News Karnataka Kannada
Friday, May 17 2024
ಸಂಪಾದಕೀಯ

ಮತ್ತೆ ಸದ್ದು ಮಾಡಿದ ನೋಟು ಬದಲಾವಣೆ:‌ ಈ ಬಾರಿ 2ಸಾವಿರ ಮುಖಬೆಲೆಯ ಕಥೆಯೇನು

Photo Credit : News Kannada

ರಾತ್ರೋರಾತ್ರಿ ಇಡಿ ದೇಶವೇ ಅಚ್ಚರಿ ಪಡುವಂತೆ ಮಾಡಿದ ಮಹತ್ವ ನಿರ್ಧಾರ ನೋಟು ಅಮಾನ್ಯೀಕರಣ. ನವೆಂಬರ್ 8, 2016 ರಂದು ಸಾರ್ವಜನಿಕ ಬಳಕೆಯಿಂದ 500 ಮತ್ತು 1,000 ರೂಪಾಯಿಗಳ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಈ ನಿರ್ಧಾರವು ದೇಶದಲ್ಲಿ ಒಂದು ಸಂಚಲನವನ್ನೇ ಸೃಷ್ಟಿತ್ತು. ಇನ್ನು ಈ ಹಠತ್​​ ನಿರ್ಧಾರಕ್ಕೆ ಕಾರಣವನ್ನು ಕೂಡ ಮೋದಿ ಅವರು ನೀಡಿದ್ದರು. ಅವುಗಳೆಂದರೆ ಕಪ್ಪುಹಣವನ್ನು ನಿಭಾಯಿಸುವುದು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಭಯೋತ್ಪಾದಕ ನಿಧಿಯನ್ನು ತಡೆಗಟ್ಟುವುದು. ಈ ನಿರ್ಧಾರದ ಬಗ್ಗೆ ರಾಜಕೀಯ ತಜ್ಞರು ಇವುಗಳ ಮೇಲೆ ನೋಟು ಅಮಾನ್ಯೀಕರಣ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಹೇಳಿದರು.

2016ರ ನವೆಂಬರ್‌ನಲ್ಲಿ ಕೈಗೊಂಡ 500 ರೂ. ಮತ್ತು 1000 ರೂ. ನೋಟುಗಳ ಅಮಾನ್ಯತೆಯ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿದೆ. ಸಮಗ್ರವಾಗಿ ಪರಾಮರ್ಶೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಕಪ್ಪುಹಣ ನಿರ್ಮೂಲನೆಗ ಭಾಗವಾಗಿ ಈ ತೀರ್ಮಾನಕ್ಕೆ ಬರಬೇಕಾಯಿತು ಎಂದು ತಿಳಿಸಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಶಿಫಾರಸ್ಸಿನ ಮೇರೆಗೆ ನೋಟು ಅಮಾನ್ಯತೆಯ ಕ್ರಮವನ್ನು ಜಾರಿಗೊಳಿಸಲಾಯಿತು. ಇದಕ್ಕೂ ಮುನ್ನ ಸೂಕ್ತ ಸಿದ್ಧತೆಯನ್ನೂ ಕೈಗೊಳ್ಳಲಾಗಿತ್ತು. ಕಪ್ಪುಹಣ, ನಕಲಿ ನೋಟುಗಳ ಹಾವಳಿಯನ್ನು ನಿರ್ಮೂಲನೆಗೊಳಿಸಲು ಹಾಗೂ ಡಿಜಿಟಲ್‌ ಪೇಮೆಂಟ್‌ ಪದ್ಧತಿಯನ್ನು ಉತ್ತೇಜಿಸಲು ನೋಟು ಅಮಾನ್ಯತೆಯ ಅಗತ್ಯ ಸೃಷ್ಟಿಯಾಗಿತ್ತು. ಇದೊಂದು ಆರ್ಥಿಕ ನೀತಿಯ ನಿರ್ಧಾರವಾಗಿತ್ತು ಎಂದು ಸರ್ಕಾರ ಪ್ರತಿಪಾದಿಸಿತ್ತು.

ಇನ್ನು 2018ರಲ್ಲಿಯೇ 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ ಮಾಹಿತಿ ನೀಡಲಾಗಿತ್ತು. ಇದೀಗ ಕ್ಲೀನ್ ನೋಟ್ ಅಭಿಯಾನದಡಿ ನೋಟ್‌ಗಳನ್ನು ಹಿಂಪಡೆಯಲು ಆರ್‌ಬಿಐ ಮುಂದಾಗಿದೆ. ಮೇ 23, 2023ರಿಂದ ಯಾವುದೇ ಬ್ಯಾಂಕ್‌ನಲ್ಲಿ 2000 ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸೂಚಿಸಿದೆ.

ಒಂದು ವರದಿಯ ಪ್ರಕಾರ, “ಈ ನೋಟು ಬ್ಯಾನ್‌, ಅಥವಾ ನೋಟು ಬದಲಾವಣೆ ಎಂಬ ವಿಚಾರ ಮಾಡಿರುವುದು ನೇಪಾಳ ಸರ್ಕಾರ ಹೊರತು ನಮ್ಮ ಸರ್ಕಾರವಲ್ಲ” ಎನ್ನಲಾಗ್ತಿದೆ.

ಯಾವುದೇ ಕಾರಣಕ್ಕೂ ಭಾರತದ ಹೊಸ ಕರೆನ್ಸಿ ನೋಟುಗಳನ್ನು ವ್ಯವಹಾರಕ್ಕೆ ಬಳಸಬಾರದು. ಜೊತೆಗೆ ಹಣ ಸಾಗಾಟ ಮಾಡಬಾರದು. 200 ರೂಪಾಯಿ, 500 ರೂಪಾಯಿ ಹಾಗು 200 ರೂಪಾಯಿ ನೋಟುಗಳನ್ನು ನೇಪಾಳದಲ್ಲಿ ಇಟ್ಟು ಕೊಂಡರೆ ಅದನ್ನು ಕಾನೂನು ಬಾಹಿರ ಅಂತ ಪರಿಗಣಿಸಬೇಕು ಅಂತ ನೇಪಾಳ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹಾಗಾಗಿ ತಮ್ಮಲ್ಲಿರುವ 200, 500 ಮತ್ತು 2,000 ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ಬಲಿಸಿಕೊಳ್ಳಿ ಎಂದು ನಾಗರಿಕರಿಗೆ ನೇಪಾಳ ಸರ್ಕಾರ ಕರೆ ನೀಡಿದೆ ಎಂದು ತಿಳಿದು ಬಂದಿದೆ.

ಇನ್ನು ನೇಪಾಳ ಸರ್ಕಾರ ಭಾರತೀಯ ಕರೆನ್ಸಿ ಚಲಾವಣೆಗೆ ನಿಷೇದ ಹೇರಲು ಕಾರಣವೇಂದರೇ, ನೇಪಾಳ ಗಡಿಯಲ್ಲಿರುವವರು ವ್ಯಾಪಾರ ವಹಿವಾಟು ಸಂದರ್ಭದಲ್ಲಿ ಭಾರತದ ಕರೆನ್ಸಿಗಳನ್ನು ಚಲಾಯಿಸುತ್ತಿದ್ದರು. ಹಾಗು ಭಾರತದಲ್ಲಿ ಕೆಲಸ ಮಾಡುವ ನೇಪಾಳಿಗರು ವಾಪಾಸ್‌ ಮನೆಗೆ ಹೋಗುವಾಗ ಹಾಗು ಪ್ರವಾಸಿಗರು ಹಿಮಾಲಯ ನೋಡಲು ಹೊರಟಾಗ ಭಾರತದ ಕರೆನ್ಸಿಯನ್ನು ಬಳಸುತ್ತಿದ್ದರು. ಇದರಿಂದ ಕಳೆದ ಬಾರಿ ಭಾರತ ಸರ್ಕಾರ 500, 1000 ರೂಪಾಯಿ ನೋಟ್‌ ಬ್ಯಾನ್‌ ಮಾಡಿದಾಗ ನೇಪಾಳದಲ್ಲಿ ಬರೋಬ್ಬರಿ 950ಕೋಟಿ ಚಲಾವಣೆಯಲ್ಲಿತ್ತು. ಇದರಿಂದ ನೇಪಾಳದ ಬೊಕ್ಕಸಕ್ಕೆ ನಷ್ಟ ಉಂಟಾಯಿತು. ಹೀಗಾಗಿ ಈ ಸಂಕಷ್ಟಕ್ಕೆ ಸಿಲುಕಬಾರದೆಂಬ ಉದ್ದೇಶದಿಂದ ನೇಪಾಳ ಸರ್ಕಾರ 200, 500 ಹಾಗು 2000 ರೂಪಾಯಿಗಳ ಕರೆನ್ಸಿ ಚಲಾವಣೆಗೆ ನಿಷೇಧ ಹೇರಿದೆ.

ಈ ಬೆಳವಣಿಗೆಯ ನಡುವೆ ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ತಿಳಿಸಿದೆ.

ಆರ್‌ ಬಿ ಐ ಮೇ ತಿಂಗಳಿನಲ್ಲಿ ಒಂದು ಪ್ರಕಟಣೆ ಹೊರಡಿಸಿ, 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ಅಕ್ಟೋಬರ್‌ 1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಹೀಗಾಗಿ, ಸೆ.30ರ ಒಳಗೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು” ಎಂದು ಸೂಚನೆ ನೀಡಿತ್ತು.

ಜನರು ಬ್ಯಾಂಕ್‌ಗಳೊಂದಿಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು 4 ತಿಂಗಳ ಸಮಯ ಸಾಕು. ಚಲಾವಣೆಯಲ್ಲಿರುವ ಹೆಚ್ಚಿನ ರೂ 2000 ನೋಟುಗಳು ಸೆಪ್ಟೆಂಬರ್ 30 ರ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಬ್ಯಾಂಕ್‌ಗಳಿಗೆ ಹಿಂತಿರುಗುತ್ತವೆ ಎಂದು ಆರ್‌ಬಿಐ ಹೇಳಿದೆ. ಸೆಪ್ಟೆಂಬರ್ 30 ರ ನಂತರವೂ ಕಾನೂನುಬದ್ಧವಾಗಿ ಉಳಿಯುತ್ತದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ನೋಟು ವಿನಿಮಯ ಮಾಡಿಕೊಳ್ಳಲು 10 ನೋಟುಗಳಿಗೆ (20 ಸಾವಿರ ರೂಪಾಯಿ) ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಬ್ಯಾಂಕ್‌ ಖಾತೆಗೆ ಎಷ್ಟಾದರೂ ನೋಟುಗಳನ್ನು ನೀಡಿ ಹಣ ಜಮೆ ಮಾಡಬಹುದು. ಈ ಅವಕಾಶವನ್ನು ಆರ್‌ಬಿಐ ನೀಡಿದೆ.
ಇನ್ನು ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಆ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು ಎಂಬ ನಿಯಮ ಇಲ್ಲ. ಸಾರ್ವಜನಿಕರು ಮುಕ್ತವಾಗಿ ಬ್ಯಾಂಕ್‌ ತೆರೆಳಿ 2000 ನೋಟು ಕೊಟ್ಟು ಬದಲಿ 5000 ಬೆಲೆಯ ನೋಟುಗಳ್ನು ತರಬಹುದು.

ಒಂದು ಮೂಲದ ಪ್ರಕಾರ, “2024 ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಆರಂಭಿಸಿದ್ದು, ಹೆಚ್ಚಿನ ಮುಖಬೆಲೆಯ ನೋಟುಗಳ ಸಂಗ್ರಹಣೆ ಮುಂದಾಗಿವೆ ಎಂದು ಹೇಳಲಾಗಿದೆ. ಅನುಮಾನಾಸ್ಪದವಾಗಿ ಹೆಚ್ಚಿನ ಮುಖಬೆಲೆಯ ನೋಟುಗಳ ಸಂಗ್ರಹಣೆ ಮತ್ತು ದುರುಪಯೋಗವನ್ನು ತಪ್ಪಿಸಲು ಆರ್ ಬಿಐ ನ ಈ ನಿರ್ಧಾರ ಸಹಾಯ ಮಾಡುತ್ತದೆ” ಎನ್ನಲಾಗಿದೆ.

ಸಮಾಧನಕರವೆಂದರೆ,  2000 ರೂ. ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯಲಿವೆ. ಸಮಯಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗುತ್ತಿದೆ ಅಷ್ಟೇ. ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು, ಎಲ್ಲಾ ಬ್ಯಾಂಕ್‌ಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂ. ಬ್ಯಾಂಕ್‌ ನೋಟುಗಳಿಗೆ ಠೇವಣಿ ಮತ್ತು/ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ಬಿಐ ತಿಳಿಸಿದೆ.

ಪಿಂಕ್ ನೋಟುಗಳ (2000 ರೂ) ಯೋಜಿತ ಅವಸಾನವು ಭಾರತದ ಆದರ್ಶ ಕರೆನ್ಸಿ ಮಿಶ್ರಣದ ಬಗ್ಗೆ ಒಂದು ಸೂಕ್ತವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಮತ್ತು ರೂ 500 ದೇಶದ ಅತ್ಯುನ್ನತ ಮುಖಬೆಲೆಯಾಗಿ ಉಳಿಯುತ್ತದೆಯೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. 2016 ರವರೆಗೆ ಚಲಾವಣೆಯಲ್ಲಿದ್ದ ರೂ 500-ರೂ 1,000 ನೋಟುಗಳಿಗೆ ಹೊಸ ರೂ 500-ರೂ 2000 ನೋಟುಗಳನ್ನು ಪರ್ಯಾಯವಾಗಿ ಚಾಲ್ತಿಗೆ ತರಲಾಗಿತ್ತು. ಹಳೆಯ 500 ರೂ ಮತ್ತು 1000 ಮುಖ ಬೆಲೆಯ ನೋಟುಗಳು ಅಂದು ಚಲಾವಣೆಯಲ್ಲಿದ್ದ ಒಟ್ಟು ಕರೆನ್ಸಿಯ ಶೇ.80% ಕ್ಕಿಂತ ಹೆಚ್ಚು ಪಾಲು ಹೊಂದಿತ್ತು. ಆದರೆ ಈಗಿರುವ ರೂ 500 ಮುಖಬೆಲೆಯ ನೋಟುಗಳು ಕೇವಲ ಶೇ.70% ಕ್ಕಿಂತ ಹೆಚ್ಚು ಪಾಲು ಹೊಂದಿದ್ದು, ಈಗ ಮತ್ತೆ ಆರ್ ಬಿಐ ಹೊಸ ಅವತಾರದಲ್ಲಿ 1000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು