News Karnataka Kannada
Monday, April 29 2024
ಸಾಂಡಲ್ ವುಡ್

ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಕಣ್ಣೀರು ಸುರಿಸಿದ ನಟಿ ಹರ್ಷಿಕಾ ಪೂನಚ್ಚ

Harshika Poonacha
Photo Credit :

ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ನಟಿ ನಟಿ ಹರ್ಷಿಕಾ ಪೂನಚ್ಚ ಕಣ್ಣೀರು ಸುರಿಸಿದ್ದಾರೆ.ಇನ್ ಸ್ಟಾದಲ್ಲಿ ಲೈವ್ ಬಂದು ಮಾತನಾಡಿದ ಅವರು, ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಪ್ಪು ಸರ್ ಅವರ ಮನೆಯಲ್ಲಿ ಇದ್ದಾರೆ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀವಿ ಅಂತಾನೇ ನನಗೆ ಈಗಲೂ ಅನಿಸುತ್ತಿದೆ ಎಂದು ಹೇಳಿದ್ದಾರೆ.

ಅಪ್ಪು ಸರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬದವರ ಜೊತೆ ಇದ್ದಾರೆ. ಅವರು ಸಿಕ್ಕಾಗ ಮಾತಾಡಿಸಬೇಕು ಅಂತೆಲ್ಲ ಅನಿಸುತ್ತಿದೆ. ಕ್ಯಾರವಾನ್ ಅಥವಾ ವ್ಯಾನಿಟಿ ವ್ಯಾನ್ ಅನ್ನು ಮೊದಲು ಪರಿಚಯಿಸಿದ್ದು ಅಪ್ಪು ಸರ್. 15-16ನೇ ವಯಸ್ಸಿನಲ್ಲಿ ನನ್ನ ಎರಡನೇಯ ಸಿನಿಮಾ ಜಾಕಿ ಶೂಟಿಂಗ್ ಸಮಯದಲ್ಲಿ ಸೆಟ್ ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ಅಪ್ಪು ಸರ್ ಅವರು. ಯಾಕಮ್ಮಾ ಹರ್ಷಿಕಾ ನನ್ನ ಕ್ಯಾರವನ್ ನಲ್ಲಿ ಹೋಗಿ ಕುಳಿತುಕೊಳ್ಳಬಹುದಲ್ವಾ..? ಎಂದು ಹೇಳಿದ್ದರು. ಆ ಸಮಯದಲ್ಲಿ ಸ್ಟಂಟ್, ಫೈಟ್ ನಡೀತಾ ಇತ್ತು. ಧೂಳು ತುಂಬಿತ್ತು. ಹೀಗಾಗಿ ಅಪ್ಪು ಸರ್ ನನ್ನ ಅಲ್ಲಿಂದ ಹೋಗುವಂತೆ ಹೇಳಿದ್ದರು.

ನೀನು ಹೋಗು ಅಲ್ಲಿ ಡ್ರೈಫ್ರೂಟ್ಸ್, ಹಣ್ಣುಗಳಿವೆ. ನಿಂಗೆ ಏನು ಬೇಕು ತಿನ್ನು, ರೆಸ್ಟ್ ಮಾಡು ಅಂತೆಲ್ಲ ಹೇಳಿದರು. ಇದೇ ಮಾತನ್ನು ನನ್ನ ತಾಯಿಗೂ ಹೇಳಿದರು. ಹೀಗಾಗಿ ನಂಗೆ ಹಾಗೂ ನನ್ನ ಅಮ್ಮನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು