವಾದ ಜಿಲ್ಲಾಡಳಿತ ಸತತ 10-12 ಗಂಟೆ ಕಾರ್ಯಾಚರಣೆ ನಡೆಸಿ ಮಣ್ಣು ತೆರವು ಮಾಡಿದೆ.
ಇದರಿಂದ ರಸ್ತೆ ಸಂಚರಿಸಲು ಮುಕ್ತವಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲ ಕೆಸರುಮಯವಾಗಿದೆ. ಟ್ರಕ್ವೊಂದು ಕೆಸರಿನಲ್ಲಿ ಸಿಲುಕಿತ್ತು. ನಿಧಾನಗತಿ ಸಂಚಾರದಿಂದ ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಇತ್ತ ಭದ್ರಾ ಡ್ಯಾಂನಿಂದ 41 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಭದ್ರಾವತಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಹೊಸ ಸೇತುವೆ ಮುಳುಗಡೆಯಾಗಿದೆ. ಸೇತುವೆ ಜಲಾವೃತ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಪೊಲೀಸರು ಹಾಕಿ ನಿರ್ಬಂಧಿಸಿಸಲಾಗಿದೆ.

