News Karnataka Kannada
Monday, April 29 2024
ಸಾಂಡಲ್ ವುಡ್

ಸಮರ್ಥ್ ಚೊಚ್ಚಲ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಬಿಡುಗಡೆಗೆ ಸಿದ್ಧ

New Project 2021 12 06t151129.055
Photo Credit :

ಸ್ಯಾಂಡಲ್ ವುಡ್: ಟೈಟಲ್, ಟೀಸರ್ ಮೂಲಕ ಕುತೂಹಲ‌ ಮೂಡಿಸಿರುವ ಹೊಸಬರ ಸಿನಿಮಾ ಕ್ಯಾನ್ಸೀಲಿಯಂ. ಸಿನಿಮಾ‌ ರಸಿಕರಿಗೆ ಸೈನ್ಸ್ ಫಿಕ್ಷನ್ ಕಥಾಹಂದರದ  ಮೂಲಕ ಮನರಂಜನೆ ನೀಡಲು ರೆಡಿಯಾಗಿರುವ ಈ ಚಿತ್ರಕ್ಕೆ ಹೊಸ ಪ್ರತಿಭೆ ಸಮರ್ಥ್ ನಿರ್ದೇಶನವಿದೆ.
ಕ್ಯಾನ್ಸೀಲಿಯಂ ಸಮರ್ಥ್ ನಿರ್ದೇಶನದ ಚೊಚ್ಚಲ ಸಿನಿಮಾ. ಕಥೆ ಬರೆದು, ಡೈರೆಕ್ಟರ್ ಕ್ಯಾಪ್ ತೊಟ್ಟು ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ‌ ಮಿಂಚಿದ್ದಾರೆ ಸಮರ್ಥ್.ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಅನುಭವ ಇರುವ ಇವರಿಗೆ ಬಣ್ಣದ ಲೋಕದ ನಂಟು ಇದೇ ಮೊದಲು. ಕ್ಯಾನ್ಸೀಲಿಯಂ ಕಥೆ ಅರಳಿದ್ದು ಸುಮಾರು ಒಂಭತ್ತು ವರ್ಷಗಳ ಹಿಂದೆ ಆ ಕಥೆಗೆ ಸೈನ್ಸ್ ಫಿಕ್ಷನ್‌ ರೂಪ ಕೊಟ್ಟು ಅದನ್ನು ಸಿನಿಮಾ ರೂಪಕ್ಕೆ ತಂದು ನಿರ್ದೇಶನಕ್ಕೆ ಇಳಿದಿದ್ದು ಮೂರು ವರ್ಷದ ಹಿಂದೆ ಎನ್ನುತ್ತಾರೆ ನಿರ್ದೇಶಕ ಸಮರ್ಥ್. ಚಿತ್ರದಲ್ಲಿ ಸಮರ್ಥ್ ಹಾಗೂ ಸಹೋದರ ಪ್ರೀತಂ ಇಬ್ಬರು ನಾಯಕ‌ನಟರಾಗಿ ಅಭಿನಯಿಸಿದ್ದಾರೆ. ಇದೀಗ ಮೂರು ವರ್ಷದ ಪರಿಶ್ರಮ ಸಿನಿಮಾವಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದು ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ. ಇನ್ನೇನಿದ್ರು ಸಿನಿಮಾ ಬೆಳ್ಳಿತೆರೆ ಮೇಲೆ ಮೋಡಿ ಮಾಡೋದೊಂದೇ ಬಾಕಿ.

ಕ್ಯಾನ್ಸೀಲಿಯಂ ಟೈಟಲ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕ್ಯಾನ್ಸೀಲಿಯಂ ಎಂದರೆ ಉದ್ದೇಶ, ಪ್ಲ್ಯಾನ್ ಹೀಗೆ ನಾನಾ ಅರ್ಥಗಳನ್ನು ಒಳಗೊಂಡಿದೆ. ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ಕಥೆಗೆ ಈ ಹೆಸರು ಪೂರಕವಾಗಿದೆ ಎನ್ನುತ್ತದೆ ಚಿತ್ರತಂಡ. ಪ್ರಪಂಚದಲ್ಲಿ ಯಾವುದೇ ಘಟನೆಗಳು ನಡೆದರೂ ಅದಕ್ಕೊಂದು ವೈಜ್ಞಾನಿಕ ಕಾರಣವಿರುತ್ತೆ. ಅದರಂತೆ‌ ಸಿನಿಮಾದಲ್ಲಿ‌ ನಾಯಕರಿಬ್ಬರ ಸುತ್ತ‌ ಅಗೋಚರವಾಗಿ ಜರುಗುವ ಘಟನೆಗಳು ಅವರ‌ ಮೇಲೆ ಹೇಗೆ ಪರಿಣಾಮ ಬೀರುತ್ತೆ. ಘಟನೆಗಳ‌ ಕಾರಣ ಹುಡುಕಿ ಹೊರಟಾಗ ಏನೆಲ್ಲ ರೋಚಕತೆ ತೆರೆದುಕೊಳ್ಳುತ್ತೆ ಎನ್ನುವುದು ಸಿನಿಮಾ ಎಳೆ. ಇದನ್ನು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವ ಟ್ವಿಸ್ಟ್ ಟರ್ನ್ ಜೊತೆ ಕಟ್ಟಿಕೊಡಲಾಗಿದ್ಯಂತೆ.

ಚಿತ್ರದಲ್ಲಿ ಖುಷಿ ಹಾಗೂ ಅರ್ಚನಾ ನಾಯಕಿಯರಾಗಿ ನಟಿಸಿದ್ದು, ಜಗದೀಶ್ ಮಲ್ಮಾಡ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀತಾರಾಮ್ ಶಾಸ್ತ್ರಿ ಪ್ರೊಡಕ್ಷನ್ ಹೌಸ್  ಬ್ಯಾನರ್‌ನಡಿ‌ ನಿರ್ಮಾಣವಾಗಿರುವ ಈ ಚಿತ್ರಕ್ಕೆ
ಸಮರ್ಥ್ ಪತ್ನಿ ರೇಷ್ಮಾ ರಾವ್ ಕಾರ್ಯಕಾರಿ‌ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಉಳಿದಂತೆ ಸುದರ್ಶನ್ ಜಿ.ಕೆ ಕ್ಯಾಮೆರಾ ವರ್ಕ್, ದ್ವೈಪಾಯಣ್ ಸಿಂಘ ಸಂಗೀತ ‌ನಿರ್ದೇಶನ ಚಿತ್ರಕ್ಕಿದೆ.

ಚಿತ್ರರಸಿಕರಿಗೆ ಸೈನ್ಸ್ ಫಿಕ್ಷನ್ ಸಿನಿಮಾ‌ ಮೂಲಕ‌ ಮನರಂಜನೆ ನೀಡಲು, ಹೊಸಬಗೆಯ‌ ನಿರೂಪಣೆ, ತಾಂತ್ರಿಕ ಶ್ರೀಮಂತಿಕೆಯನ್ನು ಉಣ ಬಡಿಸಲು ಬರ್ತಿರುವ ಕ್ಯಾನ್ಸೀಲಿಯಂ ಚಿತ್ರ ಡಿಸೆಂಬರ್ 10ಕ್ಕೆ ತೆರೆಗೆ ಬರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು