ಮೇಕೆದಾಟು ಯೋಜನೆಯ ಹೋರಾಟಕ್ಕೆ ಬೆಂಬಲ ಸೂಚಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಬೆಂಗಳೂರು : ಮೇಕೆದಾಟು ಯೋಜನೆಯ ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಈ ಕುರಿತು ಹಿರಿಯ ನಟಿಯರಾದ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮತ್ತು ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಕರೊನಾ ಹಿನ್ನೆಲೆ ಸರ್ಕಾರ ಜಾರಿ ಮಾಡಿರುವ ಸರ್ಕಾರದ ರೂಲ್ಸ್ ಅನ್ನು ಫಾಲೋ ಮಾಡ್ತೀವಿ. ಹಾಗೇ ಕರ್ಫ್ಯೂ ಇಲ್ಲದಿರುವ ದಿನ ಮೇಕೆದಾಟು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಕೊಡ್ತೀವಿ. ಪಾದಯಾತ್ರೆಗೆ ಕಲಾವಿದರನ್ನ ನಾವು ಕರೆಯುತ್ತೇವೆ. ಈ ಹಿಂದೆ ಕೂಡ ಮಹಾದಾಯಿ, ಕಾವೇರಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ವಿ. ನಾಡು-ನುಡಿ-ಜಲದ ವಿಚಾರ ಬಂದ್ರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವಾಗಲೂ ಬೆಂಬಲ ನೀಡುತ್ತೆ ಎಂದರು.

ಇದೊಂದು ವಿಶಿಷ್ಟವಾದ ಹೋರಾಟ. ನಮ್ಮ ನೀರಿಗಾಗಿ ನಾವು ಹೋರಾಟ ಮಾಡಬೇಕು. ಎಲ್ಲಾ ಕೇಸ್​ಗಳು ಈಗ ಮುಕ್ತಾಯವಾಗಿವೆ. ಕನ್ನಡ ಚಿತ್ರರಂಗಕ್ಕೆ ಒಂದು ಪರಂಪರೆ ಇದೆ. ಡಾ. ರಾಜ್ ಕುಮಾರ್ ಅವರು ಆ ಪರಂಪರೆಯನ್ನ ಹಾಕಿಕೊಟ್ಟಿದ್ದಾರೆ. ಐತಿಹಾಸಿಕ ಹೋರಾಟವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಮ್ಮಿಕೊಂಡಿದ್ದಾರೆ. ಈ ಹೋರಾಟಕ್ಕೆ ಎಲ್ಲರೂ ಬೆಂಬಲ ಕೊಡಬೇಕು ಅಂತ ಮನವಿ ಮಾಡ್ತೀವಿ. ನೀರು ಇಲ್ಲದ ಸ್ಥಿತಿ ಬಂದಿದೆ. ಮೇಕೆದಾಟು ಯೋಜನೆಯಿಂದ ನೀರು ಸಿಗಲಿದೆ ಎಂದು ಜಯಮಾಲ ಹೇಳಿದರು.

ನಟಿ ಉಮಾಶ್ರೀ ಮಾತನಾಡಿ, ಮೇಕೆದಾಟು ಹೋರಾಟಕ್ಕೆ ವಾಣಿಜ್ಯ ಮಂಡಳಿ ಬೆಂಬಲ ನೀಡಿದ್ದು ಖುಷಿಯಾಗಿದೆ. ರಾಕ್​ಲೈನ್ ವೆಂಕಟೇಶ್ ಅವರು ಪತ್ರ ಕಳುಹಿಸಿದ್ದಾರೆ. ಕಲಾವಿದರು ಇಂತಹ ಸಂದರ್ಭಗಳಲ್ಲಿ ಋಣ ಸಂದಾಯ ಮಾಡಬೇಕು. ಜನರಿಂದ ನಾವು ಎಲ್ಲವನ್ನೂ ಪಡೆದಿದ್ದೇವೆ. ಜನರಿಗಾಗಿ ಹೋರಾಟ ಮಾಡಬೇಕು. ಎಲ್ಲಾ ನಾಯಕ-ನಾಯಕಿಯರು ಸ್ವಯಂಪ್ರೇರಿತರಾಗಿ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

ನಟ ಮದನ್ ಪಟೇಲ್ ಮಾತನಾಡಿ, ಇದು ಯಾವುದೇ ರಾಜಕೀಯ ಬಣ್ಣವಿಲ್ಲದ ಹೋರಾಟ. ನಮ್ಮ ನೀರು, ನಮ್ಮ ಹಕ್ಕು. ಈ ಹೋರಾಟ ಕನ್ನಡಿಗರ ಪರವಾಗಿದೆ ಎಂದರು.

Gayathri SG

Recent Posts

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

13 mins ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

30 mins ago

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

45 mins ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

1 hour ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

1 hour ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

2 hours ago