ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಸುಮಾರು ಎರಡು ವಾರ ಕಳೆದಿದ್ದರು ಕೂಡ ಅವರನ್ನು ಮರೆಯುವುದು ಅಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿಒಂದಲ್ಲಾಒಂದು ಅವರ ಹಳೇ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ.
ಇದೀಗ ಅವರು ಮಕ್ಕಳ ದಿನಾಚರಣೆಗೆ ವಿಶ್ ಮಾಡಿರುವ ಹಳೆ ವಿಡಿಯೋ ಕೂಡ ಇಂದು ಭಾರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ಅಭಿಮಾನಿಗಳು ಕಣ್ಣೀರು ಸುರಿಸಿದ್ದಾರೆ.
ʼಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಹ್ಯಾಪಿ ಚಿಲ್ಡ್ರನ್ಸ್ ಡೇʼ ಎಂದು ಪುನೀತ್ ವಿಶ್ ಮಾಡಿರುವ ದೃಶ್ಯ ಇದಾಗಿದೆ.
ಪುನೀತ್ ಅವರಿಗೆ ಮಕ್ಕಳೆಂದರೆ ತುಂಬಾ ಇಷ್ಟವಾಗಿತ್ತು. ಅದೆಷ್ಟೋ ಮಕ್ಕಳಿಗೂ ಕೂಡ ಪುನೀತ್ ಫೆವರೆಟ್ ಹೀರೋ ಆಗಿದ್ದರು. ಅಪ್ಪು ನಿಧನದ ಸುದ್ದಿ ಕೇಳಿ ಅನೇಕ ಮಕ್ಕಳು ಕೂಡ ಬಿಕ್ಕಿ ಬಿಕ್ಕಿ ಅತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು.
https://youtu.be/wfsBjiH_TPI