News Karnataka Kannada
Sunday, May 05 2024
ಸಾಂಡಲ್ ವುಡ್

ಚಿತ್ರಮಂದಿರದಿಂದ ‘ಚಂದ್ರಮುಖಿ 2’ ಸಿನಿಮಾ ಎತ್ತಂಗಡಿ

'chandramukhi 2' To Be Released From Theatres
Photo Credit : News Kannada

ನಟಿ ಕಂಗನಾ ರಣಾವತ್​ ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ‘ಚಂದ್ರಮುಖಿ 2’ ಸಿನಿಮಾದಿಂದ ಆ ಗೆಲುವು ಸಿಗಬಹುದು ಎಂದೇ ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಸೆಪ್ಟೆಂಬರ್​ 28ರಂದು ಬಿಡುಗಡೆ ಆದ ಈ ಚಿತ್ರ ಹೀನಾಯವಾಗಿ ಸೋತಿದೆ ಎಂದು ಟ್ರೇಡ್​ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ಕಂಗನಾ ಮಾತ್ರ ತಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ.

‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ ಲಾರೆನ್ಸ್​ ಮತ್ತು ಕಂಗನಾ ರಣಾವತ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಮೂಡಿಬಂದ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಿದೆ. ಎಲ್ಲ ಭಾಷೆಗಳಲ್ಲೂ ಸೇರಿ 4 ದಿನಕ್ಕೆ ಈ ಚಿತ್ರ ಗಳಿಸಿರುವುದು ಕೇವಲ 24 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.

ಟ್ರೇಡ್​ ವಿಶ್ಲೇಷಕ ಮನೋಬಲ ವಿಜಯಬಾಲನ್​ ಅವರು ‘ಚಂದ್ರಮುಖಿ 2’ ಸಿನಿಮಾವನ್ನು ಡಿಸಾಸ್ಟರ್​ (ದುರಂತ) ಎಂದು ಕರೆದಿದ್ದಾರೆ. ಅಲ್ಲದೇ ಹಲವು ಚಿತ್ರಮಂದಿರದಿಂದ ಈ ಸಿನಿಮಾವನ್ನು ಕಿತ್ತು ಹಾಕಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಜನರು ಬಾರದ ಕಾರಣ ಎತ್ತಂಗಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು