ಸಾಂಡಲ್ ವುಡ್

ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದ ನಟ ವಸಿಷ್ಟ ಸಿಂಹ

ಮೈಸೂರು: ಚಾಮುಂಡಿಪುರಂ ಭಾಗವಾದ ಅಂದಾನಿ ವೃತ್ತದಲ್ಲಿರುವ ಹಳೆ ಶಾಲೆಯಾದ ವಾಣಿವಿದ್ಯಾಮಂದಿರದ ಶಾಲಾ ಮಕ್ಕಳಿಗೆ ನಟ ವಸಿಷ್ಟ ಸಿಂಹ ನೋಟ್ ಪುಸ್ತಕ, ಪೆನ್ ವಿತರಿಸಿದರು.

ಬಳಿಕ ಮಾತನಾಡಿ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು, ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದರೂ ಶಿಕ್ಷಣವಂತರಾಗಿದ್ದರೇ ಮಾತ್ರ ಉನ್ನತ ಸ್ಥಾನಕ್ಕೇರಿ ಸಾಧನೆ ಮಾಡಲು ಸಾಧ್ಯ. ಹಾಗಾಗಿ ಎಷ್ಟೇ ತೊಂದರೆಯಿದ್ದರೂ ಶಿಕ್ಷಣವನ್ನ ಮಕ್ಕಳು ಮೊಟಕುಗೊಳಿಸದೇ ಮುಂದುವರೆಸಬೇಕು, ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಆನ್ಲೈನ್ ತರಗತಿಗಳು ನಡೆದು ಮಕ್ಕಳು ಶಾಲೆಗೆ ಬರಲಾಗಿರಲಿಲ್ಲ ಈ ಬಾರಿ ಶಾಲಾ ಶೈಕ್ಷಣಿಕ ವರ್ಷ 15ದಿನಗಳ ಮುಂಚಿತವಾಗಿ ಪ್ರಾರಂಭಿಸಿರುವ ಶಿಕ್ಷಣ ಇಲಾಖೆ ನಡೆ ಸ್ವಾಗತಾರ್ಹ, ನಾನು ಕೂಡ ಚಾಮುಂಡಿಪುರಂ ವಿದ್ಯಾರಣ್ಯಪುರಂ ಬಡಾವಣೆಯಲ್ಲಿ ಆಡಿ ಬೆಳೆದವನು.

ಕಷ್ಟದ ದಿನಗಳು ಎಷ್ಟೇ ಎದುರಾದರೂ ಸಹ ವ್ಯಾಸಾಂಗ ಮಾಡುವುದನ್ನ ನಿಲ್ಲಿಸಲಿಲ್ಲ, ಬಾಲ್ಯದ ದಿನಗಳಲ್ಲಿ ಇತಿಹಾಸದ ಪುಸ್ತಕಗಳನ್ನ ಓದಿ ಮಾಹಿತಿ ತಿಳಿದುಕೊಳ್ಳುವಲ್ಲಿ ಹೆಚ್ಚು ಆಸಕ್ತಿ ಉತ್ಸಾಹ ನನ್ನಲ್ಲಿತ್ತು, ಪುಸ್ತಕವೇ ನನ್ನ ಅತ್ಯುತ್ತಮ ಸ್ನೇಹಿತ, ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಮತ್ತು ಅಶಕ್ತ ಮಕ್ಕಳಿಗೆ ನೋಟ್ ಪುಸ್ತಕ ಕಲಿಕಾ ಪಠ್ಯ ಸಾಮಗ್ರಿಗಳನ್ನು ನೀಡುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಪರಶುರಾಮ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ , ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಉದ್ಯಮಿ ಜಯರಾಮ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಕಾರ್ತಿಕ್, ಮುರಳಿಧರ್, ಎಸ್ ಎನ್ ರಾಜೇಶ್ , ನವೀನ್ ಕೆಂಪಿ , ಇತರರು ಹಾಜರಿದ್ದರು.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

2 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

3 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

3 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

3 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

4 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

4 hours ago