ಸ್ಯಾಂಡಲ್ವುಡ್: ಎಲ್ಲೆಲ್ಲೂ ‘ವಿಕ್ರಾಂತ್ ರೋಣ’ ಅಬ್ಬರ ಜೋರಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳು ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ಹೊತ್ತಲ್ಲೇ ಸಿನಿಮಾದ ಮೊದಲ ಹಾಡು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ‘ರಾ ರಾ ರಕ್ಕಮ್ಮ’ ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ಹೊತ್ತಲ್ಲೇ ‘ವಿಕ್ರಾಂತ್ ರೋಣ’ ಸಿನಿಮಾದ 2ನೇ ಹಾಡು ‘ರಾಜಕುಮಾರಿ’ ರಿಲೀಸ್ ಆಗಿ ಎಲ್ಲರ ಮನ ಗೆದ್ದಿದೆ. ಇನ್ನು ಮತ್ತಷ್ಟು ಹಾಡುಗಳು ‘ವಿಕ್ರಾಂತ್ ರೋಣ’ ಸಿನಿಮಾ ಖಜಾನೆಯಿಂದ ಸಾಲು ಸಾಲಾಗಿ ಹೊರಬರಲು ಸಜ್ಜಾಗಿವೆ.
Here is my fav frm the album of #VikrantRona.
A song tat touched me. And a making I njoyed the most.#LullabySong #Rajkumari Kannada Lyrical video OUT NOWhttps://t.co/EXy7ZxCa4L #VRonJuly28 @anupsbhandari @AJANEESHB @rvijayprakash #VikrantRona https://t.co/2tYo8Tcvwv— Kichcha Sudeepa (@KicchaSudeep) July 2, 2022
ಜುಲೈ 02 ‘ರಾಜಕುಮಾರಿ’ ಹಾಡಿನ ಕನ್ನಡ ವರ್ಷನ್ ರಿಲೀಸ್ ಆಗಿದ್ದರೆ, ಜುಲೈ 03ಕ್ಕೆ ಮಲಯಾಳಂ, ಜುಲೈ 04 ರಂದು ತೆಲುಗು, ಜುಲೈ 05 ರಂದು ಹಿಂದಿ, ಹಾಗೂ ಜುಲೈ 06 ಕ್ಕೆ ತಮಿಳಿನಲ್ಲಿ ಬಿಡುಗಡೆ ಆಗಲಿದೆ. ಈ ಮೂಲಕ ದೇಶಾದ್ಯಂತ ನಟ ಕಿಚ್ಚ ಸುದೀಪ್ ಅವರ ಸಿನಿಮಾ ಹವಾ ಡಬಲ್ ಆಗಲಿದೆ.