ತೋತಾಪುರಿ ಗಾಗಿ ಒಂದಾದ ಅನಿವಾಸಿ ಕನ್ನಡ ಮನಸುಗಳು- ಜಗ್ಗೇಶ್ ಜೊತೆ ವರ್ಚ್ಯುಯಲ್ ಕಾರ್ಯಕ್ರಮ ಯಶಸ್ವಿ

ಸ್ಯಾಂಡಲ್‍ವುಡ್: ಬೃಹತ್ ಹಾಗು ಮನಸೆಳೆಯೋ ಸೆಟ್, ಅದರೊಳಗೆ ಅಡಕವಾಗಿದ್ದ ಎಲ್ಇಡಿ ಪರದೆ. ಅಟ್ರ್ಯಾಕ್ಟಿವ್ ಆಗಿ ಡಿಸೈನ್ ಮಾಡಿದ್ದ ವೇದಿಕೆ, ಒಂದೇ ಕಾರ್ಯಕ್ರಮದಲ್ಲಿ ಒಂದಾದ ನಾನಾ ದೇಶಗಳ ಕನ್ನಡ ಮನಸ್ಸುಗಳು…ಇವರೊಟ್ಟಿಗೆ ಮಾತುಕತೆಗಿಳಿದ ನವರಸ ನಾಯಕ ಜಗ್ಗೇಶ್ ಇವೆಲ್ಲವೂ  ಕಂಡಿದ್ದು ತೋತಾಪುರಿ’ ಸಿನೆಮಾದ  ವರ್ಚುವಲ್ ಗ್ಲೋಬಲ್ ಮೀಟ್ ಕಾರ್ಯಕ್ರಮದಲ್ಲಿ.  ಹೌದು ವಿಜಯಪ್ರಸಾದ್ ನಿರ್ದೇಶನವಿರುವ ತೋತಾಪುರಿ ಚಿತ್ರದ ಸಧ್ಯ ಎಲ್ಲರ ಗಮನ ತನ್ನತ್ತ ಸೆಳೆದಿದ್ದು ಬಿಡುಗಡೆಗೂ ಸಜ್ಜಾಗ್ತಿದೆ. ಈ ಮಧ್ಯೆ ಇತ್ತಿಚಿಗಷ್ಟೇ ಚಿತ್ರದ ಬಾಗ್ಲು ತೆಗಿ ಮೇರಿ ಜಾನ್’ ಹಾಡು  ರಿಲೀಸ್ ಆಗು ಮಿಲಿಯನ್ಗಟ್ಟಲೆ ಹಿಟ್ ದಾಖಲಿಸಿತ್ತು. ಈ ಖುಷಿಯನ್ನ ಸೆಲೆಬ್ರೇಟ್ ಮಾಡಲು ವಿದೇಶಿ ಕನ್ನಡಿಗರೆಲ್ಲಾ ಒಟ್ಟಾಗಿ ವರ್ಚುವಲ್ ಗ್ಲೋಬಲ್ ಮೀಟ್  ಕಾರ್ಯಕ್ರಮವನ್ನ ಭಾನುವಾರ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ನವರಸ ನಾಯಕ ಜಗ್ಗೇಶ್ ಹಾಜರಾಗೋ ಮೂಲಕ ಅಲ್ಲಿನ ಅಭಿಮಾನಿಗಳಿಗೆ ಹಬ್ಬದೂಟದ ಸಂಭ್ರಮ ನೀಡಿದ್ದಾರೆ.

ಸತತವಾಗಿ ಮೂರುವರೆ ತಾಸು ನಡೆದ ಈ ಕಾರ್ಯಕ್ರಮದಲ್ಲಿ  ಜಗ್ಗೇಶ್ ಸಿನಿಯಾನ, ಅವರ ಕುಟುಂಬ,  ದಾಂಪತ್ಯ,  ಕನ್ನಡ ಭಾಷೆ, ಹೋರಾಟ, ಡಾ.ರಾಜ್ಕುಮಾರ್ ಅವರೊಂದಿಗಿನಿ ಒಡನಾಟ, ಪುನೀತ್ ಅವರೊಟ್ಟಿಗೆ ಸಾಗಿದ ದಿನಗಳ ಮೆಲುಕು, ಹಾಗು ಅವರ ಸಿನೆಮಾದ ಕಾಮಿಡಿಗಳು, ಹಾಡು ಹಾಗೂ ತೋತಾಪುರಿ ಚಿತ್ರದ ಕುರಿತು ಸಾಕಷ್ಟು ವಿಚಾರಗಳನ್ನ ಹಂಚಿಕೊಳ್ಳೋದ್ರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ನಾನಾ ದೇಶಗಳಲ್ಲಿ ನೆಲೆಸಿರೋ ಅನಿವಾಸಿ ಕನ್ನಡಿಗರ ಪ್ರಶ್ನೆಗಳಿಗೆ ಉತ್ತರ ನೀಡೋ ಮೂಲಕ ವಿದೇಶಿ ಕನ್ನಡಿಗರ ಮನಸುಗಳಿಗೆ ಲಗ್ಗೆ ಇಟ್ಟರು.

ಕೆನಡಾದ ಡ್ರೀಮ್ ಮೀಡಿಯಾ ಆಯೋಜಿಸದ್ದ ಈ ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ಜಗ್ಗೇಶ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಈ ಥರದ ಕಾರ್ಯಕ್ರಮ ಬಹುಶಃ ಕನ್ನಡದ ಮಟ್ಟಿಗೆ ಇದೇ ಮೊದಲು. ತಾಂತ್ರಿಕತೆ ಬೆಳೆದಂತೆ ಅದನ್ನು ಬಳಸಿಕೊಳ್ಳುತ್ತಾ ಸಾಗಬೇಕು. ಆಗಲೇ ನಾವು ಈ ಟ್ರೆಂಡ್ ಜೊತೆ ಸಾಗಲು ಸಾಧ್ಯ ಎಂದು ಹೇಳಿದ ಜಗ್ಗೇಶ್, ದೇಶ-ವಿದೇಶಗಳಲ್ಲಿ ತೋತಾಪುರಿ ಹಾಡು ಸಖತ್ ಹಿಟ್ ಆಗಿದೆ. ಈಗಾಗಲೇ ಮಿಲಿಯನ್ಗಟ್ಟಲೆ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ನೋಡಿ ಹರಸಿ ಎಂದರು.

ತೋತಾಪುರಿ  ಚಿತ್ರಕ್ಕೆ ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಬಂಡವಾಳ ಹೂಡಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನವರಸ ನಾಯಕನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಸೋಂಕು ಪತ್ತೆ

 

Swathi MG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

3 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

3 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

3 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

4 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

5 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

5 hours ago