News Karnataka Kannada
Monday, April 29 2024
ಸಾಂಡಲ್ ವುಡ್

ಸ್ಯಾಂಡಲ್‌ವುಡ್‌: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ!

Aditi Prabhudev
Photo Credit : Facebook

ಸ್ಯಾಂಡಲ್‌ವುಡ್‌: ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಹಸೆಮಣೆ ಏರಿದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದಿತಿ ಮತ್ತು ಯಶಸ್ವಿ ಮದುವೆ ಸಮಾರಂಭ ನಡೆಯುತ್ತಿದೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಅದಿತಿ ಮತ್ತು ಯಶಸ್ವಿ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯಬದ್ಧವಾಗಿ ಮಾಡಿಸಿಕೊಂಡಿದ್ದಾರೆ. ನವೆಂಬರ್ 26ರಂದು ಹಳದಿ ಸಮಾರಂಭ, 27 ಮೆಹಂದಿ ಮತ್ತು ಸಂಗೀತ ಸಮಾರಂಭ ಹಾಗೂ ರಾತ್ರಿ ಆರತಕ್ಷತೆ ಸಂಭ್ರಮ ಜೋರಾಗಿತ್ತು.

ನವೆಂಬರ್ 27 ರಾತ್ರಿ ನಡೆದ ಆರತಕ್ಷತೆ ಸಂಭ್ರಮದಲ್ಲಿ ಅನೇಕ ಗಣ್ಯರು ಹಾಜರಾಗಿದ್ದರು. ಅದಿತಿ ಪ್ರಭುದೇವ ಸ್ನೇಹಿತರು, ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ಅನ ಅನೇಕ ಗಣ್ಯರು ಭಾಗಿಯಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ.

ಸಿನಿಮಾ ಗಣ್ಯರ ಜೊತೆಗೆ ಅನೇಕ ರಾಜಕೀಯ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿ ಅದಿತಿ ಮತ್ತು ಯಶಸ್ವಿ ಜೋಡಿಗೆ ಶುಭಹಾರೈಸಿದರು. ಇನ್ನೂ ಅನೇಕರು ಆರತಕ್ಷತೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು