ಹೈದರಾಬಾದ್: ಹಣ ತರುವ ಮೂನ್‌ ಲೈಟಿಂಗ್‌ ಸಾವಿಗೂ ಕಾರಣವಾಗಬಹುದು ಎಚ್ಚರ

ಹೈದರಾಬಾದ್: ಪ್ರಸ್ತುತ ಮೂನ್‌ ಲೈಟಿಂಗ್‌ ಐಟಿ ಬಿಟಿ ಕ್ಷೇತ್ರದಲ್ಲಿ ಪ್ರಚಲಿದಲ್ಲಿರುವ ಪದ. ಒಂದು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರವಾಗಲೇ ಇನ್ನೊಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ವಿಭಿನ್ನ ಪದ್ಧತಿಗೆ ಮೂನ್‌ ಲೈಟಿಂಗ್‌ ಎಂಬ ಹೆಸರಿದೆ. ಕೋವಿಡ್‌ ಬಳಿಕ ಈ ಪದ್ಧತಿ ವ್ಯಾಪಕವಾಗಿದೆ. ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈ ವಿಷಯದ ಕುರಿತು ವಿವಿಧ ಆದೇಶಗಳನ್ನು ಹೊರಡಿಸಿದ್ದು, ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಮೂನ್‌ಲೈಟ್‌ನಿಂದ ಮೆದುಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂದು ಹೈದ್ರಾಬಾದ್‌ನ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ದೇಶದ ಪ್ರಮುಖ ಐಟಿ ತಾಣವಾಗಿರುವ ಹೈದರಾಬಾದ್‌ ಲಕ್ಷಾಂತರ ತಂತ್ರಜ್ಞಾನ ವೃತ್ತಿಪರರಿಗೆ ನೆಲೆಯಾಗಿದೆ. ಈ ನಗರದಲ್ಲಿ ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ವೃತ್ತಿಪರರಿದ್ದಾರೆ.

“ನಾವು ಬ್ರೈನ್ ಸ್ಟ್ರೋಕ್, ಹೃದಯಾಘಾತದಿಂದ ಬಳಲುತ್ತಿರುವ ಹಲವರಿಗೆ ಚಿಕಿತ್ಸೆ ನೀಡಿದ್ದೇವೆ. ಪಾರ್ಶ್ವವಾಯು ಅಥವಾ ಹೃದಯಾಘಾತದಂತಹ ಹಲವು ಪ್ರಕರಣದ ರೋಗಿಗಳು ಮೂನ್‌ಲೈಟಿಂಗ್‌ ಕ್ಷೇತ್ರದಲ್ಲಿ ಇದ್ದವರು ಎಂದು ಉಚ್ಚ್ವಾಸ್ ಟ್ರಾನ್ಸಿಶನಲ್‌ಕೇರ್‌ ಫಿಸಿಕಲ್ ಮೆಡಿಸಿನ್ ಮುಖ್ಯಸ್ಥ ವಿಜಯ್ ಬಥಿನಾ ತಿಳಿಸಿದ್ದಾರೆ.

ರೋಗಿಗಳಲ್ಲರೂ ಐಟಿ ವೃತ್ತಿಪರರು, ಅವರೆಲ್ಲರೂ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದರು, ಅವರೆಲ್ಲರೂ ವಾರಕ್ಕೆ 60 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು. ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.

Ashika S

Recent Posts

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

7 mins ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

20 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

30 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago