ಬೆಂಗಳೂರು: ತಮ್ಮ ಪುತ್ರ ಗುರುರಾಜ್ ನಟಿಸಿರುವ ‘ಕಾಗೆ ಮೊಟ್ಟೆ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕಣ್ತುಂಬಿಕೊಂಡಿರುವ ನಟ ಜಗ್ಗೇಶ್ ಭಾವುಕರಾಗಿದ್ದಾರೆ.
ಕಾಗೆ ಮೊಟ್ಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋ ‘ಕಾಗೆಮೊಟ್ಟೆ’ ನೋಡಿ ಜನ ಎಂಜಾಯ್ ಮಾಡ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿರುವ ಜಗ್ಗೇಶ್ ಸಂತಸ ಹಂಚಿಕೊಂಡಿದ್ದಾರೆ. ”ಈ ಚಪ್ಪಾಳೆಯ ಹರ್ಷೋಧ್ಘಾರ ನನ್ನ ಕುಟುಂಬದ ಮೇಲೆ ಕನ್ನಡಿಗರ ಪ್ರೀತಿ ನೋಡಿ ಗುರುರಾಜನ ಅಪ್ಪನಾಗಿ ಕಣ್ಣು ಒದ್ದೆಯಾಯಿತು. ‘ಭಂಡ ನನ್ನ ಗಂಡ’ ದಿನಗಳಲ್ಲಿ ಕಂಡ ಆನಂದ ನೆನಪಾಯಿತು. ಕೋಟಿ ವಂದನೆಗಳು ಆತ್ಮೀಯ ಹೃದಯಗಳಿಗೆ” ಎಂದು ಜಗ್ಗೇಶ್ ಕೃತಜ್ಞತೆ ವ್ಯಕ್ತಪಡಿಸಿದರು.