ಬೆಂಗಳೂರು: ಕೆಜಿಎಫ್ ಚಿತ್ರ ದೇಶ ವಿದೇಶದಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು ಎಲ್ಲಿರಿಗೂ ಗೊತ್ತಿದೆ. ಇದೀಗ ‘ಕೆಜಿಎಫ್’ ಚಾಪ್ಟರ್-1 ಹಾಗೂ ಚಾಪ್ಟರ್-2 ಜಪಾನ್ ದೇಶದಲ್ಲಿ ಬಿಡುಗಡೆ ಆಗುತ್ತಿದೆ.
ಮುಂದಿನ ವಾರವೇ ಅಲ್ಲಿನ ಥಿಯೇಟರ್ಗಳಲ್ಲಿ ರಾಕಿ ಭಾಯ್ ಆರ್ಭಟ ಶುರುವಾಗಲಿದೆ. ಈ ಹಿಂದೆ ನಟಿ ಶ್ರೀನಿಧಿ ಶೆಟ್ಟಿ ‘ಕೆಜಿಎಫ್’ ಸಿನಿಮಾ ಜಪಾನ್ನಲ್ಲಿ ರಿಲೀಸ್ ಆಗುವ ಬಗ್ಗೆ ಮಾತನಾಡಿದ್ದರು. ಇದೀಗ ಸ್ವತಃ ಯಶ್ ಕೂಡ ಸಿನಿಮಾ ರಿಲೀಸ್ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿ ಜಪಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಸದ್ಯ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಪೆಷಲ್ ವಿಡಿಯೋ ಮಾಡಿ ಮಾತನಾಡಿರುವ ಯಶ್ ಆರಂಭದಲ್ಲಿ ಜಪಾನೀಸ್ ಭಾಷೆಯಲ್ಲೇ ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ್ದಾರೆ. ನಂತರ ಇಂಗ್ಲೀಷ್ನಲ್ಲಿ ಮಾತು ಮುಂದುವರೆಸಿದ್ದಾರೆ. “ನಮಸ್ತೆ ಜಪಾನ್ ನನ್ನ ‘ಕೆಜಿಎಫ್ ಚಾಪ್ಟರ್- 1 ಹಾಗೂ ‘ಕೆಜಿಎಫ್ ಚಾಪ್ಟರ್-2 ಸಿನಿಮಾಗಳು ಜಪಾನ್ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಕ್ತಿ, ಧೈರ್ಯ ಮತ್ತು ದೃಢಸಂಕಲ್ಪವನ್ನು ಒಳಗೊಂಡಿವೆ. ಇದೆಲ್ಲವೂ ಸಾಕಷ್ಟು ಮನರಂಜನೆ ಮತ್ತು ಅದ್ಭುತ ಆಕ್ಷನ್ ತುಂಬಿದೆ. ತಪ್ಪದೇ ಸಿನಿಮಾ ನೋಡಿ” ಎಂದು ಯಶ್ ಮನವಿ ಮಾಡಿದ್ದಾರೆ.
ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…
ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…
ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್ಗಳು…
ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…
ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.