News Karnataka Kannada
Wednesday, May 01 2024
ಸಾಂಡಲ್ ವುಡ್

ಕೋಮಾಗೆ ಜಾರಿದ ಸ್ಯಾಂಡಲ್ ವುಡ್ ನಟ ಶಿವರಾಂ

Shivaram Actor
Photo Credit :

ಬೆಂಗಳೂರು : ಮೂರು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಂತ ಸ್ಯಾಂಡಲ್ ವುಡ್ ನಟ ಶಿವರಾಂ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಮೆದುಳಿಗೆ ಡ್ಯಾಮೇಜ್‌ ಆಗಿದ್ದು, ಕೋಮಾಗೆ ಜಾರಿದ್ದಾರೆ.

ಹಿರಿಯ ನಟನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮೋಹನ್ ಅವ್ರು ಶಿವರಾಂ ಅವ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ‘ ಹಿರಿಯ ನಟನ ಬ್ರೇನ್ ಡ್ಯಾಮೇಜ್‌ ಆಗಿದ್ದು, ಮೆದುಳಿನಲ್ಲಿ ರಕ್ತಸ್ರಾವ‌ ಆಗಿದೆ. ಸಧ್ಯ ಅವ್ರು ಕೋಮಾಗೆ ಜಾರಿದ್ದು, ಸ್ಥಿತಿ ಗಂಭೀರವಾಗಿದೆ. ಇನ್ನು ಅವ್ರು ಹೃದಯ ಸೇರಿ ಇತರೆ ಆಗಾಂಗಗಳ ಸ್ಥಿತಿ ಉತ್ತಮವಾಗಿವೆ. ಆದ್ರೆ, ಮೆದುಳು ಮಾತ್ರ ನಿಷ್ಕ್ರೀಯವಾಗಿದೆ. ಅವ್ರ ವಯಸ್ಸಿನ ಕಾರಣದಿಂದ ಯಾವುದೇ ಸರ್ಜರಿ ಮಾಡಲು ಸಾಧ್ಯವಾಗ್ತಿಲ್ಲ. ಆದ್ರೆ, ಮಿರಕಲ್‌ ನಡೆಯಬೋದು ಎಂದು ನಿರೀಕ್ಷಿಸುತ್ತಿದ್ದೇನೆ. ಚಿಕಿತ್ಸೆಗೆ ಸ್ಪಂದಿಸಿದ್ರೆ ಯಾವುದೇ ತೊಂದೆರೆ ಆಗುವುದಿಲ್ಲ. ಕುಟುಂಬಸ್ಥರು ಭರವಸೆ ಕಳೆದುಕೊಳ್ಳುವುದು ಬೇಡ ‘ ಎಂದರು

ಮೂರು ದಿನಗಳ ಹಿಂದೆ ಕಾರಿನಲ್ಲಿ ತೆರಳುತ್ತಿದ್ದಂತ ಕನ್ನಡದ ಹಿರಿಯ ನಟ ಶಿವರಾಂ ಕಾರು, ಅಪಘಾತಗೊಂಡಿತ್ತು. ಈ ಅಪಘಾತದಿಂದಾಗಿ ಹೊಸಕೆರೆಹಳ್ಳಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಗಾಗಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದರು.

ನಿನ್ನೆ ಮನೆಯಲ್ಲಿ ಪೂಜೆ ಮಾಡುವಾಗ ಬಿದ್ದು, ಪ್ರಜ್ಞೆಹೀನ ಸ್ಥಿತಿಗೆ ತಲುಪಿದ್ದಾರೆ. ತಕ್ಷಣ ಮನೆಯವ್ರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಶಿವರಾಂ ಅವ್ರ ಸ್ಥಿತಿ ಗಂಭೀರವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು