News Karnataka Kannada
Thursday, May 02 2024
ಪರಿಸರ

ಲವಂಗ ಕೃಷಿಯ ಬಗ್ಗೆ ಇಲ್ಲಿದೆ ಮಾರ್ಗದರ್ಶನ

Here's a guide on clove cultivation
Photo Credit : Pixabay

ಲವಂಗ ಒಂದು ಪರಿಮಳಯುಕ್ತ ಮಸಾಲೆ ಪದಾರ್ಥವಾಗಿದೆ. ಇವು ಮಿರ್ಟೇಸಿ ಕುಟುಂಬಕ್ಕೆ ಸೇರಿದ್ದಾಗಿದೆ. ಇದನ್ನು ಭಾರತದಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಭಾರತದಲ್ಲಿ ಕರಾವಳಿ ಹಾಗೂ ಮರಳು ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರದೇಶಗಳಲ್ಲಿ ಬೆಳೆಸಬಹುದು.

ಹವಾಮಾನ ಪರಿಸ್ಥಿತಿ: ೧೫೦ರಿಂದ ೨೫೦ ಸೆ. ಮೀ ವರೆಗಿನ ಮಳೆಯ ಅವಶ್ಯಕತೆಯೊಂದಿಗೆ ಬೆಚ್ಚಗಿನ ಉಷ್ಣ ವಲಯದ ಹವಾಮಾನದಲ್ಲಿ ಲವಂಗವು ಉತ್ತಮವಾಗಿ  ಬೆಳೆಯುತ್ತದೆ. ಲವಂಗ ಸಸ್ಯಗಳು ಭಾಗಶಃ ನೆರಳು ಅಗತ್ಯವಿದೆ.

ಮಣ್ಣಿನ ಅವಶ್ಯಕತೆ: ಲವಂಗ ವನ್ನು ಕೆಂಪು ಮಣ್ಣಿನಲ್ಲಿ ಬೆಳೆಯಬಹುದು. ಸಾಮಾನ್ಯವಾಗಿ ಲವಂಗ ಬೀಜಗಳು ೧೦ ದಿನಗಳಿಂದ ೧೫ ದಿನಗಳ ಒಳಗೆ ಮೊಳಕೆಯೊಡೆಯುತ್ತವೆ. 

ಲವಂಗವನ್ನು ನೆಡಲು ಜೂನ್ ನಿಂದ ಜುಲೈವರೆಗೆ ಉತ್ತಮ ಸಮಯ. 

ನೀರಿನ ಅವಶ್ಯಕತೆ: ಲವಂಗ ಕೃಷಿಯಲ್ಲಿ ಮೊದಲ ೩ರಿಂದ ೪ ವರ್ಷಗಳವರೆಗೆ ನೀರುಹಾಕುವುದು ಅವಶ್ಯಕ. ಬೇಸಿಗೆ ತಿಂಗಳಿನಲ್ಲಿ ಮಣ್ಣಿನ ತೇವಾಂಶ ಕನಿಷ್ಟ ಮಟ್ಟದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.

ಲವಂಗ ಮರಗಳು ಹೂ ಬಿಡುವಿಕೆಯು ನೆಟ್ಟ ೪ನೇ ವರ್ಷದಿಂದ ಫಲ ನೀಡಲು ಪ್ರಾರಂಭವಾಗುತ್ತದೆ. ಆದರೆ ಲವಂಗದ ಸಂಪೂರ್ಣ ಕೊಯ್ಲು ೧೫ ವರ್ಷಗಳ ನಂತರ ಮಾತ್ರ ಸಾಧ್ಯ. ಲವಂಗ ಮೊಗ್ಗುಗಳು ಗುಲಾಬಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ ಕೊಯ್ಲು ಮಾಡಲಾಗುತ್ತದೆ. ಕೊಯ್ಲು ಮಾಡಲಾದ ಲವಂಗ ಮೊಗ್ಗುಗಳನ್ನು ಬಿಸಿಲಿನಲ್ಲಿ ಒಣಗಿಸುವುದು ಹಾಗೂ ಮೊಗ್ಗು ಕಂದು ಬಣ್ಣಕ್ಕೆ ತಿರುಗಿದಾಗ ಅವುಗಳು ಸರಿಯಾಗಿ ಒಣಗಿದೆ ಎಂದರ್ಥ

ಆರೋಗ್ಯ ಪ್ರಯೋಜನಗಳು

• ಲವಂಗ ಹಲ್ಲು ನೋವಿಗೆ ತಾತ್ಕಾಲಿಕ ಉಪಶಮನವನ್ನು ಒದಗಿಸುತ್ತದೆ.

• ಜೀರ್ಣಕ್ರಿಯೆ  ಸುಧಾರಿಸುತ್ತದೆ.

• ಉಸಿರಾಟದ ಸೋಂಕನ್ನು ನಿವಾರಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು