ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಮ್ಮ ನಟನೆಯ ಮೂಲಕವೇ ಹಾಸ್ಯದ ಮೂಲಕವೇ ಸಮಾಜಕ್ಕೆ ಸಂದೇಶ ನೀಡುವ ಕೆಲಸ ಮಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಇದೀಗ ಹೊಂಬಾಳೆ ಸಂಸ್ಥೆ ನಿರ್ಮಾಣದ ರಾಘವೇಂದ್ರ ಸ್ಟೋರ್ಸ್ ಮೂಲಕ ವೀಕ್ಷಕರಿಗೆ ನಗೆ ಔತಣ ನೀಡಲು ಮುಂದಾಗಿದ್ದಾರೆ. ಈ ಹೊಸ ಸಿನಿಮಾದ ಹಾಡು ಇದೀಗ ಬಿಡುಗಡೆಯಾಗಿದೆ.
ಮಂಜುನಾಥ ಸ್ಟೋರ್ಸ್ಗೆ ಅಜನೀಶ್ ಲೋಕನಾಥ್ ಸಂಗೀತವಿದೆ. ವಿಜಯ ಪ್ರಕಾಶ್ ಹಾಗೂ ನವೀನ್ ಹಾಡು ರಚಿಸಿದ್ದಾರೆ. 40 ವರ್ಷ ಕಳೆದರೂ ಮದುವೆಯಾಗದ ಅಡುಗೆ ಭಟ್ಟನ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಇದು ಹೊಂಬಾಳೆ ಚಿತ್ರ ಸಂಸ್ಥೆಯ 12 ನೇ ಚಿತ್ರವಾಗಿದ್ದು, ಶೀಘ್ರದಲ್ಲಿ ಚಿತ್ರ ರಸಿಕರ ಮುಂದೆ ತೆರೆಕಾಣಲಿದೆ.