Categories: ಪ್ರವಾಸ

ನಾಗರಹೊಳೆಯ ನಿಸರ್ಗದ  ನೋಟಕ್ಕೆ ಪ್ರವಾಸಿಗರು ಫಿದಾ

ಮೈಸೂರು: ಇದೀಗ ಪ್ರವಾಸಿ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೇ ಆದರೆ ಈಗ ಜಿಂಕೆ, ಸಾರಂಗ, ಕಾಡುಕೋಣ, ಕಾಡಾನೆಗಳು ಎಲ್ಲೆಂದರಲ್ಲಿ ಕಾಣಿಸುತ್ತಿದ್ದು, ಎಲ್ಲವೂ ಖುಷಿಯಾಗಿ ಅರಣ್ಯದಲ್ಲಿ ಅಲೆಯುತ್ತಿರುವುದು  ಕಂಡು ಬರುತ್ತಿದೆ.

ಇನ್ನು ಹಸಿರು ತುಂಬಿದ ನಿಸರ್ಗದೊಳಗೆ  ಜಿಂಕೆಗಳು ನೆಗೆಯುತ್ತಾ ಓಡಾಡುತ್ತಿದ್ದರೆ, ಕಾಡು ಕೋಣಗಳು ಎಲ್ಲೆಂದರಲ್ಲಿ ಅಲೆಯುತ್ತಿವೆ.  ಬಿದಿರು ಮೆಳೆಗಳು ಬೆಳೆದು ಕಾಡನ್ನು ಆವರಿಸಿಕೊಳ್ಳುತ್ತಿದ್ದರೆ, ಸಸ್ಯಹಾರಿ ಪ್ರಾಣಿಗಳು ಆಹಾರದ ಸಮಸ್ಯೆ ನೀಗಿದ ಸಂಭ್ರಮದಲ್ಲಿವೆ.

ಮೇಲ್ನೋಟಕ್ಕೆ ನಾಗರಹೊಳೆಯ ಚೆಲುವು ಹಸಿರ ಲೋಕವನ್ನು ಧರೆಗೆ  ಇಳಿಸಿದಂತೆ ಕಾಣಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣ ಕಾಡ್ಗಿಚ್ಚಿಲ್ಲದೆ ಕಾಡುಗಳು ಸಮೃದ್ಧಿಯಾಗಿವೆ. ಹೀಗಾಗಿ ಸಣ್ಣಪುಟ್ಟ ಜಂತುಗಳಿಂದ ಆರಂಭವಾಗಿ ದೊಡ್ಡ ಪ್ರಾಣಿಗಳ ತನಕ ಎಲ್ಲವೂ ಅರಣ್ಯಗಳ ನಡುವೆ ಹಾಯಾಗಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಚೆಲುವು ಮೈಸೂರು ಮತ್ತು ಕೊಡಗಿಗೆ ವರದಾನವಾಗಿದ್ದು, ಸುಮಾರು 643ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು  ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರುಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಇದೀಗ ಸುರಿದ ಮಳೆ ನಾಗರಹೊಳೆ ಅರಣ್ಯಕ್ಕೊಂದು ಹೊಸ ಕಳೆ ನೀಡಿದ್ದು ನಿಸರ್ಗ ಪ್ರಿಯರು ನೆಮ್ಮದಿಪಡುವಂತೆ ಮಾಡಿದೆ.

Sneha Gowda

Recent Posts

ರಕ್ತದಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿ ಉಡುಗೊರೆ ನೀಡಲಿರುವ ಯುವಕ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ…

4 mins ago

ಎನ್‌ಡಿಎ ಸರ್ಕಾರ ಬಂದ್ರೆ ಮೆಕ್ಕಾಗೆ ಹೋಗುವ ಮುಸ್ಲಿಮರಿಗೆ 1 ಲಕ್ಷ ರೂ ನೆರವು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದ್ದು, ರಾಜಕೀಯ ಬಿಸಿ ಹೆಚ್ಚಿದೆ.

9 mins ago

ಶ್ರೀನಿವಾಸ ಪ್ರಸಾದ್‌ ನಿಧನ; ಪ್ರಧಾನಿ ಮೋದಿ ಸಂತಾಪ

ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

17 mins ago

ಶ್ರೀನಿವಾಸ ಪ್ರಸಾದ್‌ರಂತಹ ಧೀಮಂತರು ಈಗೆಲ್ಲಿದ್ದಾರೆ: ರಾಜು ಆಲಗೂರ್ ತೀವ್ರ ಕಳವಳ

ವಿ.ಶ್ರೀನಿವಾಸ್ ಪ್ರಸಾದ ಅವರು ಒಬ್ಬ ಧೀಮಂತ ಹಾಗೂ ಜನಾನುರಾಗಿ ನಾಯಕರಾಗಿದ್ದರು ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು…

22 mins ago

ಶಬ್ದ ಮಾಲಿನ್ಯದಿಂದ ನಿದ್ರೆಗೆ ಭಂಗ: ಹೃದಯಾಘಾತದ ಆತಂಕ ಹೆಚ್ಚಳ

ಇಂದು ಶಬ್ದ ಮಾಲಿನ್ಯ ಮಾತ್ರವಲ್ಲದೆ ಪ್ರತಿಯೊಂದು ಮಾಲಿನ್ಯವು ಪರಿಸರದ ಗುಣಮಟ್ಟಕ್ಕೆ ಮಾತ್ರವಲ್ಲದೆ ಮನುಷ್ಯನ ಜೀವನಕ್ಕೂ ಗಂಭೀರ ಅಪಾಯವಾಗಿದೆ. ಶಬ್ದ ಮಾಲಿನ್ಯವು…

49 mins ago

ಮಂಗಳೂರು: ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ !

ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.…

1 hour ago