ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಒಳ್ಳೆ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಇದೇ ಸಾಲಿಗೆ ರತ್ನನ್ ಪ್ರಪಂಚ ಸಿನಿಮಾ ಕೂಡ ಸೇರಿದೆ.
ಅಮೆಜಾನ್ ಪ್ರೈಂನಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಈಗಾಗಲೇ ಸಿನಿಮಾ ಜನರ ಮನ ಮುಟ್ಟಿದೆ. ಒಳ್ಳೊಳ್ಳೆ ಸಿನಿಮಾಗಳು ಥಿಯೇಟರ್ಗಳಲ್ಲೇ ರಿಲೀಸ್ ಆಗುತ್ತವೆ. ಒಟಿಟಿಯಲ್ಲಿ ರಿಲೀಸ್ ಆಗೋದಿಲ್ಲ ಎನ್ನೋದಕ್ಕೆ ಖಡಕ್ ಉತ್ತರದಂತೆ ರತ್ನನ್ ಪ್ರಪಂಚ ರಿಲೀಸ್ ಆಗಿದೆ.
ಅಭಿಮಾನಿಗಳು ಸಿನಿಮಾವನ್ನು ಈಗಾಗಲೇ ಒಪ್ಪಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಸ್ಟೇಟಸ್, ಸ್ಟೋರಿಗಳಲ್ಲಿಯೂ ಈ ಸಿನಿಮಾ ರಿವ್ಯೂಗಳೇ ಕಾಣುತ್ತಿವೆ.
ಸಿನಿಮಾ ಯಶಸ್ಸಿನ ಬಗ್ಗೆ ನಟ ಡಾಲಿ ಧನಂಜಯ್ ಮಾತನಾಡಿದ್ದು, ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದಿದ್ದಾರೆ. ಹೀಗೆ ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಿ, ಪ್ರಪಂಚವೇ ರತ್ನನ ಪ್ರಪಂಚವನ್ನು ಪ್ರೀತಿಸುತ್ತಿದೆ ಎಂದು ಹೇಳಿದ್ದಾರೆ.