News Karnataka Kannada
Thursday, May 02 2024
ಮಂಗಳೂರು

ಮಾಂಡ್ ಸೊಭಾಣ್ : ಕೊಂಕಣಿ ಚಲನಚಿತ್ರದ ಪೋಸ್ಟರ್ ಬಿಡುಗಡೆ

Poster
Photo Credit : News Kannada

ಶಕ್ತಿನಗರ: ಕೊಂಕಣಿಯ ಪ್ರಮುಖ ಸಂಘಟನೆ ಮಾಂಡ್ ಸೊಭಾಣ್ ಈಗ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ತನ್ನ ಚೊಚ್ಚಲ ಚಲನ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 11 ರಂದು ಸಂಜೆ 5.30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ಆಯೋಜಿಸಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಸಂಗೀತ ನಿರ್ದೇಶಕ ಗುರು ಕಿರಣ್, ತುಳು ಚಿತ್ರ ರಂಗದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಕೊಂಕಣಿ ನಟ, ನಿರ್ಮಾಪಕ ಪ್ರಿನ್ಸ್ ಜೇಕಬ್, ಗೋವಾ ಭಾಗವಹಿಸುವರು.

ಕೊಂಕಣಿ ಅಸ್ಮಿತೆಯ ಹುಡುಕಾಟವಿರುವ, ಸಾಂಸ್ಕೃತಿಕ ಹಿರಿಮೆಯ ಒಳನೋಟಗಳಿರುವ ಎಲ್ಲಾ ವರ್ಗದ ಜನರಿಗೆ ಆಪ್ತವೆನಿಸುವ ಕತೆಯಿರುವ ಈ ಚಲನಚಿತ್ರದ ಪೋಸ್ಟರ್ ಬಿಡುಗಡೆ ಹಾಗೂ ಚಿತ್ರತಂಡದ ನಟ ವರ್ಗವನ್ನು ಪರಿಚಯಿಸಲಿದ್ದು, ನಂತರ ಪ್ರಸಿದ್ಧ ಗಾಯಕಿ ಲುಲು ಫೊರ್ಟೆಸ್ ಇವರಿಂದ ಗಾಯನ ನಡೆಯಲಿದೆ. ಎಲ್ಲರಿಗೂ ಮುಕ್ತ ಪ್ರವೇಶವಿದೆ.

ಉದ್ಯಮಿ ಮತ್ತು ಸಮಾಜದ ಮುಖಂಡರಾದ ಡಾ ರೊನಾಲ್ಡ್ ಕುಲಾಸೊ, ರೋಹನ್ ಮೊಂತೇರೊ, ಮೈಕಲ್ ಡಿಸೋಜ, ರೊಯ್ ಕ್ಯಾಸ್ತೆಲಿನೊ, ರೊನಾಲ್ಡ್ ಪಿಂಟೊ, ವಿನ್ಸೆಂಟ್ ಕುಟಿನ್ಹಾ ಮತ್ತು ಜೆರಾಲ್ಡ್ ಡಿಮೆಲ್ಲೊ ಇವರು ಈ ಚಲನಚಿತ್ರಕ್ಕೆ ಸಹಕಾರ ನೀಡಿದ್ದು, ಕೊಂಕಣಿ ಸಮಾಜವು ಪ್ರೋತ್ಸಾಹ ನೀಡಿ ಸಹಕರಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಲುವಿ ಪಿಂಟೊ ವಿನಂತಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು