ಸ್ಯಾಂಡಲ್ ವುಡ್: ದುನಿಯಾ ವಿಜಯ್ ಆ್ಯಕ್ಟಿಂಗ್ ಜೊತೆ ಜೊತೆಗೆ ಮೊಟ್ಟಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಸಲಗ. ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಸಂಪೂರ್ಣಗೊಂಡಿದ್ದು, ನಾಡಹಬ್ಬದ ದಿನ ಅಂದ್ರೆ ಅಕ್ಟೋಬರ್ ೧೪ರಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಯಲ್ಲೂ ಸಲಗ ಜಪ ಆರಂಭವಾಗಿದ್ದು, ವಿಜಿ ಅಭಿಮಾನಿಗಳಂತೂ ಸಲಗ ಚಿತ್ರಕ್ಕಾಗಿ ಕಾತುರರಾಗಿದ್ದಾರೆ. ಈ ಎಲ್ಲಾ ಉತ್ಸಾಹದ ನಡುವೆ ಇದೀಗ ಸಲಗ ಚಿತ್ರತಂಡ ಮತ್ತೊಂದು ಪವರ್ ಫುಲ್ ವಿಚಾರವನ್ನು ಹಂಚಿಕೊಂಡಿದೆ.
ಸಲಗ ಚಿತ್ರಕ್ಕೆ ಸ್ಯಾಂಡಲ್ ವುಡ್ ಬಹುತೇಕ ತಾರೆಯರು ಈಗಾಗಲೇ ಸಾಥ್ ನೀಡಿದ್ದು, ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಲಗ ತಂಡದೊಂದಿಗೆ ಕೈ ಜೋಡಿಸಿದ್ದಾರೆ. ಸಲಗ ಸೆಟ್ಟೇರಿದ ದಿನದಿಂದಲೂ ಪವರ್ ಸ್ಟಾರ್ ಈ ತಂಡಕ್ಕೆ ಬಹು ದೊಡ್ಡ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಚಿತ್ರದ ಕೊನೆಯ ಹಂತದ ಕೆಲಸಗಳಲ್ಲೂ ಅಪ್ಪು ಜೊತೆಯಾಗಿದ್ದಾರೆ. ಇದೇ ಅಕ್ಟೋಬರ್ 10 ರಂದು ಸಲಗ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಈ ಪ್ರಮುಖ ಘಳಿಗೆಗೆ ಅಪ್ಪು ಸಾಕ್ಷಿಯಾಗಲಿದ್ದಾರೆ
ಇತ್ತ ರಾಜ್ಯಾದ್ಯಂತ ಸಲಗ ಹವಾ ಜೋರಾಗಿದ್ದು. ಚಿತ್ರದ ಹಾಡುಗಳು, ಟ್ರೈಲರ್ ಸಿನಿ ಪ್ರಿಯರ ನಿದ್ದೆಗೆಡಿಸಿದೆ. ನಟ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಲಗ ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಚರಣ್ ರಾಜ್ ಸಂಗೀತ ನರ್ದೇಶನವಿದ್ದು, ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ ಇದೆ. ಬಹು ದಿನಗಳ ಬಳಿಕ ಸ್ಯಾಂಡಲ್ವುಡ್ನಲ್ಲಿ ಔಟ್ ಅಂಡ್ ಔಟ್ ಮಾಸ್ ಚಿತ್ರವೊಂದು ತೆರೆ ಕಾಣಲು ಸಜ್ಜಾಗಿದ್ದು, ದಸರಾ ಹಬ್ಬದಂದೇ ಸಿನಿ ಪ್ರಿಯರರಿಗೆ ಮನೋರಂಜನೆಯ ರಸದೌತಣ ಗ್ಯಾರಂಟಿಯಾಗಿದೆ.