News Karnataka Kannada
Thursday, May 02 2024
ಸಾಂಡಲ್ ವುಡ್

ಕನ್ನಡಿಗರ ಬಳಿ ಕ್ಷಮೆ ಕೇಳಿದ ನಟ ಲೂಸ್ ಮಾದ ಯೋಗಿ

Actor Loose Maada Yogi apologises to Kannadigas
Photo Credit : News Kannada

ಬೆಂಗಳೂರು: ಇತ್ತೀಚೆಗಷ್ಟೆ ಲೂಸ್ ಮಾದ ಯೋಗಿ ನಟನೆಯ ‘ರೋಸಿ‘ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಆದರೆ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಲೂಸ್ ಮಾದ ಯೋಗಿ ಆಡಿದ ಮಾತುಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ತಮ್ಮ ತಪ್ಪನ್ನು ಅರಿತುಕೊಂಡಿರುವ ನಟ ಯೋಗಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

‘ರೋಸಿ’ ಸಿನಿಮಾದ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮವನ್ನು ವಿವೇಕ್ ನಗರದಲ್ಲಿ ಆಯೋಜಿಸಲಾಗಿತ್ತು. ನಟ ಯೋಗಿ ವೇದಿಕೆ ಮೇಲೆ ತಮಿಳು ಭಾಷೆಯಲ್ಲಿ ಮಾತನಾಡಿದ್ದರು. ಭಾಷಣದ ಆರಂಭವನ್ನು ಕನ್ನಡದಲ್ಲಿಯೇ ಮಾಡಿದ ಯೋಗಿ ಆ ನಂತರ ತಮಿಳು ಭಾಷೆಗೆ ಶಿಫ್ಟ್ ಆದರು. ‘ರೋಸಿ’ ಸಿನಿಮಾದಲ್ಲಿ ತಮಿಳಿನ ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಸಹ ನಟಿಸಿದ್ದು, ಅವರೂ ಸಹ ವೇದಿಕೆ ಮೇಲಿದ್ದರಿಂದ ಹಾಗೂ ಆ ಪ್ರದೇಶದಲ್ಲಿ ಹೆಚ್ಚಿನ ಜನ ತಮಿಳು ಭಾಷಿಕರು ಇರುವ ಕಾರಣ ಯೋಗಿ ತಮಿಳು ಭಾಷೆಯಲ್ಲಿ ಮಾತನಾಡಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಲೂಸ್ ಮಾದ ಯೋಗಿ, ಬೆಂಗಳೂರಿನಲ್ಲಿ ತಮಿಳು ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ”ರೋಸಿ’ ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ತಮಿಳು ಮಾತನಾಡಿದ್ದೀನಿ ಎಂಬುದು ತುಂಬಾ ಜನಕ್ಕೆ ಬೇಜಾರಾಗಿದೆ. ನಿಜ ಏನೆಂದರೆ ನಾನು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿ ಬಳಿಕ ತಮಿಳಿನಲ್ಲಿ ಮಾತನಾಡಿ ಅಂತಿಮವಾಗಿ ಕನ್ನಡದಲ್ಲಿಯೇ ಭಾಷಣ ಮುಗಿಸಿದ್ದೀನಿ. ಆದರೂ ಸಹ ನಾನು ತಮಿಳು ಮಾತನಾಡಿದ್ದು ಕೆಲವರಿಗೆ ನೋವಾಗಿದ್ದರೆ ಕ್ಷಮೆ ಇರಲಿ.

ನಮ್ಮ ‘ರೋಸಿ’ ಸಿನಿಮಾವನ್ನು ಸಹ ನಾವು ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದ್ದೇವೆ ಇದೆಲ್ಲ ಕಾರಣದಿಂದ ನಾನು ಆ ಸ್ಥಳದಲ್ಲಿ ತಮಿಳಿನಲ್ಲಿ ಮಾತನಾಡಿದೆ. ನಾನು ತಮಿಳಿನಲ್ಲಿ ಮಾತನಾಡಿದ್ದು ತಪ್ಪು ಅನ್ನಿಸಿದರೆ ಕ್ಷಮೆ ಇರಲಿ ಎಂದು ಕೈಮುಗಿದಿದ್ದಾರೆ ಯೋಗಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು