ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿಗಂತ್ ಗೋವಾದ ಬೀಚ್ ನಲ್ಲಿ ಪಲ್ಟಿ ( ಸಮ್ಮರ್ ಶಾಟ್ಸ್) ಹೊಡೆಯುವ ವೇಳೆ ಕುತ್ತಿಗೆ, ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.
ನಟ ದಿಗಂತ್, ಪತ್ನಿ ಐಂದ್ರಿರೇ ಸೇರಿದಂತೆ ಕುಟುಂಬ ಸಮೇತ ಕೆಲ ದಿನಗಳ ಹಿಂದೆ ಗೋವಾಕ್ಕೆ ಟ್ರಿಪ್ ಹೋಗಿದ್ದರು. ದಿಗಂತ್ ಬೀಚ್ ನಲ್ಲಿ ಮೋಜು – ಮಸ್ತಿ ಮಾಡುವ ವೇಳೆಯಲ್ಲಿ ಬ್ಯಾಕ್ ಫ್ಲಿಪ್ ಮಾಡಿದ್ದಾರೆ. ಈ ವೇಳೆ ಅವರ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಬಲವಾದ ಏಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.