News Karnataka Kannada
Wednesday, May 08 2024
ಸಾಂಡಲ್ ವುಡ್

ವಿದೇಶಿ ಚಿತ್ರೀಕರಣ ಮತ್ತಷ್ಟು ಸರಳ ಸುಲಭ – ‘ಫ್ಯಾಷನ್ ಎಬಿಸಿಡಿ’ ಮಾಡ್ತಿದೆ ಹೊಸ ಪ್ರಯೋಗ

New Project 2021 09 30t202335.464
Photo Credit :

ಬೆಂಗಳೂರು : ಫಾರಿನ್ ನಲ್ಲಿ ಒಂದು ಹಾಡು, ಹೋಗ್ಲಿ ಒಂದು ದೃಶ್ಯವಾದ್ರೂ ಚಿತ್ರೀಕರಿಸುವ ಹಂಬಲ ಯಾವ ಸಿನಿಮಾ ನಿರ್ಮಾತೃಗೆ ಇರೋದಿಲ್ಲ ಹೇಳಿ. ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಪ್ರತಿಯೊಬ್ಬ ನಿರ್ದೇಶಕನಿಗೂ ಇಂತಹದೊಂದು ಕನಸು ಮನದಲ್ಲಿ ಇದ್ದೆ ಇರುತ್ತೆ. ಇಂತಹ ಕನಸಿಗೆ ನಿರ್ಮಾಪಕರು ಬಲ ತುಂಬಬೇಕಷ್ಟೇ. ನಿರ್ಮಾಪಕರು ಹಣ ಸುರಿಯೋದಿಕ್ಕೂ ರೆಡಿ ಅನ್ನಿ ಅಲ್ಲೊಂದಿಷ್ಟು ಕಾನೂನು ನಿಯಮಗಳು ಮುಂದೆ ನಿಲ್ತಾವೆ. ಅವುಗಳೆಲ್ಲಾವನ್ನು ಸೆಟಲ್ಡ್ ಮಾಡಿ, ಸಬ್ಸಿಡಿ ಕೊಡಿಸುವ ಹೊಸ ಯೋಜನೆಯನ್ನು ಒಂದು ಸಂಸ್ಥೆ ಹುಟ್ಟುಹಾಕಿದೆ. ಅದುವೇ ಫ್ಯಾಷನ್ ಎಬಿಸಿಡಿ.

ಏನಿದು ಫ್ಯಾಷನ್ ಎಬಿಸಿಡಿ ಸಂಸ್ಥೆ?

ಕನ್ನಡಿಗರ ಶ್ರಮ, ಬಲದಿಂದ ನರ‍್ಮಾಣಗೊಂಡಿರುವ ಸಂಸ್ಥೆ ‘ಫ್ಯಾಷನ್ ಎಬಿಸಿಡಿ’. ಫ್ಯಾಷನ್ ಇವೆಂಟ್ ಗಳನ್ನು ಆಯೋಜಿಸಿ ಯಶಸ್ವಿಯಾಗಿರೋ ಈ ಸಂಸ್ಥೆ ಇದೀಗ ಚಿತ್ರರಂಗದತ್ತ ಹೆಜ್ಜೆ ಇಟ್ಟಿದೆ. ಈ ಸಂಸ್ಥೆಯ ನರ‍್ಮಾತೃ ಚರಣ್ ಸುರ‍್ಣ. ಸಿನಿಮಾ ಮೇಲಿರುವ ಚರಣ್ ಆಸಕ್ತಿ ಹೊಸ ಪ್ರಯೋಗದತ್ತ ಹೆಜ್ಜೆ ಹಾಕುವಂತೆ ಮಾಡಿದೆ.

ಚರಣ್ ಕಟ್ಟಿಬೆಳೆಸಿರುವ ‘ಫ್ಯಾಷನ್ ಎಬಿಸಿಡಿ’ ಸಂಸ್ಥೆ ನೊವೆಲ್ ವರ್ಕ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ. ವಿಶ್ವಮಟ್ಟದಲ್ಲಿ ಭಾರತೀಯ ಚಿತ್ರಗಳಿಗೆ ಸಬ್ಸಿಡಿ ಕೊಡಿಸುವ ಕೆಲಸ ಮಾಡ್ತಾ ಇದೆ ನೊವೆಲ್ ವರ್ಕ್ಸ್. ಇಂತಹ ಸಂಸ್ಥೆಯೊಂದಿಗೆ ಈಗ ‘ಫ್ಯಾಷನ್ ಎಬಿಸಿಡಿ’ ಕೈ ಜೋಡಿಸಿದೆ. ಈ ಮೂಲಕ ನೆರೆ ರಾಜ್ಯ ಹಾಗೂ ವಿದೇಶಗಳಲ್ಲಿ ಶೂಟಿಂಗ್ ಮಾತ್ರವಲ್ಲ ಸಬ್ಸಿಡಿ ಹಣ ಕೊಡಿಸುವ ಕೆಲಸಕ್ಕೆ ಈ ಸಂಸ್ಥೆ ರೆಡಿಯಾಗಿದೆ. ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ಮಾಡಬೇಕು ಅಂದ್ರೆ ಅಲ್ಲೊಂದು ಕಾನೂನಿನ ಪ್ರಕ್ರಿಯೆ ಎದುರಾಗ್ತಾವೆ. ಈ ಪ್ರಕ್ರಿಯೆಗಳನ್ನು ಸಿನಿಮಾತಂಡ ಮಾಡುವಷ್ಟರಲ್ಲಿ ಸಾಕ್ ಸಾಕು ಅನಿಸುತ್ತದೆ. ಹೀಗಾಗಿ ಸಿನಿಮಾತಂಡಗಳಿಗೆ ಸುಲಭವಾಗುವಂತೆ ಈ ಎಲ್ಲವನ್ನು ಕ್ಲಿಯರ್ ಮಾಡಿ ಶೂಟಿಂಗ್ ಗೆ ಬೇಕಾದ ವ್ಯವಸ್ಥೆಗಳನ್ನು ನೊವೆಲ್ ಸಂಸ್ಥೆಯ ಸಹಯೋಗದೊಂದಿಗೆ ‘ಫ್ಯಾಷನ್ ಎಬಿಸಿಡಿ’ ಮಾಡಲಿದೆ. ಜೊತೆಗೆ ಆಯಾ ರಾಜ್ಯ ಹಾಗೂ ದೇಶಗಳಲ್ಲಿ ಸಿಗುವ ಸಬ್ಸಿಡಿ ಹಣವನ್ನು ಕೊಡಿಸುತ್ತದೆ ಈ ಸಂಸ್ಥೆ.

ನೊವೆಲ್ ವರ್ಕ್ಸ್ ಸಂಸ್ಥೆ ಜಗತ್ತಿನ ಐವತ್ತು ದೇಶಗಳೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದೆ. ಸಿನಿಮಾ ತಂಡಗಳು ‘ಫ್ಯಾಷನ್ ಎಬಿಸಿಡಿ’ ಸಂಸ್ಥೆಯನ್ನು ಸಂರ‍್ಕಿಸಿದರೆ ನೀಟಾಗಿ ವಿದೇಶಕ್ಕೆ ಕಳುಹಿಸಿ ಚಿತ್ರೀಕರಣ ನಡೆಸಿಕೊಂಡು ವಾಪಾಸಾಗುವ ಸುಯೋಗ ಲಭಿಸುತ್ತದೆ. ಅಮೆರಿಕಾ, ರಷ್ಯಾದಂಥಾ ದೇಶಗಳಲ್ಲಿ ಹೋಗಿ ಶೂಟಿಂಗ್ ಮಾಡಿದ್ರೆ ಹೆಚ್ಚು ರ‍್ಸೆಂಟಿನ ಸಬ್ಸಿಡಿ ಸಿಗುತ್ತದೆ. ಒಂದು ವೇಳೆ ಅಲ್ಲಿನ ಟೂರಿಸಂಗೆ ಅನುಕೂಲವಾಗುವಂತೆ ಸಂಪರ‍್ಣವಾಗಿ ಅಲ್ಲಿಯೇ ಚಿತ್ರೀಕರಣ ನಡೆಸಿದರಂತೂ ನೂರಕ್ಕೆ ನೂರು ಸಬ್ಸಿಡಿ ಕೊಡಿಸುವ ಭರವಸೆಯೂ ‘ಫ್ಯಾಷನ್ ಎಬಿಸಿಡಿ’ ಸಂಸ್ಥೆಗಿದೆ. ಶೀಘ್ರದಲ್ಲಿಯೇ ಬೆಂಗಳೂರಿನಲ್ಲೊಂದು ಇವೆಂಟ್ ಮಾಡಿ, ಅದಕ್ಕೆ ನೊವೆಲ್  ವರ್ಕ್ಸ್  ಸಂಸ್ಥೆಯವರನ್ನು ಕರೆಸಿ ಕನ್ನಡ ಸಿನಿಮಾ ನಿರ್ಮಾಪಕರನ್ನು ಸೇರಿಸುವ ಯೋಜನೆಯೂ ಚರಣ್ ಸುರ‍್ಣರದ್ದಾಗಿದೆ.
ಚರಣ್ ಈ ಹೊಸ ಪ್ರಯೋಗ ಗೊತ್ತಾಗ್ತಿದ್ದಂತೆ ಕೆಲ ಸಿನಿಮಾ ತಂಡಗಳು ಚರಣ್ ಅವರನ್ನು ಅಪ್ರೋಚ್ ಮಾಡಿವೆ. ಸದ್ಯದಲ್ಲಿ ಆ ಎಲ್ಲಾ ಪ್ರಾಜೆಕ್ಟ್ ಫೈನಲ್ ಆಗಲಿವೆ. ಸಣ್ಣದೊಂದು ಫ್ಯಾಷನ್ ಇವೆಂಟ್ ನಿಂದ ಆರಂಭವಾದ ಈ ಸಂಸ್ಥೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿದ್ದು, ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಲಿದೆ ಅನ್ನೋದು ಪಕ್ಕ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು