ಲವ್ ಮೊಕ್ಟೈಲ್ ಸಿನಿಮಾದ ನಟಿ ಮಿಲನಾ ನಾಗರಾಜ್ ಹಾಗೂ ನಟ ‘ಡಾರ್ಲಿಂಗ್’ ಕೃಷ್ಣ ಜೋಡಿ ಇದೀಗ ತಮ್ಮ ಫ್ಯಾನ್ ಗೆ ಸಿಹಿ ಸುದ್ದಿಯೊಂದು ಕೊಟ್ಟಿದ್ದಾರೆ. ಈ ಜೋಡಿ ಪ್ರೀತಿಸಿ 2021ರ ಫೆಬ್ರವರಿ 14ರಂದು ಮದುವೆ ಆದರು. ಇದೀಗ 2024ರ ಸೆಪ್ಟೆಂಬರ್ನಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಮಿಲನಾ ಹಾಗೂ ಕೃಷ್ಣ ಘೋಷಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟಿ ಮಿಲನಾ ನಾಗರಾಜ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಮಗುವಿನ ಶರ್ಟ್ ಫೋಟೋನ ಹಂಚಿಕೊಂಡಿದ್ದಾರೆ ಅವರು. ಇದಕ್ಕೆ ‘KrissMi’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿದ್ದಾರೆ. ಸೆಪ್ಟೆಂಬರ್ 2024 ಎಂದು ಬರೆದಿದ್ದಾರೆ. ಈ ಮೂಲಕ ಮಗುವಿನ ಆಗಮನದ ಬಗ್ಗೆ ಘೋಷಣೆ ಮಾಡಿದ್ದಾರೆ.