News Karnataka Kannada
Saturday, May 04 2024
ಸಾಂಡಲ್ ವುಡ್

‘100′ ನಲ್ಲಿ ರಮೇಶ್ ಅರವಿಂದ್ ತೆರೆದಿಡಲಿದ್ದಾರೆ ಸೈಬರ್ ಕ್ರೈಂ ಕರಾಳ ಮುಖ..!

New Project (6)
Photo Credit :

ಮನುಷ್ಯ ಮೊಬೈಲ್ ಗೆ ಅದೆಷ್ಟು ಅಡಿಕ್ಟ್ ಆಗಿದ್ದಾನೆ ಅಂದ್ರೆ ಮನೆಯಲ್ಲಿ ನಾಲ್ಕೇ ಜನ ಇದ್ರು ಮಾತುಕತೆಗಿಂತ ಮೊಬೈಲ್ ನಲ್ಲೇ ಮುಳುಗುವಷ್ಟು. ಆ ಮೊಬೈಲ್ ಒಳಗೆ ಒಬ್ಬೊಬ್ಬರದ್ದು ಒಂದೊಂದು ಪ್ರಪಂಚವಿದೆ. ಅಂಥ ಪ್ರಪಂಚದಲ್ಲಿ ಅದೆಷ್ಟೋ ಜನ ಸುಖ ಸಾಗರದಲ್ಲಿ ತೇಲಲು ಹೋಗಿ ದುಃಖ ಸಮುದ್ರದಲ್ಲಿ ದೊಪ್ಪನೆ ಬಿದ್ದಿರೋ ಉದಾಹರಣೆಗಳು ಕಣ್ಣ ಮುಂದೆ ಇದೆ. ಆದರೆ ಆ ಕಡೆ ಯಾರಿಗೂ ಎಚ್ಚರವೂ ಇಲ್ಲ, ಗಮನವೂ ಇಲ್ಲ. ಈ ಎಲ್ಲಾ ಅಂಶಗಳನ್ನ ಹೆಕ್ಕಿ ರಮೇಶ್ ಅರವಿಂದ್ ಸಮಾಜಕ್ಕೊಂದು ಸಂದೇಶದೊಂದಿಗೆ ಮನರಂಜನೆ ನೀಡಲು 100 ಸಿನಿಮಾ ಜೊತೆ ನವೆಂಬರ್ 19ಕ್ಕೆ ತೆರೆಗೆ ರ‍್ತಿದ್ದಾರೆ.

100 ಸಿನಿಮಾ ಸೈಬರ್ ಕ್ರೈಂ ಆಧಾರಿತ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ‌ ಬಳಕೆಯಿಂದಾಗುತ್ತಿರುವ ಅನಾಹುತಗಳನ್ನ ಬಿಡಿಸಿ ಹೇಳಲು ರೆಡಿಯಾಗಿದ್ದಾರೆ. ಮೊಬೈಲ್ ನಲ್ಲಿ ಅಡಿಕ್ಟ್ ಆದವರ ಸಮಸ್ಯೆ, ಸೋಷಿಯಲ್ ಮೀಡಿಯಾದಿಂದ ಜೀವಕ್ಕೆ ಉಂಟಾಗುತ್ತಿರುವ ಕುತ್ತು ಈ ಎಲ್ಲಾ ಎಲಿಮೆಂಟ್ಸ್ ಗಳನ್ನ ಇಟ್ಟುಕೊಂಡು ಪಕ್ಕ ಕರ‍್ಷಿಯಲ್ ಆಂಗಲ್ ನಲ್ಲಿ ಸಿನಿಮಾ ರೆಡಿ ಮಾಡಿದ್ದಾರೆ ನರ‍್ದೇಶಕ ರಮೇಶ್ ಅರವಿಂದ್. ನರ‍್ದೇಶನದ ಜೊತೆ ನಟನೆಯನ್ನು ಮಾಡಿದ್ದಾರೆ.

100 ಸಿನಿಮಾ ಬಗ್ಗೆ ಈಗಾಗಕೇ ಪಾಸಿಟಿವ್ ಒಪಿನಿಯನ್ ಬಿಲ್ಡ್ ಆಗಿದೆ. ಟ್ರೇಲರ್ ಮೂಲಕ ಸಿನಿಮಾದ ಸ್ಟ್ರೆಂತ್ ಎಲ್ಲರಿಗೂ ಗೊತ್ತಾಗಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ, ಕುಟುಂಬದ ಜವಾಬ್ದಾರಿ ಹೊತ್ತ ವ್ಯಕ್ತಿಯಾಗಿ ಎರಡು ಶೇಡ್ ನಲ್ಲಿ ರಮೇಶ್ ಅರವಿಂದ್ ಮಿಂಚಿದ್ದು, ಹೈ ವೋಲ್ಟೇಜ್ ಆ್ಯಕ್ಷನ್ ದೃಶ್ಯದಲ್ಲೂ ಕಾಣಿಸಿಕೊಂಡಿದ್ದಾರೆ.

ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು, ಉಮಾ, ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ, ಧನಂಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ರವಿರ‍್ಮ ಸಾಹಸ ಚಿತ್ರಕ್ಕಿದೆ.

ರಮೇಶ್ ಅರವಿಂದ್ ಜೊತೆಗೆ ರಚಿತಾ ರಾಮ್ ಹಾಗೂ ಪರ‍್ಣ ಜೊತೆಯಾಗಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಸೇರಿದಂತೆ ಮುಂತಾದವರ ತಾರಾಬಳಗವಿದೆ. ಇದೇ ಸಿನಿ ಶುಕ್ರವಾರ ಅಂದ್ರೆ ನವೆಂಬರ್ 19ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು