News Karnataka Kannada
Wednesday, May 08 2024
ಸಾಂಡಲ್ ವುಡ್

ಸ್ಯಾಂಡಲ್ ವುಡ್: ನಟ ರಮೇಶ್​ ಅರವಿಂದ್ ಬರ್ತ್​ಡೇ​ಗೆ ‘ಶಿವಾಜಿ ಸುರತ್ಕಲ್ 2’ ಟೀಸರ್ ಗಿಫ್ಟ್

Ramesh
Photo Credit : Freepik

ಸ್ಯಾಂಡಲ್ ವುಡ್: ರಮೇಶ್ ಅರವಿಂದ್ ಅವರಿಗೆ ಇಂದು ಬರ್ತ್​​ಡೇ ಸಂಭ್ರಮ. ಅವರು ಚಿತ್ರರಂಗದಲ್ಲಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಕನ್ನಡದಲ್ಲೇ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ವಿಶೇಷ.

ಇತ್ತೀಚೆಗೆ ರಮೇಶ್ ಅರವಿಂದ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. 2018ರಿಂದ ಈಚೆಗೆ ಅವರ ನಟನೆಯ ಬೆರಳೆಣಿಕೆ ಸಿನಿಮಾಗಳು ಮಾತ್ರ ರಿಲೀಸ್ ಆಗಿವೆ. 2020ರಲ್ಲಿ ‘ಶಿವಾಜಿ ಸುರತ್ಕಲ್’ ಸಿನಿಮಾ ತೆರೆಗೆ ಬಂದು ಮೆಚ್ಚುಗೆ ಪಡೆದುಕೊಂಡಿತು. ಈಗ ಈ ಚಿತ್ರದ ಸೀಕ್ವೆಲ್ ಬರುತ್ತಿದೆ.

ರಮೇಶ್ ನಟನೆಯ ‘ಶಿವಾಜಿ ಸುರತ್ಕಲ್’ ಚಿತ್ರಕ್ಕೆ ಈಗ ಸೀಕ್ವೆಲ್ ಬರುತ್ತಿದೆ. ಇಂದು ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಬರ್ತ್​ಡೇ ಪ್ರಯುಕ್ತ ಫ್ಯಾನ್ಸ್​ಗೆ ಈ ಟೀಸರ್ ಗಿಫ್ಟ್ ಆಗಿ ಸಿಗಲಿದೆ. ಇನ್ನು, ಬರ್ತ್​ಡೇ ಪ್ರಯುಕ್ತ ರಮೇಶ್ ಅವರು ಹೊಸ ಘೋಷಣೆ ಮಾಡಿದ್ದಾರೆ. ವಿಶ್ ಮಾಡೋಕೆ ಅವರು ಫ್ಯಾನ್ಸ್​ಗೆ ಅವಕಾಶ ನೀಡಿದ್ದಾರೆ.

ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು. ಬರೀ ವಿಶ್​ ಮಾಡುವುದು ಮಾತ್ರವಲ್ಲದೇ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ.

ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎಂಬುದು ವಿಶೇಷ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು