News Karnataka Kannada
Monday, April 29 2024
ನುಡಿಚಿತ್ರ

ಮರೆತು ಹೋದ ಮೈಸೂರು ಸಂಸ್ಥಾನದ ಪ್ರಾತಃಸ್ಮರಣೀಯರು

The unforgettable memories of the forgotten Kingdom of Mysore
Photo Credit : Wikipedia

ಸಾಂಸ್ಕೃತಿಕ ನಗರಿ, ಅರಮನೆಯ ನಗರಿ, ಜಾನಪದ ಕಲೆಗಳ ತವರೂರು ಎಂದೇ ಪ್ರಸಿದ್ಧಿಯಾದ ಮೈಸೂರಿನಲ್ಲಿ ಸ್ಥಳೀಯರಿಗಾಗಲಿ ಅಥವಾ ಪ್ರವಾಸಿಗರಿಗಾಗಲಿ ತಿಳಿಯದ ಕೆಲ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡ ಹಾಗೂ ಸ್ಮಾರಕಗಳಿವೆ. ಇಂತಹ ಪ್ರಾತಃಸ್ಮರಣೀಯಾರು ಮೈಸೂರಿಗೆ ಅಪಾರವಾದ ಕೊಡುಗೆಗಳನ್ನು ನಿಸ್ವಾರ್ಥವಾಗಿ ಕೊಟ್ಟಿರುವುದನ್ನು ಇಂದಿನ ಯುವ ಪೀಳಿಗೆ ಮರೆತು ಜೀವನ ಸಾಗಿಸುತ್ತಿರುವುದು ವಿಷಾದದ ಸಂಗತಿ. ಮೈಸೂರು ಸಂಸ್ಥಾನದ ಪ್ರಮುಖ ಇಬ್ಬರು ಪ್ರಾತಃಸ್ಮರಣೀಯರಾದ ಬಸವಪ್ಪಶಾಸ್ತ್ರಿ ಹಾಗೂ ಗುರುನಾಥ ಬೇವೂರು ಮತ್ತವರ ಮಕ್ಕಳು. ಮೈಸೂರಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಮೊಟ್ಟಮೊದಲ ಬಾರಿಗೆ ಹಾಡಿದ ರಾಜ್ಯ ಗೀತೆ ಹಾಗೂ ಅಂಚೆ ಪತ್ರವು ಈಗಲೂ ಚಾಲ್ತಿಯಲ್ಲಿರಲು ಕಾರಣಕರ್ತರಾದ ಸ್ಮರಣೀಯ ವ್ಯಕ್ತಿಗಳ ಕುರಿತು ಮಾಹಿತಿ.

ಬಸವಪ್ಪಶಾಸ್ತ್ರಿ ಸ್ಮಾರಕ :
ಜಗದ್ವಿಖಾತಾ ನಭೂತೋ ನವಭವಿಷ್ಯತಿ ಎಂಬಂತೆ ಇಂದ್ರನ ಆಸ್ಥಾನದ ಒಂದು ತುಣುಕೊಂಡು ಭೂಮಿಯ ಮೇಲೆ ಬಿದ್ದಂತೆ ಇಡೀ ಜಗತ್ತಿನಲ್ಲಿ ಬ್ರಹ್ಮಾಂಡದಲ್ಲೇ ಕಾಣುವ ಸುಂದರವಾದ ಅಂಬಾವಿಲಾಸ ಅರಮನೆಯ ಕೋಟೆಯನ್ನು 1802 ರಲ್ಲಿ ರಾಣಿ ಲಕ್ಷ್ಮಿ ಅಮಣ್ಣ ಅವರು ಅಂದಿನ ದಿವಾನರಾದ ಪೂರ್ಣಯ್ಯ ಅವರ ನೇತೃತ್ವದಲ್ಲಿ . 1831 ರಲ್ಲಿ ಒಂದು ಕುಂಟೆ ನೆಪವನ್ನು ಹುಡಿ ಬ್ರಿಟಿಷರು ಆಗ ಆಳುತ್ತಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ಬಳಿ ಅಧಿಕಾರವನ್ನು ಕಸಿದು ಬರಬರಿ 50 ವರ್ಷಗಳ ಆಳ್ವಿಕೆಯನ್ನು ನಡೆಸಿದರು. 1881 ರಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಇಂತಹ ರಾಜರಿಗೆ ಮೋಸ ಮಾಡಿದೆವೆಲ್ಲಾ ಎಂದು ತಿಳಿದು ಅಂದಿನ ರಾಜರಾದ 10ನೇ ಚಾಮರಾಜ ಒಡೆಯರಿಗೆ ಅಧಿಕಾರವನ್ನು ಹಾತಾಂತರಿಸಿದರು. ಆ ಸಂಭ್ರಮದ ಸಂದರ್ಭದಲ್ಲಿ ಒಂದು ಗೀತೆಯನ್ನು ನುಡಿಸಲಾಗುತ್ತದೆ ಅದನ್ನು ಮೈಸೂರು ಸಂಸ್ಥಾನದ ರಾಜ ಗೀತೆಯನ್ನಾಗಿ ಘೋಷಿಸಲಾಗುತ್ತದೆ.
“ ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯ ಜಾಕ್ಷಿ ಶಂಕರೀಶ್ವರಿ ||
ವೈಮಾನಿಕ ಭೂಮಾರ್ಚಿತ ಕೋಮಲ ಕರ ಪಾದೆ ||
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ ||
ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯ ಜಾಕ್ಷಿ ಶಂಕರೀಶ್ವರಿ ||
ಶುಂಭಾದಿಮ ದಾಂಭೋನಿಧಿ ಕುಂಭಜ ನಿಭ ದೇವಿ ||
ಜಂಭಾಯಿತ ಸಂಭಾವಿತೆ ಶಾಂಭವಿ ಶುಭವೇ ||
ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯ ಜಾಕ್ಷಿ ಶಂಕರೀಶ್ವರಿ ||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೇಂದ್ರ ||
ನಾಮಂಕಿತ ಭೂಮಿಂದ್ರ ಲಲಾಮನ ಮುದದೆ ||
ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯ ಜಾಕ್ಷಿ ಶಂಕರೀಶ್ವರಿ ||”

ಈ ಪವಿತ್ರವಾದ ಗೀತೆಯನ್ನು ರಚನೆ ಮಾಡಿದವರು 10ನೇ ಚಾಮರಾಜ ಒಡೆಯರಿಗೆ ಖುದ್ದು ಗುರುಗಳಾಗಿದ್ದ, ಅಭಿನವ ಕಾಳಿದಾಸ ಎಂದೇ ಪ್ರಖ್ಯಾತಿ ಪಡೆದ ಬಸವಪ್ಪಶಾಸ್ತ್ರಿ. ಬಸವಪ್ಪಶಾಸ್ತ್ರಿ ಆಗಿನ ಕಾಲದಲ್ಲಿ ಸಂಸ್ಕೃತದಲ್ಲಿ ಕವಿರತ್ನ ಕಾಳಿದಾಸನ ಮೇರು ಕೃತಿಗಳಾದ ಮಾಳವಿಕಾಗ್ನಿಮಿತ್ರ, ವಿಕ್ರಮೋರ್ವಶಿಯಾ, ಅಭಿಜ್ಞಾನ ಶಾಕುಂತಲಾ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ತಂದಂತಹ ಕಾರಣಕ್ಕೆ 10ನೇ ಚಾಮರಾಜ ಒಡೆಯರು ‘ಅಭಿನವ ಕಾಳಿದಾಸ’ ಎಂಬ ಬಿರುದನ್ನು ನೀಡಿ ಸನ್ಮಾನಿಸಿದರು. 1841ರಲ್ಲಿ ಹುಟ್ಟಿ 1891ರಲ್ಲಿ ದೈವಾದಿನರಾದ ಬಸವಪ್ಪಶಾಸ್ತ್ರಿಯವರ ಸ್ಮಾರಕ ಕಟ್ಟಡವನ್ನು ಬನ್ನಿಮಂಟಪದ ಎಲ್.ಐ.ಸಿ ವೃತ್ತದ ಬಳಿ ನಿರ್ಮಿಸಲಾಗಿದೆ.

ಬೇವೂರ್ ಕಟ್ಟಡ :
ಮೈಸೂರಿನ ಐತಿಹಾಸಿಕ ಮತ್ತೊಂದು ಕಟ್ಟಡ ಕೇಂದ್ರ ಅಂಚೆ ಕಛೇರಿ. ಆ ಕಟ್ಟಡದ ಮೇಲ್ಭಾಗದಲ್ಲಿ ಶಾಶ್ವತವಾಗಿ “ಬೇವೂರ್ ಬಿಲ್ಡಿಂಗ್” ಎಂದು ಕೆತ್ತಲಾಗಿದೆ. ಬೇವೂರು ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ಗ್ರಾಮ. ಆದರೆ ಈ ಕಟ್ಟಡಕ್ಕೆ ಹೆಸರಿಡಲು ಮೂಲ ಕಾರಣ ಪ್ರಾತಃಸ್ಮರಣೀಯರಾದ ಸರ್ ಗುರುನಾಥ ವೆಂಕಟೇಶ ಬೇವೂರು. ಪೋಸ್ಟ್ ಮಾಸ್ಟರ್ ಜನರಲ್ ಆಗಿ ಕೆಲಸ ಮಾಡಿ ನಿವೃತ್ತಿ ಇವರು, ಈ ಕಟ್ಟಡ ನಿರ್ಮಾಣಕ್ಕೆ ಕಾರಣ ಭೂತರಾದ ವ್ಯಕ್ತಿ. ಮೈಸೂರು ಸಂಸ್ಥಾನದ ಅಂದಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮೇಲಿಂದ ಮೇಲೆ ಪತ್ರ ಬರೆದು ಭೇಟಿಯಾಗಿ ಈ ಅಂಚೆ ಇಲಾಖೆಯ ಮಹತ್ವದ ಬಗ್ಗೆ ಕಟ್ಟಡ ನಿರ್ಮಾಣದ ಅಗತ್ಯತೆಯ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮನದಟ್ಟು ಮಾಡಿ ಈ ಅಂಚೆ ಕಚೇರಿಯನ್ನು ನಿರ್ಮಿಸಲಾಯಿತು.

ಈ ಪ್ರಾತಃಸ್ಮರಣೀಯ ವ್ಯಕ್ತಿ ಭಾರತೀಯ ಮಾತೆಯ ಮಡಿಲಿಗೆ 2 ಅನರ್ಘ್ಯ ರತ್ನರನ್ನು ನೀಡಿದ್ದಾರೆ. ಮೊದಲನೆಯವರು ಮಾಧವ ಬೇವೂರು, ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ 2ನೇ ಮಹಾಯುದ್ಧದಲ್ಲಿ ಬರ್ಮಾ ದೇಶದಲ್ಲಿ ಹುತಾತ್ಮರಾಗುತ್ತಾರೆ. 2ನೇ ಅನರ್ಘ್ಯ ರತ್ನ ಗೋಪಾಲ ಬೇವೂರು, ಇವರು ಸಹ ಭೂಸೇನೆಯಲ್ಲಿ ಮಹಾದಂಡ ನಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಾರೆ. ಕರ್ನಾಟಕದ ಮೊದಲ ದಂಡ ನಾಯಕ ಯಾರು ಎಂದರೆ ಕೆ ಎಮ್ ಕಾರ್ಯಪ್ಪ ಎಂದು ಹೇಳುತ್ತೇವೆ. ಆದರೆ ಎಲೆಮರಿ ಕಾಯಿಯಾಗಿ ಕಾಲ ಗರ್ಭದಲ್ಲಿ ಹುಲಿಗಿ ಹೋದವರು ಹೆಮ್ಮೆಯ ಗೋಪಾಲ ಬೇವೂರು.

-ಮಣಿಕಂಠ ತ್ರಿಶಂಕರ್, ಮೈಸೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು