News Karnataka Kannada
Thursday, May 02 2024
ಸಾಂಡಲ್ ವುಡ್

‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಫ್ಯಾನ್ಸ್‌ಗೆ ಕಹಿ ಸುದ್ದಿ

Saptami Gowda the vaccine war
Photo Credit : Twitter

ಸ್ಯಾಂಡಲ್ ವುಡ್: ಕನ್ನಡದ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಅವರು ಜೂನ್ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು, ಆಪ್ತರ ಹಾರೈಕೆ ನೋಡಿ ನಟಿ ಖುಷಿಪಟ್ಟರು.

ಈ ಬೆನ್ನಲ್ಲೇ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ಸಪ್ತಮಿ ನಟನೆಯ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ‘ದಿ ವ್ಯಾಕ್ಸಿನ್ ವಾರ್’ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕನ್ನಡದ ಸಿನಿಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ.

ಈ ವರ್ಷ ಸ್ವಾತಂತ್ರೋತ್ಸವದ ದಿನದಂದು ಸಿನಿಮಾ ರಿಲೀಸ್ ಮಾಡುವ ಬಗ್ಗೆ ತಂಡ ಯೋಚಿಸಿತ್ತು. ಆದರೆ ಈಗ ಕಾರಣಾಂತರಗಳಿಂದ ಸಿನಿಮಾ ಮುಂದಕ್ಕೆ ಹೋಗಿದೆ. ಭಾರತದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಅಮೆರಿಕದಲ್ಲಿ ಪ್ರೀಮಿಯರ್ ಮಾಡಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಯೋಚಿಸಿದ್ದಾರೆ ಎನ್ನಲಾಗಿದೆ.

ಹಾಗಾಗಿ ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಸಪ್ತಮಿ ಗೌಡ ಅವರ ಕೈಯಲ್ಲಿ ದಿ ವ್ಯಾಕ್ಸಿನ್ ವಾರ್, ಕಾಳಿ, ಯುವ ಸಿನಿಮಾಗಳಿವೆ. ಮತ್ತೊಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು