News Karnataka Kannada
Monday, April 29 2024
ನುಡಿಚಿತ್ರ

ಅಸ್ತಮಾ ರೋಗಿಗಳು ಪಟಾಕಿ ಹೊಗೆಯಿಂದ ದೂರವಿರಿ!

Astama
Photo Credit : By Author

ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸರಳವಾಗಿ ದೀಪಾವಳಿ ಆಚರಿಸಿದ ಜನ ಈ ಬಾರಿ ಅದ್ಧೂರಿಯಾಗಿ ಹಬ್ಬಾಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಪಟಾಕಿ ಸಿಡಿಸುವವರ ಸಂಖ್ಯೆ ಜಾಸ್ತಿಯಾಗಲಿದ್ದು, ಇದರಿಂದ ಅಸ್ತಮಾ ರೋಗಿಗಳು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾದರೂ ಅಚ್ಚರಿಯಿಲ್ಲ.

ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ ಬಯಲು ಪ್ರದೇಶಗಳು ಜಾಸ್ತಿಯಾಗಿರುವುದರಿಂದ ಮತ್ತು ಗಾಳಿ ಬೆಳಕು ಚೆನ್ನಾಗಿ ಇರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗದು ಆದರೆ ಪಟ್ಟಣ ಪ್ರದೇಶಗಳಲ್ಲಿ ಪಟಾಕಿಯ ಹೊಗೆ ಗಾಳಿಯೊಂದಿಗೆ ಬೆರೆಯುವುದರಿಂದ ಅಸ್ತಮಾ ರೋಗಿಗಳಿಗೆ ತೊಂದರೆಯಾಗಬಹುದು. ಒಂದು ವೇಳೆ ಅಸ್ತಮಾ ರೋಗಿಗಳಿದ್ದರೆ ಪಟಾಕಿಯಿಂದ ದೂರವಿರುವ ಪ್ರಯತ್ನ ಮಾಡುವುದು ಒಳಿತು.

ಈಗೀಗ ಅಸ್ತಮಾ ಚಿಕ್ಕವರಿಂದ ದೊಡ್ಡವರ ತನಕ ಕಾಡುವುದರಿಂದ ಅದರಲ್ಲೂ ಅಸ್ತಮಾ ಇರುವ ಮಕ್ಕಳು ಪಟಾಕಿ ಹಚ್ಚುತ್ತಾ ಅದರ ಹೊಗೆಯಲ್ಲಿ ಹೆಚ್ಚು ಹೊತ್ತು ಇರುವುದರಿಂದ ಸಮಸ್ಯೆಗಳು ಕಾಣಿಸಬಹುದು. ಆದುದರಿಂದ ಪೋಷಕರು ಈ ಬಗ್ಗೆ ನಿಗಾ ವಹಿಸುವುದು ಅತಿ ಮುಖ್ಯ. ಹಾಗೆಯೇ ಮನೆಯಲ್ಲಿ ಯಾರಾದರೂ ಅಸ್ತಮಾ ರೋಗಿಗಳಿದ್ದರು ಮನೆಯವರು ಎಚ್ಚರಿಕೆ ವಹಿಸುವುದು ಒಳ್ಳೆಯದು.

ಅಸ್ತಮಾ ಎನ್ನುವುದು ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಕಾಡುವ ರೋಗ. ಹೀಗಾಗಿ ನಾವೆಷ್ಟು ಎಚ್ಚರಿಕೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು. ಅಸ್ತಮಾವನ್ನು ನಿಯಂತ್ರಣದಲ್ಲಿರಿಸಲು ಏನು ಮಾಡಬೇಕು? ಹೇಗಿರಬೇಕು? ನಮ್ಮ ಜೀವನ ಶೈಲಿಯನ್ನು ಹೇಗೆ ರೂಢಿಸಿಕೊಳ್ಳಬೇಕು? ಮುಂತಾದ ಸಲಹೆಗಳನ್ನು ವೈದ್ಯರು ನೀಡಿರುತ್ತಾರೆ. ಜತೆಗೆ ರೋಗಿಗಳು ಅವರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುತ್ತಾರೆ. ಆದರೆ ಈಗ ಪಟಾಕಿಯ ಹೊಗೆ ರೋಗಿಗಳು ಪಾಲಿಸಿಕೊಂಡು ಬಂದಿದ್ದ ನಿಯಮವನ್ನು ಬುಡಮೇಲು ಮಾಡಿ ಬಿಡಬಹುದು. ಆದ್ದರಿಂದ ಒಂದಷ್ಟು ಎಚ್ಚರಿಕೆಯಿಂದ ಇರುವುದು ಬಹು ಮುಖ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು