ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರ ತಾಯಿ ಕರೀಮಾ ಬೇಗಂ ನಿಧನರಾಗಿದ್ದಾರೆ. ತಮ್ಮ ಟ್ವಿಟರ್ ಪೇಜ್ʼನಲ್ಲಿ ಫೋಟೋವೊಂದನ್ನ ಶೇರ್ ಮಾಡುವ ಮೂಲಕ ತನ್ನ ತಾಯಿಯ ನಿಧನ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ಹಾಗೂ ಅದರ ತಾಯಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ಇಂದು ನಿಧನರಾಗಿದ್ದು, ಪಾರ್ಥಿವ ಶರೀರವನ್ನು ಇಂದು ಸಂಜೆ ಅಂತಿಮ ದರ್ಶನದ ನಂತರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುಮಾರು 52 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರೆಹಮಾನ್, ಧ್ವನಿಸುರಳಿ-ಧ್ವನಿಮುದ್ರಣ ನಿರ್ಮಾಪಕ, ಸಂಗೀತಗಾರ ಹಾಗೂ ಗಾಯಕರಾದ ರೆಹಮಾನ್, ತಮ್ಮ ತಾಯಿಗೆ ತುಂಬಾನೇ ಆಪ್ತನಾಗಿದ್ದು, ಆನೇಕ ಬಾರಿ ತನ್ನ ಸ್ಟೇಜ್ ಶೋಗಳಲ್ಲಿ ಪ್ರಶಸ್ತಿಗಳನ್ನ ಪಡೆಯುವಾಗ ತಮ್ಮ ತಾಯಿಯನ್ನ ಸ್ಮರಿಸುತ್ತಿದ್ರು.