ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನಿಂತಿದ್ದ ಹದಿನೇಳು ಬೈಕ್‌ಗಳಿಗೆ ಗುದ್ದಿದ ಘಟನೆ ಅರಸೀಕೆರೆ ತಾ| ಬಾಣಾವರ ಹೋಬಳಿ, ಕೆಂಕೆರೆಹಳ್ಳಿ ಗೇಟ್ ಬಳಿ ನಡೆದಿದೆ.

ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಸವಾರರು ಬೈಕ್‌ಗಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಇದೇ ವೇಳೆ ಅತಿ ವೇಗವಾಗಿ ಬಂದ ಫಾರ್ಚೂನರ್ ಕಾರು ನಿಯಂತ್ರಣ ತಪ್ಪಿ ಬೈಕ್‌ಗಳ ಮೇಲೆ ನುಗ್ಗಿದೆ. ಮಳೆಯಿಂದ ರಸ್ತೆ ಕಾಣದೆ ಫಾರ್ಚೂನರ್ ಕಾರು ಬಸ್‌ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದು ಬೈಕ್​ಗಳಿಗೆ ಗುದ್ದಿದೆ. ಪರಿಣಾಮ ಓರ್ವನಿಗೆ ಗಾಯವಾಗಿದ್ದು, ಘಟನೆ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.