News Karnataka Kannada
Monday, April 29 2024
ಸಾಂಡಲ್ ವುಡ್

ಹೊಸ ಸಿನಿಮಾದ ಮೂಲಕ‌ ಮತ್ತೆ‌ ಶುಭಾ ಪುಂಜಾ ಸ್ಯಾಂಡಲ್ ವುಡ್ ಎಂಟ್ರಿ

Shubha Poonja
Photo Credit :

ಸ್ಯಾಂಡಲ್ ವುಡ್ :   ಬಿಗ್ ಬಾಸ್ ಸೀಸನ್ 8 ರಲ್ಲಿ ತನ್ನದೆ ಲೋಕದಲ್ಲಿ ಬಿಗ್ ಬಾಸ್ ಜೊತೆಗೆ ಟೂ ಬಿಡುತ್ತಾ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬಂದ ನಟಿ ಶುಭಾ ಪೂಂಜ
ನಟಿಸುತ್ತಿರುವ ಹೊಸ ಚಿತ್ರ ‘ಅಂಬುಜ’ದಲ್ಲಿ ಅವರ ಪಾತ್ರ ಅತ್ಯಂತ ವಿಭಿನ್ನವಾಗಿದೆ. ಶ್ರೀನಿ ಹನುಮಂತರಾಜು ನಿರ್ದೇಶನ ಮಾಡುತ್ತಿರುವ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಶುಭಾ ಎರಡು ಶೇಡ್‌ನ ಪಾತ್ರದಲ್ಲಿದ್ದಾರೆ. ಅವರನ್ನು ಲಂಬಾಣಿ ಹುಡುಗಿಯಾಗಿ ಮತ್ತು ಪತ್ರಕರ್ತೆಯಾಗಿ ಈ ಸಿನಿಮಾದಲ್ಲಿ ನೋಡಬಹುದಾಗಿದೆ.

ಈ ಸೈಕಲಾಜಿಕಲ್‌ ಹಾರರ್‌ ಥ್ರಿಲ್ಲರ್‌ ಸಿನಿಮಾದ ಫಸ್ಟ್‌ ಲುಕ್‌ ಇಂದು ರಿವೀಲ್‌ ಆಗಲಿದೆ. ಈ ಲುಕ್‌ನಲ್ಲಿ ಶುಭಾ ಪೂಂಜಾ ಅವರು ಲಂಬಾಣಿಗಳ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಕುಸುರಿ ಕಲೆಗೆ ಹೆಸರಾದ ಲಂಬಾಣಿಗಳು ತಮ್ಮ ತಾಂಡಾದಲ್ಲಿ ಸತತ ನಾಲ್ಕು ತಿಂಗಳ ಕಾಲ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ. ‘ಗದಗ ಜಿಲ್ಲೆಯ ಲಂಬಾಣಿಗಳು ಈ ಉಡುಪನ್ನು ತಯಾರಿಸಿದ್ದಾರೆ. ಇದರ ತೂಕ 20 ಕೆ.ಜಿ ಇದೆ. ಆಭರಣಗಳು, ಕುಸುರಿ ಕೆಲಸ ಇತ್ಯಾದಿಗಳನ್ನು ಬಹಳ ವಿಶೇಷವಾಗಿ ಮಾಡಲಾಗಿದೆ’ ಎಂದಿದ್ದಾರೆ ಶ್ರೀನಿ.

‘ರಾಯಚೂರಿನಲ್ಲಿ ನಡೆದ ಘಟನೆಯೊಂದನ್ನು ನಿರ್ಮಾಪಕ ಕಾಶೀನಾಥ್‌ ಮಡಿವಾಳರ್‌ ನಮಗೆ ಹೇಳಿದರು. ಅವರ ಊರಿನ ಸಮೀಪ ಈ ಘಟನೆ ನಡೆದಿತ್ತು. ಕಥೆ ಅವರೇ ಬರೆದಿದ್ದಾರೆ. ಸಮಾಜ ಮುಂದುವರಿಯುತ್ತಿದ್ದರೂ ಮುಗ್ಧ ಬಡಮಕ್ಕಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ವಿಜ್ಞಾನ ಬೆಳೆದರೂ ಅಜ್ಞಾನ ಇದ್ದೇ ಇದೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ಈ ಹಿಂದಿನ ನನ್ನ ಸಿನಿಮಾದಲ್ಲಿ ಶುಭಾ ಪೂಂಜಾ ನಟಿಸಿದ್ದರು. ಅವರಿಗೆ ಈ ಪಾತ್ರ ಚೆನ್ನಾಗಿ ಹೊಂದುತ್ತದೆ ಎನ್ನಿಸಿ ಆಯ್ಕೆ ಮಾಡಿಕೊಂಡೆವು’ ಎಂದಿದ್ದಾರೆ ಅವರು.

ಕಾಮಿಡಿ ರಿಯಾಲಿಟಿ ಶೋನ ನಟರಾದ ಗೋವಿಂದೇ ಗೌಡ, ಪ್ರಿಯಾಂಕಾ ಕಾಮತ್‌ ಮತ್ತಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಂಗಳೂರು, ಗದಗದ ಲಂಬಾಣಿ ತಾಂಡಾ ಮತ್ತು ಚಿಕ್ಕಮಗಳೂರಿನಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪ್ರಸನ್ನ ಕುಮಾರ್‌ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ರೆಕಾರ್ಡಿಂಗ್‌ ಮಾಡಲಾಗಿದೆ. ಅನನ್ಯಾ ಭಟ್‌, ಅನುರಾಧಾ ಭಟ್‌, ರಾಜೇಶ್‌ ಕೃಷ್ಣನ್‌, ಎಂ.ಡಿ. ಪಲ್ಲವಿ ಹಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು