News Karnataka Kannada
Sunday, April 28 2024
ವಿಶೇಷ

ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ

ಭಾರತ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಗಳ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವ, ಗಾಂಧಿ-ಅಂಬೇಡ್ಕರ್‌-ನೆಹರು ಅವರಷ್ಟೇ ಸ್ಮರಣೀಯರಾಗಿರುವ ನೇತಾಜಿ ಸುಭಾಷ್‌ ಚಂದ್ರಬೋಸ್‌ ಈಗಲೂ ಭಾರತದ ಜನಮಾನಸದಲ್ಲಿ ಜೀವಂತ. ತೀರಾ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದು ಒಂದಿಷ್ಟು ಜನ ನಂಬಿದ್ದರು.
Photo Credit : News Kannada

ಭಾರತ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಗಳ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವ, ಗಾಂಧಿ-ಅಂಬೇಡ್ಕರ್‌-ನೆಹರು ಅವರಷ್ಟೇ ಸ್ಮರಣೀಯರಾಗಿರುವ ನೇತಾಜಿ ಸುಭಾಷ್‌ ಚಂದ್ರಬೋಸ್‌ ಈಗಲೂ ಭಾರತದ ಜನಮಾನಸದಲ್ಲಿ ಜೀವಂತ. ತೀರಾ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದು ಒಂದಿಷ್ಟು ಜನ ನಂಬಿದ್ದರು.

ನೇತಾಜಿ ಅವರು 1897 ಜನವರಿ 23 ರಂದು ಒಡಿಶಾದಲ್ಲಿ ಜನಿಸುತ್ತಾರೆ.  ಭಾರತದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರು ಇವರು. ಇವರನ್ನು ನೇತಾಜಿ ಎಂದೇ ಕರೆಯಲಾಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಇವರು ಕೂಡಾ ಒಬ್ಬರು. ಇವರ ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಈ ದಂಪತಿಗಳಿಗೆ 14 ಜನ ಮಕ್ಕಳು. ಅದರಲ್ಲಿ ಸುಭಾಷ್ ಚಂದ್ರ ಬೋಸ್ ಅವರು 9 ನೇಯವರು. ಇವರು ಎಮಿಲಿ ಶೆಂಕ್ಲ್ ಅವರನ್ನು ಜೀವನ ಸಂಗಾತಿಯಾಗಿ ಸ್ವೀಕರಿಸಿದ್ದರು. ಇವರಿಗೆ ಅನಿತಾ ಬೋಸ್ ಫಾಫ್ ಎಂಬ ಮಗಳಿದ್ದು, ಇವರು ಜರ್ಮನಿಯಲ್ಲಿ ಜನಪ್ರಿಯ ಅರ್ಥಶಾಸ್ತ್ರಜ್ಞರಾಗಿದ್ದರು.

ಇವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಒಂದೊಂದು ಸಂದೇಶಗಳು ಜನರಲ್ಲಿ ಹೋರಾಟದ ಕಿಚ್ಚನ್ನ ಹುಟ್ಟುಹಾಕಿದ್ದವು. ಅದರಲ್ಲಿ ‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ‘ ಎಂಬ ಸಂದೇಶ ಸ್ವಾತಂತ್ರ್ಯ ಪೂರ್ವದಲ್ಲೇ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಸೇರುವಂತೆ ಮಾಡಿತ್ತು.

ನೇತಾಜಿ ಅವರು,  1920 ರಲ್ಲಿ ಐಸಿಎಸ್ ಪದವಿ ಪಡೆದರು. ವಿದೇಶಿ ನೌಕರಿ ಒಲ್ಲೆ ಎಂದು ಗಳಿಸಿದ್ದ ಐಸಿಎಸ್ ಪದವಿಯನ್ನು ಬ್ರಿಟಿಷರಿಗೆ ಮರಳಿಸಿದ್ದರು.
ಶ್ರೀಘ್ರ ಸ್ವಾತಂತ್ರ್ಯಕ್ಕಾಗಿ ಬೋಸ್ ಅವರು ಮಂಡಿಸುತ್ತಿದ್ದ ವಾದಗಳು ಮತ್ತು ಅವರ ನಿಲುವುಗಳನ್ನ ಕಾಂಗ್ರೆಸ್‌ ನ ಮಂದಗಾಮಿ ಗುಂಪಿಗೆ ಅಸಹನಿಯವಾಗಿತ್ತು. ಸ್ವತಃ ಗಾಂಧೀಜಿ ಅವರೇ ಹಲವು ಬಾರಿ ಬೋಸ್ ರನ್ನು  ಟೀಕಿಸಿದ್ದರು. ಆದರೆ ಬೋಸ್‌ ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲದ ಯಾರೊಬ್ಬ ನಾಯಕರಲ್ಲೂ ಇರಲಿಲ್ಲ. ಆಸ್ಟ್ರೀಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹಲವು ದೇಶಗಳನ್ನು ಸುತ್ತಿದ್ದ ಬೋಸ್ ಅವರು, ಉತ್ತಮ ರಾಜಕೀಯ ಜ್ಞಾನವನ್ನು ಹೊಂದಿದ್ದರು.

ಇನ್ನು ಕಾಂಗ್ರೆಸ್ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್ ದಾಸ್ ಅವರು ಸ್ವರಾಜ್ಯಪಕ್ಷ ವನ್ನು ಸ್ಥಾಪನೆ ಮಾಡಿದರು. ಬೋಸ್ ಅವರು ಚಿತ್ತರಂಜನ್ ದಾಸ್ ಅವರ ಜತೆಗೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ದಾಸ್ ಅವರು ಸ್ಥಾಪಿಸಿದ್ದ ‘ಫಾವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಬ್ದಾರಿಯನ್ನು ಬೋಸ್ ಅವರು ನಿಭಾಯಿಸಿದ್ದರು.

ಮೊದಲು ಪಕ್ಷವಾಗಿ ಕಟ್ಟಿದ ಆಜಾದ್ ಹಿಂದ್ ಸೇನೆ (ಐಎನ್ಎ) ಮುಂದೆ ಸೈನ್ಯವಾಗಿ ರೂಪಗೊಂಡಿತು. ಈ ಸೇನೆಗೆ ನಿವೃತ್ತ ಯುದ್ದ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಸೇನೆ ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿಸ್ತರಿಸಿತ್ತು. ಅನೇಕ ಜನರು ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಸೂಚಿಸಿದ್ದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆ ಯನ್ನು ಸ್ಥಾಪಿಸಿದರು.  ಕಾಂಗ್ರೆಸ್‍ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ನೇತಾಜಿ. ಇವರು ಟೈವಾನ್ ನಲ್ಲಿ 1945 ಆಗಸ್ಟ್ 18 ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಹೇಳಲಾಗುತ್ತಿದ್ದು, ಈ ಘಟನೆ ವಿವಾದಿತವಾಗಿಯೇ ಉಳಿದಿದೆ. ಏಕೆಂದರೆ, ಸೇನಾನಿ ಸುಭಾಷ್‌ಚಂದ್ರ ಬೋಸ್‌ ಅವರ ಸಾವು ಇಂದಿಗೂ ನಿಗೂಢವಾಗಿ ಉಳಿದಿದೆ.

ಇನ್ನು ಜನವರಿ 23, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ವಿಚಾರ ಘೋಷಿಸಿದ್ರು ನೇತಾಜಿ ಬೋಸ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರ ಪ್ರತಿಮೆಯನ್ನು ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾಗುವುದು ಎಂದು ಪ್ರಕಟಿಸಿದರು. ಇದರ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಉದ್ಘಾಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು