ಬೆಂಗಳೂರು: ನಾಟು ನಾಟು ಗೀತೆ ಆಸ್ಕರ್ ಪ್ರಶಸ್ತಿ ಪಡೆದದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟಿ ರಮ್ಯಾ ಭಾರತ ದೇಶವೆಂಬುದು ವಿಭಿನ್ನ ಸಂಸ್ಖೃತಿ ಮತ್ತು ಭಾಷೆಗಳ ದೇಶ ಎಂಬುದು ಪ್ರಪಂಚದ ಅರಿವಿಗೆ ಬಂದಿದೆ.
ಭಾರತವೆಂದರೆ ಕೇವಲ ಹಿಂದಿಯಲ್ಲ. ಕೇವಲ ಬಾಲಿವುಡ್ ಕೂಡ ಅಲ್ಲ. ಭಾರತವೆಂದರೆ ಕೇವಲ ಹಿಂದಿ ಭಾಷೆ ಎಂಬ ರೂಢಿಯನ್ನು ಆಲಸ್ಯದ ಪರಮಾವಧಿ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಆಟೋಚಾಲಕನೊಬ್ಬ ಯುವತಿಯೊಬ್ಬಳಿಗೆ ಕನ್ನಡದಲ್ಲಿ ಮಾತನಾಡುವಂತೆ ತಿಳಿಸುತ್ತಿರುವುದು. ಅದಕ್ಕೆ ಆಕೆ ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಪ್ರತ್ಯುತ್ತರ ನೀಡುವುದು ಕಂಡುಬಂದಿದೆ. ನಂತರ ಆಕೆಯನ್ನು ಚಾಲಕ ಕೆಳಕ್ಕಿಳಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
I’m also really glad Naatu Naatu was performed in Telugu – about time the world knows that India is a diverse country of different cultures and languages. India is not just Hindi. India is not just Bollywood. Stereotyping is lazy thinking. https://t.co/fGPhAMwkzX
— Ramya/Divya Spandana (@divyaspandana) March 13, 2023