News Karnataka Kannada
Wednesday, May 01 2024
ಸಾಂಡಲ್ ವುಡ್

ಟ್ರೇಲರ್ ನಿಂದಲೇ ಗಮನ ಸೆಳೆದಿದ್ದ ಸೈಕೋ ಸಸ್ಪೆನ್ಸ್ ಥ್ರಿಲ್ಲರ್ ʻಮೋಕ್ಷʼ ತೆರೆಗೆ..!

Moksha Movie
Photo Credit : News Kannada

ಸ್ಯಾಂಡಲ್‌ವುಡ್‌: ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಮೋಕ್ಷ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಪೋಸ್ಟರ್ ನೋಡಿದಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದಂತ ಸಿನಿಮಾವಿದು. ಮಾಸ್ಕ್ ಮ್ಯಾನ್ ಮೂಲಕವೇ ಸಿನಿಮಾ ಸಾಗಲಿದೆ. ಪೋಸ್ಟರ್, ಟ್ರೇಲರ್ ನಿಂದಲೇ ಗಮನ ಸೆಳೆದಿರೋ ಸಿನಿಮಾ ಈಗಾಗಲೇ ಸಾಕಷ್ಟು ಬಝ್ ಕ್ರಿಯೇಟ್ ಮಾಡಿದೆ.

ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದ್ರು ಸಹ ಪ್ರೀತಿ, ಕೌಟುಂಬಿಕ ಮೌಲ್ಯಗಳನ್ನ ಒಳಗೊಂಡಿದೆ. ಮುಖವಾಡ ಧರಿಸಿದ ವ್ಯಕ್ತಿಯೇ ಈ ಸಿನಿಮಾಗೆ ಮುಖ್ಯವಾಗಿದ್ದಾನೆ. ಟ್ರೇಲರ್ ನೋಡಿದವರಿಗೆ ಅದು ಈಗಾಗಲೇ ತಿಳಿದಿದೆ. ಆ ವ್ಯಕ್ತಿ ಯಾರು..? ಆ ವ್ಯಕ್ತಿ ಜನರಿಗಾಗಿ ಏನು ಮಾಡಲು ಹೊರಟಿದ್ದಾನೆ ಎಂಬೆಲ್ಲ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಹೀಗಾಗಿ ಸಿನಿಮಾ ನೋಡುವ ಕುತೂಹಲ ಸಹಜವಾಗಿಯೇಉದ್ಭವಿಸಿದೆ. ಅದಕ್ಕೆಲ್ಲಾ ಉತ್ತರ ನಾಳೆ ಬೆಳ್ಳಿತೆರೆಯ ಮೂಲಕ ಸಿಗಲಿದೆ.

ನಿರ್ದೇಶಕ ಸಮರ್ಥ್ ಮೂಲತಃ ಇಂಜಿನಿಯರ್ ಆಗಿದ್ದವರು. ಆದ್ರೆ ಸಿನಿಮಾ ಆಸಕ್ತಿಯಿಂದ ಆ ಕೆಲಸ ಬಿಟ್ಟು ಸಿನಿಮಾದ ಹಾದಿ ಹಿಡಿದವರು. ಅಂಕೋಲಾ ಮೂಲದ ಸಮರ್ಥ ನಾಯ್ಕ ಅವರಿಗೆ ನೂರಾರು ಜಾಹೀರಾತುಗಳ್ನು ಮಾಡಿರುವ ಅನುಭವವಿದೆ. ಇನ್ನು ಸಮರ್ಥ ನಾಯಕ್ ಬರೀ ನಿರ್ದೇಶನವಷ್ಟೇ ಅಲ್ಲ ಚಿತ್ರಕಥೆ, ನಿರ್ಮಾಣದ ಹೊಣೆಯನ್ನು ಈ ಸಿನಿಮಾಗಾಗಿ ಹೊತ್ತಿದ್ದಾರೆ. ತಮ್ಮ ಎಸ್.ಜಿ.ಎನ್. ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಿಸಿರುವ ಚೊಚ್ಚಲ ಚಿತ್ರದ ಬಿಡುಗಡೆಗೆ ಇದೀಗ ಸಮರ್ಥ ಸಜ್ಜಾಗಿದ್ದಾರೆ.

ಚಿತ್ರಕ್ಕೆ ಗುರುಪ್ರಶಾಂತ್ ರೈ, ಕಿರಣ್ ಹಂಪಾಪುರ, ಜೋಮ್ ಜೋಸಫ್ ಕ್ಯಾಮೆರಾ ಹಿಡಿದಿದ್ದಾರೆ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಭೂಮಿ, ಪ್ರಶಾಂತ್  ನಟನ ಚಿತ್ರದ ತಾರಾಬಳಗದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು