ಮಂಗಳೂರು: ತುಳುನಾಡಿನ ಪ್ರತಿಭಾವಂತ ನಟ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ತುಳು ಸಿನಿಮಾ ಸಕ್ಸಸ್ ಆಗಿದೆ.
ಎರಡು ತಿಂಗಳ ಹಿಂದೆ ರಿಲೀಸ್ ಆದ ಈ ಚಿತ್ರ ಇದೀಗ ಟಿವಿಯಲ್ಲೂ ಪ್ರಸಾರ ಆಗುತ್ತಿದೆ. ಈ ಚಿತ್ರದ ಹಕ್ಕನ್ನು ಸ್ಟಾರ್ ಸುವರ್ಣ ಚಾನೆಲ್ ಖರೀದಿಸಿದೆ. ಈ ಮೂಲಕ ತುಳು ಭಾಷೆಯ ಚಿತ್ರ ಹಕ್ಕು ಖರೀದಿಸಿದೆ ಮೊದಲ ಚಾನೆಲ್ ಅನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸರ್ಕಸ್ ಸಿನಿಮಾ ಈಗಾಗಲೇ ತುಳುನಾಡಿನಲ್ಲಿ ಹಂಗಾಮಾ ಮಾಡಿದೆ. ತುಳು ಸಿನಿಮಾವೊಂದು ಸ್ಯಾಟಲೈಟ್ ಚಾನೆಲ್ಗಳಲ್ಲಿ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಸೆ.10ರಂದು ಸಂಜೆ ಆರು ಗಂಟೆಗೆ ಚಿತ್ರ ಪ್ರಸಾರವಾಗಲಿದೆ.