News Karnataka Kannada
Monday, April 29 2024
ಸಾಂಡಲ್ ವುಡ್

ಮಿಡ್​ನೈಟ್ ಥಿಯೇಟರ್​ಗೆ ಎಂಟ್ರಿಯಾದ ʼಕಾಟೇರʼ; ದರ್ಶನ್‌ ಪತ್ನಿ ಏನಂದ್ರು ಗೊತ್ತ ?

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ನಟನೆಯ ಕಾಟೇರ ಸಿನಿಮಾ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ಸಿನಿಮಾ ಥಿಯೇಟರ್​ಗಳಿಗೆ ಎಂಟ್ರಿಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಕಾಟೇರ ಸಖತ್ ಹವಾ ಸೃಷ್ಟಿಸಿದ್ದು ಮಿಡ್​​ನೈಟ್​ 12 ಗಂಟೆಗೆ ಫಸ್ಟ್​ ಶೋ ಮಾಡಲಾಗಿತ್ತು. ಮಾಸ್ ಅಭಿಮಾನಿಗಳಂತೂ ದರ್ಶನ್​ ಸಿನಿಮಾವನ್ನು ವೀಕ್ಷಿಸಲು ಮುಗಿಬಿದ್ದಿದ್ದರು.
Photo Credit : News Kannada

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್​ ದರ್ಶನ್​ ನಟನೆಯ ಕಾಟೇರ ಸಿನಿಮಾ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ಸಿನಿಮಾ ಥಿಯೇಟರ್​ಗಳಿಗೆ ಎಂಟ್ರಿಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಕಾಟೇರ ಸಖತ್ ಹವಾ ಸೃಷ್ಟಿಸಿದ್ದು ಮಿಡ್​​ನೈಟ್​ 12 ಗಂಟೆಗೆ ಫಸ್ಟ್​ ಶೋ ಮಾಡಲಾಗಿತ್ತು. ಮಾಸ್ ಅಭಿಮಾನಿಗಳಂತೂ ದರ್ಶನ್​ ಸಿನಿಮಾವನ್ನು ವೀಕ್ಷಿಸಲು ಮುಗಿಬಿದ್ದಿದ್ದರು.

ಬೆಂಗಳೂರಿನ ರಾಕ್​​ಲೈನ್​​ ಮಾಲ್​, ಸಂಜಯ ನಗರದ ವೈಭವಿ ಚಿತ್ರಮಂದಿರ, ಉತ್ತರಹಳ್ಳಿಯ ವೈಷ್ಣವಿ ಥಿಯೇಟರ್ ಸೇರಿದಂತೆ ಕೆಲವೆಡೆ ಮಧ್ಯೆ ರಾತ್ರಿ 12 ಗಂಟೆಯಿಂದಲೇ ಕಾಟೇರ ಶೋ ಆರಂಭವಾಗಿದ್ದು ಇಂದು ನಾನ್ ಸ್ಟಾಪ್ ಪ್ರದರ್ಶನ ಮಾಡಲಾಗುತ್ತದೆ.

ಕೆಜಿ ರಸ್ತೆಯಲ್ಲಿರುವ ಅನುಪಮಾ ಥಿಯೇಟರ್​ನಲ್ಲಿ ಬೆಳಗ್ಗೆ 3 ಗಂಟೆಗೆ ಮೊದಲ ಪ್ರದರ್ಶನ ಮಾಡಲಾಯಿತು. ಈ ಕಾಟೇರಾದ ಸ್ಪೆಷಲ್ ಎಂದರೆ ರಾಕ್​ಲೈನ್ ಮಾಲ್​​ನಲ್ಲಿ ಒಂದೇ ದಿನ 13 ಶೋಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಕಾಟೇರ ರಿಲೀಸ್ ಆಗಿರುವ ಸಿನಿಮಾ ಮಂದಿರಗಳ ಮುಂದೆ ದರ್ಶನ್ ಫೋಟೋದ ಜೊತೆಗೆ ತಮ್ಮ ಫೋಟೋಗಳ ಬ್ಯಾನರ್​ಗಳನ್ನು ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಹಾಕಿದ್ದಾರೆ.

ಇನ್ನು ಈ ಚಿತ್ರದ ಬಗ್ಗೆ ದರ್ಶನ್‌ ಪತ್ನಿ ರಿಯಾಕ್ಟ್ ಮಾಡಿದ್ದಾರೆ. ‘ಕಾಟೇರ’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದಾರೆ. ನಾನು ‘ಕಾಟೇರ’ ಸಿನಿಮಾ ವೀಕ್ಷಿಸಿದೆ. ಅನುಭವ ಅದ್ಭುತವಾಗಿತ್ತು. ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ನಾನು ಕಣ್ಣೀರು ಸುರಿಸಿದ್ದೇನೆ. ಸಿನಿಮಾ ನೋಡಿ ಹೊರನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಆವರಿಸಿತು ಎಂದು ದರ್ಶನ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಳಿಕ ‘ಕಾಟೇರ’ ಸಿನಿಮಾ, ನೀವು ನಿರ್ದೇಶಿಸಿದ ಬೆಸ್ಟ್ ಚಿತ್ರ ಎಂದು ನಿರ್ದೇಶಕ ತರುಣ್‌ ಸುಧೀರ್‌ಗೆ ವಿಜಯಲಕ್ಷ್ಮಿ ಹೊಗಳಿದ್ದಾರೆ. ‘ಕಾಟೇರ’ ನಿಜಕ್ಕೂ ನನ್ನ ಅಚ್ಚುಮೆಚ್ಚಿನ ಸಿನಿಮಾ. ಇಂತಹ ಸಿನಿಮಾವನ್ನು ದರ್ಶನ್ ಫ್ಯಾನ್ಸ್‌ಗೆ ತೋರಿಸಲು ಕಾತರದಲ್ಲಿದ್ದೇವೆ. ನಿಜಕ್ಕೂ ಕಾಟೇರ ಮಾಸ್ಟರ್‌ಪೀಸ್ ಸಿನಿಮಾ ಎಂದಿದ್ದಾರೆ. ಕಾಟೇರ ಇಡೀ ತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ನಾಯಕಿ ಆರಾಧನಾ ರಾಮ್ ಚೊಚ್ಚಲ ಸಿನಿಮಾಗೆ ಬೆಸ್ಟ್ ವಿಶ್ಸ್ ದರ್ಶನ್ ಪತ್ನಿ ತಿಳಿಸಿದ್ದಾರೆ.

https://www.instagram.com/p/C1Zb8RwvskW/?utm_source=ig_embed&ig_rid=7fccf533-7390-4303-ba51-df7b18a54155

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು