News Karnataka Kannada
Monday, April 29 2024
ಪ್ರವಾಸ

ದ್ವಿಚಕ್ರದ ಮೂಲಕ ಸೋಲೋ (ಏಕಾಂಗಿ) ಪ್ರವಾಸ : ಹಳ್ಳಿ ಹುಡುಗಿಯ ಸಾಧನೆ

Solo
Photo Credit :

ಸಮಾಜದಲ್ಲಿ ಗಂಡು ಮಕ್ಕಳು ಮಾತ್ರ ಒಬ್ಬರೇ ಎಲ್ಲಿ ಬೇಕಾದರೂ ತಿರುಗಾಡಲು ಹೋಗಬಹುದು. ಆದರೆ ಅದೇ ಸ್ಥಿತಿ ಹೆಣ್ಣು ಮಕ್ಕಳು ಏಕಾಂಗಿಯಾಗಿ ತಿರುಗಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಆದರೆ ಇಂದು ಸಮಯ ಬದಲಾಗಿದೆ. ಗಂಡಿನಂತೆಯೇ ಹೆಣ್ಣೂ ದೇಶ ಸುತ್ತಬಲ್ಲಳು ಎಂಬುದನ್ನು ಹಲವಾರು ಯುವತಿಯರು ಸಾಧಿಸಿ ತೋರಿಸಿದ್ದಾರೆ.

ಇಂದಿನ ಯುವಕ-ಯುವತಿಯರಿಗೆ ದ್ವಿಚಕ್ರದ ಮೂಲಕ ಸೋಲೋ (ಏಕಾಂಗಿ) ಪ್ರವಾಸ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಇದೊಂದು ಹವ್ಯಾಸವಾಗಿಬಿಟ್ಟಿದೆ. ಯುವಕರು ಏಕಾಂಗಿ ಪ್ರವಾಸಕ್ಕೆ ಹೋಗುವುದೇನೋ ಮಾಮೂಲು ಆದರೆ ಇಂದು ಯುವತಿಯರೂ ಇಂತಹ ಹವ್ಯಾಸದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಸೂಳಬೆಟ್ಟಿನ ಆಶಾ ಮೆಹೆಂದಳೆ ಈಚೆಗೆ ತನ್ನ ಬುಲೆಟ್‌ನಲ್ಲಿ ಸೋಲೋ ಪ್ರವಾಸ ಕೈಗೊಂಡಿದ್ದರು. ಗ್ರಾಮೀಣ ಪ್ರದೇಶದಲ್ಲಿರುವ ಈಕೆ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ ಬರ್ಡ್-‌359 ಬೈಕ್‌ನಲ್ಲಿ 1,900 ಕಿ.ಮೀ ಸುತ್ತಾಡಿ ಬಂದಿದ್ದಾರೆ. ಎ. 15 ರಂದು ಸೂಳಬೆಟ್ಟಿನ ತನ್ನ ಮನೆಯಿಂದ ಹೊರಟ ಈಕೆ ಎ. 16 ರಂದು ತಮಿಳುನಾಡನ್ನು ಪ್ರವೇಶಿಸಿ ಮಧುರೆ ಮೀನಾಕ್ಷಿ ದೇವಾಲಯ, ರಾಮೇಶ್ವರದ ಜ್ಯೋತಿರ್ಲಿಂಗದ ಜೊತೆಗೆ ಬೇರೆ ಬೇರೆ ದೇವಾಲಯಗಳನ್ನು ಸಂದರ್ಶಿಸಿ, ಪಂಬನ್‌ ಬ್ರಿಡ್ಜ್‌ ನೋಡಿ ಎ. 17 ರಂದು ಧನುಷ್ಕೋಡಿಗೆ ತಲುಪಿದರು. ಅಲ್ಲಿ ಕೊದಂಡರಾಮ ದೇವಸ್ಥಾನ ಹಾಗೂ ಇನ್ನಿತರ ಪ್ರವಾಸಿತಾಣಗಳನ್ನು ಕಣ್ತುಂಬಿಸಿ ಎ. 18 ರಂದು ಮೈಸೂರು ಮೂಲಕ ಮತ್ತೆ ಸೂಳಬೆಟ್ಟಿಗೆ ಮರಳಿದರು.

ಮುಂಜಾನೆ 4-30ಕ್ಕೆ ಬೈಕ್‌ ಸ್ಟಾರ್ಟ್‌ ಮಾಡಿದರೆ ವಿವಿಧ ಸ್ಥಳಗಳನ್ನು ಸಂದರ್ಶಿಸಿ ಸಂಜೆ 6.30ಕ್ಕೆ ವಸತಿಗೃಹದ ಬಳಿ ಬೈಕ್‌ ಇಂಜಿನ್‌ ಆಫ್‌ ಮಾಡುತ್ತಿದ್ದರು.

ತಮಿಳುನಾಡಿನಲ್ಲಿ ಈಕೆ ತಿರುಗಾಡುತ್ತಿದ್ದಾಗ ಅಲ್ಲಿನ ಹೆಂಗಸರು ಮೂಗಿನ ಮೇಲೆ ಬೆರಳಿಟ್ಟರಂತೆ. ಈಕೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದರಂತೆ. ಆದರೆ ನಾಲ್ಕು ದಿನದ ಪ್ರವಾಸದಲ್ಲಿ ಎಲ್ಲಿಯೂ ಯಾವುದೇ ಅಡಚಣೆಯಾಗಿಲ್ಲ. ಯಾರೂ ತೊಂದರೆ ಕೊಟ್ಟಿಲ್ಲ. ಎಲ್ಲವೂ ಅಂದುಕೊಂಡಂತೆ ಆರಾಮವಾಗಿ ಏಕಾಂಗಿಯಾಗಿಯೇ ತಿರುಗಾಡಿ ಬಂದಿದ್ದಾರೆ.

ಮಂಗಳೂರಿನ ಬೈಕರ್‌ನೀಸ್‌ ಗ್ರೂಪ್‌ ಮೂಲಕ ಸುಮಾರು ೨೦,೦೦೦ ಕಿ.ಮೀ.ನಷ್ಟು ಕರ್ನಾಟಕದ ಹಲವಾರು ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟ ಅನುಭವದ ಆಧಾರದ ಮೇಲೆ ಏಕಾಂಗಿ ಪ್ರವಾಸ ಮಾಡುವ ಯೋಜನೆ ರೂಪಿಸಿದ್ದರು.

ಬಂಟ್ವಾಳ ತಾಲೂಕಿನಲ್ಲಿ ಗ್ರಾಮಕರಣಿಕೆಯ ಸರಕಾರಿ ಸೇವೆಯಲ್ಲಿರುವ ಆಶಾ ಅವರು ರಾಮೇಶ್ವರದ ಜ್ಯೋತಿರ್ಲಿಂಗದ ದರ್ಶನದ ಮೂಲಕ ಇನ್ನುಳಿದ 11 ಜ್ಯೋತಿರ್ಲಿಂಗಗಳ ದರ್ಶನವನ್ನು ಇದೇ ರೀತಿ ಏಕಾಂಗಿ ಪ್ರವಾಸದ ಮೂಲಕ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ. ಹಳ್ಳಿ ಹುಡುಗಿಯ ಸಾಧನೆಗೆ ಜೈ ಎನ್ನೋಣ ಅಲ್ಲವೇ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು