ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇಂದು ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ನೆನ್ನೆಯೇ ಚಿತ್ರತಂಡ ಹೇಳಿತ್ತು.
ಹೀಗಾಗಿ ಅಭಿಮಾನಿಗಳು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ಗಾಗಿ ಕಾಯುತ್ತಿದ್ದರು. ಅಂತೂ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಫೆಬ್ರವರಿ 24 ರಂದು ವಿಕ್ರಾಂತ್ ರೋಣ ತೆರೆ ಮೇಲೆ ಬರಲಿದೆ.
ಈ ವಿಷಯವನ್ನು ಸ್ವತಃ ಸುದೀಪ್ ಟ್ವೀಟ್ ಮಾಡಿದ್ದು, ವಿಕ್ರಾಂತ್ ರೋಣ ಫೆ.24ಕ್ಕೆ ನಿಮ್ಮ ಮುಂದೆ ಬರಲಿದೆ ಎಂದು ಹೇಳಿಕೊಂಡಿದ್ದಾರೆ.
ರಿಲೀಸ್ ಡೇಟ್ ತೋರಿಸೋಕೆ ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕಿಚ್ಚ ಬೈಕ್ ಏರಿ ಕುಳಿತಿರೋ ಪೋಸ್ಟರ್ ಕೂಡ ಇದೆ. ಈ ಜಗತ್ತಿಗೆ ಒಬ್ಬ ಹೊಸ ಹೀರೋ ಸಿಗಲಿದ್ದಾನೆ ಎಂದು ಸುದೀಪ್ ಕ್ಯಾಪ್ಷನ್ ಹಾಕಿದ್ದು, ಜನರ ಕುತೂಹಲ ಇನ್ನಷ್ಟು ಹೆಚ್ಚಿದೆ.
The World Gets A New Hero On Feb 24, 2022 #VikrantRonaOnFeb24 @anupsbhandari @JackManjunath @Asli_Jacqueline @nirupbhandari @AJANEESHB @neethaofficial @shaliniartss @Alankar_Pandian @Kichchacreatiin @ZeeStudios_ @TSeries @LahariMusic @VikrantRona #VikrantRona pic.twitter.com/V2hER6qFeb
— Kichcha Sudeepa (@KicchaSudeep) December 7, 2021