News Karnataka Kannada
Saturday, April 20 2024
Cricket
ಗಾಂಧಿನಗರ

ವಂಡರ್‌ಲಾದ ರೆಸಾರ್ಟ್ ಗೆ ನಟಿ ಅದಿತಿ ಪ್ರಭುದೇವ್ ಚಾಲನೆ

Actress Aditi Prabhudeva inaugurates Wonderla resort
Photo Credit : By Author

ರಾಮನಗರ: ವಂಡರ್‌ಲಾ ರೆಸಾರ್ಟ್‌ನಲ್ಲಿ ತಂಗುವ ಗ್ರಾಹಕರಿಗಾಗಿ ಇನ್ನಷ್ಟು ಮನರಂಜನೆ ನೀಡುವ ನಿಟ್ಟಿನಲ್ಲಿ ವಿಸ್ತರಿಸಿರುವ ನಾಲ್ಕು ಹೊಸ ಆಕರ್ಷಣಾ ಘಟಕಗಳನ್ನು ನಟಿ ಅದಿತಿ ಪ್ರಭುದೇವ್ ಅವರು ಲೋಕಾರ್ಪಣೆ ಮಾಡಿದ್ದಾರೆ.

ತಾಲ್ಲೂಕಿನ ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿರುವ ರೆಸಾರ್ಟ್ ತನ್ನ ಗ್ರಾಹಕರಿಗಾಗಿ ಮತ್ತಷ್ಟು ಮನರಂಜನೆಯನ್ನು ಒದಗಿಸುವ ಉದ್ದೇಶದಿಂದ ರೆಸಾರ್ಟ್‌ಪೂಲ್‌ನಲ್ಲಿಯೇ ಬಾರ್, ಕೆರಿಬಿಯನ್ ವರ್ಲ್(ವಾಟರ್ ಸ್ಲೈಡ್ ರೈಡ್), ಮೈ ಕಿಂಡಾ ಪ್ಲೇಸ್, ಕಾರ್ಪೋರೆಟ್ ಈವೆಂಟ್‌ಗಳಿಗೆ ದೊಡ್ಡ ಲಾನ್ ಕೋರ್ಟ್ ಅನ್ನು ಸ್ಥಾಪಿಸಿದೆ. ಈ ಆಕರ್ಷಣೆಯ ಮನರಂಜನಾ ಸೌಲಭ್ಯಗಳನ್ನು ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ ಹಾಗೂ ಗಣ್ಯರು ಅನಾವರಣಗೊಳಿಸಿದರು.

ಈ ವೇಳೆ ನಟಿ ಅದಿತಿ ಪ್ರಭುದೇವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ನನಗೆ ಬಾಲ್ಯದಿಂದಲೂ ನೆಚ್ಚಿನ ತಾಣವಾಗಿದೆ. ವಂಡರ್ ಲಾ ದಂತಹ ಪ್ರತಿಷ್ಠಿತ ಮನರಂಜನಾ ಪಾರ್ಕ್‌ನಲ್ಲಿ ನೂತನ ಆರ್ಕಷಣೆ ಸ್ಥಳಗಳನ್ನು ಉದ್ಘಾಟಿಸಿದ್ದು ತಮಗೆ ಅತ್ಯಂತ ಸಂತಸ ತಂದಿದೆ. ವಿಶ್ರಾಂತಿ ಮತ್ತು ಉಲ್ಲಾಸ ಬಯಸುವ ಜನರಿಗೆ ಈ ರೆಸಾರ್ಟ್ ಖಂಡಿತ ಇಷ್ಟವಾಗಲಿದೆ ಎಂದರು.

ಪ್ರವಾಸಿಗರು ಹೆಚ್ಚಿನ ಮನರಂಜನೆ ಸಿಗುವ ಹಾಗೂ ಖುಷಿ ನೀಡುವ ತಾಣವನ್ನು ಇಷ್ಟಪಡುತ್ತಾರೆ. ಅದರಂತೆ ರೆಸಾರ್ಟ್‌ನಲ್ಲಿ ತಂಗುವವರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಹೊಸ ವಾಟರ್ ಸ್ಲೈಡ್ ರೈಡ್, ಪೂಲ್ ಬಾರ್, ಮೈ ಕಿಂಡಾ ಪೇಸ್ ಇಂತಹ ಮನಸ್ಸಿಗೆ ಮುದ ನೀಡುವ ಮನರಂಜನೆಗಳು ಈಗ ಸೇರ್ಪಡೆಯಾಗಿವೆ. ಕೆಲವು ಕಡೆ ದುಬಾರಿ ಹಣ ಕೊಟ್ಟರೂ ಸಹ ಸರಿಯಾದ ಸೌಲಭ್ಯಗಳು ಸಿಗುವುದಿಲ್ಲ. ಆದರೆ ವಂಡರ್‌ಲಾ ಪಾರ್ಕ್‌ನಲ್ಲಿ ನಿರೀಕ್ಷೆಗೂ ಮೀರಿ ಮನರಂಜನೆ ಲಭಿಸುತ್ತಿದೆ. ಇಂತಹ ಪ್ರತಿಷ್ಠಿತ ಪಾರ್ಕ್ ನಮ್ಮ ಕರ್ನಾಟಕದಲ್ಲಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ವಂಡರ್‌ಲಾ ಹಾಲಿಡೇಸ್‌ನ ಎಂ.ಡಿ ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ ಅವರು ಕೆರಿಬಿಯನ್ ವರ್ಲ್ ಅನ್ನು ಹೆಮ್ಮೆಯಿಂದ ಪರಿಚಯಿಸಿದ್ದು ವಾಟರ್ ಸ್ಲೈಡ್ ರೈಡ್ ಅನ್ನು ರೆಸಾರ್ಟ್‌ನಲ್ಲಿ ತಂಗುವವರಿಗೆ ಮಾತ್ರ ಸೀಮಿತವಾಗಿದೆ. ನೀರಿನ ಸವಾರಿಯಿಂದ ಕೂಡಿರುವ ರೋಮಾಂಚಕ ಸ್ಲೈಡ್‌ಗಳು, ಸ್ಪ್ಲಾಶ್ ಪ್ಯಾಡ್‌ಗಳು ವಾಟರ್ ಜೆಟ್‌ಗಳು ಎಲ್ಲಾ ವಯಸ್ಸಿನ ಅತಿಥಿಗಳಿಗೆ ಸುರಕ್ಷಿತ ಮತ್ತು ಆನಂದದಾಯಕ ಅನುಭವಗಳನ್ನು ನೀಡುತ್ತವೆ. ಹಾಗೆಯೇ ಮೈ ಕಿಂಡಾ ಪ್ಲೇಸ್ ಮತ್ತು ರೆಸಾರ್ಟ್ ಪಕ್ಕದಲ್ಲಿ ವಿಶಾಲವಾದ ಹುಲ್ಲುಹಾಸಿನ ಮೈದಾನವನ್ನು ಸೃಜಿಸಿದ್ದು ಇಲ್ಲಿ ಮದುವೆಗಳು, ದೊಡ್ಡ ಪಾರ್ಟಿಗಳು, ಕಾರ್ಪೋರೆಟ್ ಈವೆಂಟ್ ಸೇರಿದಂತೆ ನಾನಾ ರೀತಿಯ ಆಚರಣೆಗೆ ಸೂಕ್ತವಾಗಿದೆ ಎಂದು ಹೇಳಿದರು.

ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ನ ವ್ಯವಸ್ಥಾಪಕ ರುದ್ರೇಶ್ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು