ಮೇ 6ರಂದು ಯೋಗಿ ರೋಡ್‌ ಶೋ ಹೆದ್ದಾರಿ ವಾಹನ ಸಂಚಾರ ನಿಷೇಧ

ಬಂಟ್ವಾಳ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೇ 6ರಂದು ಸಂಜೆ 4 ಕ್ಕೆ ಬಿ.ಸಿ. ರೋಡ್‌ನ‌ಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು-ಬಿ.ಸಿ. ರೋಡ್‌ ಹೆದ್ದಾರಿಯಲ್ಲಿ ಕೆಲವು ತಾಸುಗಳ ಕಾಲ ವಾಹನ ಸಂಚಾರ ನಿಷೇಧಗೊಳ್ಳುವ ಸಾಧ್ಯತೆ ಇದೆ.

ಯೋಗಿ ಅವರು ಹೆಲಿಕಾಪ್ಟರ್‌ ಮೂಲಕ ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್‌ ಕಾಲೇಜಿನ ಬಳಿಯ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್‌ ಮೂಲಕ ಕೈಕಂಬಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್‌ ನಿಲ್ದಾಣದವರೆಗೆ ರೋಡ್‌ ಶೋ ನಡೆಸುವರು. ರೋಡ್‌ ಶೋ ಸಾಗುವ ಹಾದಿಯುದ್ದಕ್ಕೂ ಬ್ಯಾರಿಕೇಡ್‌ ಹಾಕಲಿದ್ದು, ಅಲ್ಲಲ್ಲಿ ಅಳವಡಿಸಲಾಗುವ ಮೆಟಲ್‌ ಡಿಟೆಕ್ಟರ್‌ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.

ಎಸ್‌ಪಿಜಿ ತಂಡ: ಭದ್ರತೆಯ ಹಿನ್ನೆಲೆಯಲ್ಲಿ ರೋಡ್‌ ಶೋ ವಾಹನದ ಹಿಂದೆ-ಮುಂದೆ ಸುಮಾರು 500 ಮಂದಿ ವಿಶೇಷ ಸ್ವಯಂಸೇವಕರು ಬೇರೆ ಯಾರೂ ವಾಹನದತ್ತ ಆಗಮಿಸದಂತೆ ಎಚ್ಚರಿಕೆ ವಹಿಸುವರು. ಜತೆಗೆ ಯೋಗಿ ಅವರ ಭದ್ರತೆಗಾಗಿ ಎಸ್‌ಪಿಜಿಯ ತಂಡ ಮಂಡ್ಯದಿಂದ ಬಂಟ್ವಾಳಕ್ಕೆ ಆಗಮಿಸಲಿದೆ.

 

Umesha HS

Recent Posts

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಖಂಡಿಸಿ ನಾಳೆ ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಎನ್‌ಎಸ್‌ಯು  ರಾಜ್ಯಾಧ್ಯಕ್ಷರಾದ ಶ್ರೀ ಕೀರ್ತಿ ಗಣೇಶ್  ರವರ ಆದೇಶದ ಮೇರೆಗೆ ಎನ್‌ಎಸ್‌ಯು  ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ, ನೂರಾರು…

15 mins ago

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿರುವಂತೆ ನೋಡಿಕೊಳ್ಳಿ: ಜಿಲ್ಲಾ ಚುನಾವಣಾಧಿಕಾರಿ

ಮೇ. 7ರಂದು ನಡೆಯುವ ಮತದಾನ ದಿನದಂದು ಬೀದರ್ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಿರುವಂತೆ ಚುನಾವಣೆಗೆ…

26 mins ago

ಮೋದಿ ಕೇವಲ ಮತಗಳಿಕೆಗಾಗಿ ಭಾವನಾತ್ಮಕ ಸುಳ್ಳು ಹೇಳುತ್ತಾರೆ: ಸಿಎಂ ಆರೋಪ

ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನರು ಗಮನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುಸ್ಥಾನ…

42 mins ago

ನಾವು ದಾಖಲೆ ಕಳಿಸುವುದಿಲ್ಲ, ನೇರವಾಗಿ ದಾಳಿ ಮಾಡುತ್ತೇವೆ: ಪ್ರಧಾನಿ ಮೋದಿ

ಕಾಂಗ್ರೆಸ್‌ ಅವಧಿಯಲ್ಲಿದ್ದ ಪದ್ಧತಿಯಂತೆ ಮುಂಬೈ ದಾಳಿಯ ಬಳಿಕ ನಾವು ಪಾಕಿಸ್ತಾನಕ್ಕೆ ದಾಖಲೆಗಳನ್ನು ಕಳಿಸುವುದಿಲ್ಲ, ಬದಲಿಗೆ ಭಯೋತ್ಪಾದಕರ ಮೇಲೆ ನೇರವಾಗಿ ದಾಳಿ…

1 hour ago

ಟಿ20 ವಿಶ್ವಕಪ್‌ : ಟೀಮ್‌ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ

ಒಳ್ಳೆ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿರೋ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ…

1 hour ago

ಟಿ20 ವಿಶ್ವಕಪ್‌ : ಕೆ.ಎಲ್‌. ರಾಹುಲ್‌ಗೆ ಇಲ್ಲ ಅವಕಾಶ

ಇಂದು ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ 15 ಸದಸ್ಯರ ಬಳಗದ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ತಂಡವನ್ನು…

2 hours ago