News Karnataka Kannada
Thursday, May 02 2024
ಲೇಖನ

ಹಿಂದೂ ಧರ್ಮದಲ್ಲಿ ಮಾಂಗಲ್ಯ ಸರಕ್ಕೆ ಇರುವ ಮಹತ್ವ

Significance of Karimani Mangalya
Photo Credit : Freepik

ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯದಲ್ಲಿ ಎಷ್ಟು ಮಹತ್ವವಿದೆಯೋ ವರ ವಧುವಿಗೆ ಕಟ್ಟುವ ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜನಬಲಿ, ಕಾಲುಂಗರ, ಹೂವು ನೀಡಲಾಗುವುದು; ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ, ಅದರಲ್ಲಿ ‘ಮಾಂಗಲ್ಯ’ ಯಾವುದು, ಮಾಂಗಲ್ಯಧಾರಣದ ಸಂಪ್ರದಾಯ ಹೇಗೆ ಬಂತು, ಬಂಗಾರದೊಡವೆಯಲ್ಲಿ ಕರಿಮಣಿಗಳೇಕೆ, ಕರಿಮಣಿಸರದಲ್ಲಿ ಹವಳವೇಕೆ ಎಂಬುದನ್ನು ನೋಡೋಣ. ಆದಿಶಂಕರರು ರಚಿಸಿದ ಸೌಂದರ್ಯಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಲಸೂತ್ರವನ್ನು ಕಟ್ಟಿದನೆಂದಿದೆ. ಲಲಿತಾ ಸಹಸನಾಮ, ಸೌಂದರ್ಯಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯಧಾರಣವನ್ನು ಪ್ರಸ್ತಾಪಿಸಿವೆ.

ವಿವಾಹಿತ ಹೆಂಗಸಿನ ಮೇಲೆ ಕೆಟ್ಟದೃಷ್ಟಿ ಬೀಳದಿರಲೆಂದೇ ಮಂಗಲಸೂತ್ರದಲ್ಲಿ ಕಪ್ಪುಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ, ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗುಲದಂತೆ ಮಾಡುವ ಗುಣವಿರುತ್ತದೆ. ಎಂಬ ನಂಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಮಾಲೆಯಾಗುವುದನ್ನು, ಗಂಡಿನ ಕುಟುಂಬವೆಂಬ ಸೂಕ್ತದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿಕೊಳ್ಳಬೇಕು. ಹೊರದಿಕೊಳ್ಳುತ್ತಾಳೆ ಎಂಬ ಚಾಯಕ್ಕೆ ಹೋಲಿಸುತ್ತಾರೆ.

ಕರಿಮಣಿಸರದ ಮತ್ತೊಂದು ವೈಶಿಷ್ಟ್ಯವೇನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತವೆ ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಟತೆಯನ್ನು ಹಾಗೂ ಎದೆಹಾಲು ಕೆಡದಂತೆ ಶಿಶುವಿಗೆ ಉಣಲೂ ಅನುಕೂಲವಾದ ಸಮ ಸಹಾಯ ಮಾಡುತ್ತದೆ.

ಮಂಗಲಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತಪಂಥಗಳಿಗನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತವೆ. ಬಾತೃಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಪ್ಪ ಮಾಲಾಧಾ ಸ್ತ್ರೀಯರಿಗೆ ಒಂದು ಪದಕದ ತಾಳಿ, ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿತ್ರ ಭಕ್ತಿ ರೈಡೂರ್ಯಗಳಿರುವ ತಾಳಿ.. ಹೀಗೆ ವೈವಿಧ್ಯಗಳು ವೀರಶೈವ ಸ್ತ್ರೀಯರು ತಾಳಿಯೊಂದಿಗೆ ಲಿಂಗದ ಕರಂಡಕವನ್ನು ಕಟ್ಟಿಕೊಳ್ಳುವುದೂ ಇದೆ.

ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಸ್ಟಿಯನ್ ಮತ್ತು ಮುಸ್ಲಿಂ ಮತರ ಸ್ತ್ರೀಯರೂ ವಿವಾಹಾನಂತರ ತಾಳಿ, ಕಲಮಣಿ ಸರ ಧರಿಸುತ್ತಾರೆ, ಗೃಹಿಣಿಯರು ಇಂದು ಸೌಭಾಗ್ಯಕರವರ ಇವುಗಳನ್ನು ಉರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿಹಿಡಿಯುವ ಗೌರವಾರ್ಹವಾಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳಾಗುತ್ತಾಳೆ.

-ಮಣಿಕಂಠ ತ್ರಿಶಂಕರ್, ಮೈಸೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು