ಸ್ಯಾಂಡಲ್ ವುಡ್: ನಟಿ ಶ್ರೀಲೀಲಾ ಮಕ್ಕಳನ್ನು ದತ್ತು ಪಡೆದಿದ್ದಾರೆ. ಅದೂ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ ಎನ್ನುವುದು ವಿಶೇಷ. ಕನ್ನಡದ ನಟಿ ಶ್ರೀಲೀಲಾ ಅವರು ಸದ್ಯ ಸಾಲು, ಸಾಲು ಸಿನಿಮಾಗಳ ಮೂಲಕ ಸುದ್ದಿಯಲ್ಲಿ ಇದ್ದಾರೆ. ಶ್ರೀಲೀಲಾ ಅವರ ಅಭಿನಯದ ‘ಬೈ ಟು ಲವ್’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಹಾಗಾಗಿ ಇದೇ ಚಿತ್ರದ ವಿಚಾರವಾಗಿ ಶ್ರೀಲೀಲಾ ಸದಾ ಸುದ್ದಿಯಲ್ಲಿ ಇರುತ್ತಾರೆ.
ಯಾಕೆಂದರೆ ಈ ಚಿತ್ರ ಇದೇ ಫೆಬ್ರವರಿ 18ಕ್ಕೆ ತೆರೆಗೆ ಬರುತ್ತಿದೆ.
ನಟಿ ಶ್ರೀಲೀಲಾ ತೆರೆಯ ಮೇಲೆ ಮಾತ್ರ ಅಲ್ಲ ನಿಜ ಜೀವನದಲ್ಲೂ ಕೂಡ ಹೀರೋಯಿನ್ ಆಗಿದ್ದಾರೆ. ನಟಿ ಶ್ರೀಲೀಲಾ ಅವರು ತಮ್ಮ ಜೀವನದಲ್ಲಿ ಉತ್ತಮ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಅವರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.
ಇನ್ನು ವಿಶೇಷ ಎಂದರೆ ಎಲ್ಲರೂ ಸುಂದರವಾಗಿರುವ, ಆರೋಗ್ಯವಾಗಿರುವ ಮಕ್ಕಳನ್ನೇ ದತ್ತು ಪಡೆಯಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೆ ಶ್ರೀಲೀಲಾ, ದಿವ್ಯಾಂಗ ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ಮಾದರಿಯಾಗಿದ್ದಾರೆ.