News Karnataka Kannada
Friday, May 10 2024
ಲೇಖನ

ಪ್ರೇಮಿಗಳ ದಿನದ ಆಚರಣೆಗೆ ಕಾರಣನಾದ ವ್ಯಾಲೆಂಟೈನ್ ನೆನಪಾಗುತ್ತಿದ್ದಾನೆ….

Valentines Day.
Photo Credit : News Kannada

ಇವತ್ತು ಜಗತ್ತಿನಾದ್ಯಂತ ಪ್ರೇಮ ರಿಂಗಣಿಸುತ್ತಿದೆ. ಪ್ರೇಮಿಗಳು ಪ್ರೇಮದ ಮತ್ತಿನಲ್ಲಿ ಮೈಮರೆಯುತ್ತಿದ್ದಾರೆ. ಜಗತ್ತೇ ಪ್ರೇಮಮಯವಾಗುತ್ತಿದೆ. ಹೀಗಿರುವಾಗಲೇ ಪ್ರೇಮಿಗಳ ದಿನದ ಆಚರಣೆಗೆ ಕಾರಣನಾದ ವ್ಯಾಲೆಂಟೈನ್ ನೆನಪಾಗುತ್ತಿದ್ದಾನೆ..

ಇವತ್ತಿನ ಪ್ರೇಮಿಗಳ ದಿನ ಅರ್ಥಾತ್ ವ್ಯಾಲೆಂಟೈನ್ ಡೇ ಗೆ  ವ್ಯಾಲೆಂಟೈನ್ ಕಾರಣ. ಆತನ ಬಗ್ಗೆ ಕೆದಕುತ್ತಾ ಹೋದರೆ ಹಲವು ಶತಮಾನಗಳ ಹಿಂದೆ ನಡೆದ ಘಟನೆಯೊಂದು ಆಚರಣೆಯಾಗಿ ಮುಂದುವರೆಯಿತು ಎಂಬ ಪುರಾವೆ ಲಭಿಸುತ್ತದೆ. ಅದು ಕ್ರಿ.ಶ. 269ನೇ ಇಸವಿಯ ದಿನಗಳು… ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾಪರಾಧವಾಗಿತ್ತು.  ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‌ನ ಅಭಿಪ್ರಾಯವಾಗಿತ್ತು. ಹಾಗಾಗಿ ಆತ ಮದುವೆ ಎಂದರೆ ಕೆಂಡಮಂಡಲವಾಗುತ್ತಿದ್ದನು. ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ  ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು.

ದೊರೆ ಕ್ಲಾಡಿಯಸ್‌ನ ಈ ಹುಚ್ಚಾಟ ಪಾದ್ರಿ ವ್ಯಾಲೆಂಟೈನನ್ನು ಕೆರಳಿಸಿತ್ತು. ಹಾಗಾಗಿ ದೊರೆಯ ನೀತಿಯನ್ನು ಖಂಡಿಸುತ್ತಾ ದೊರೆ ಕ್ಲಾಡಿಯಸ್‌ನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದ್ದನು. ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ಪಾದ್ರಿ ವ್ಯಾಲೆಂಟೈನ್ ಪ್ರೇಮಿಗಳನ್ನು ಒಂದುಗೂಡಿಸುತ್ತಿರುವ ವಿಚಾರ ದೊರೆ ಕ್ಲಾಡಿಯಸ್‌ನ ಕಿವಿಗೆ ಬಿತ್ತು.  ತನ್ನ ಆಜ್ಞೆಯನ್ನು ಮೀರಿದ ವ್ಯಾಲೆಂಟೈನ್ ಮೇಲೆ ಕೆಂಡಾಮಂಡಲನಾದನಲ್ಲದೆ, ಅವನಿಗೆ ಮರಣದಂಡನೆಯನ್ನು ವಿಧಿಸಿದನು.

ಅದರಂತೆ ಫೆಬ್ರವರಿ 14ರಂದು ಪಾದ್ರಿ ವ್ಯಾಲೆಂಟೈನನ್ನು ಗಲ್ಲಿಗೇರಿಸಲಾಯಿತು. ಪ್ರೇಮಿಗಳಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಪಾದ್ರಿ ವ್ಯಾಲೆಂಟೈನ್‌ನ ಸ್ಮರಣೆಗಾಗಿ  ಆ ದಿನವನ್ನು ವ್ಯಾಲೆಂಟೈನ್ ಡೇ ಆಚರಣೆಗೆ ಬಂತೆಂದು ಹೇಳಲಾಗುತ್ತಿದೆ. ಇದೀಗ ಆಚರಣೆ ವರ್ಷದಿಂದ ವರ್ಷಕ್ಕೆ ಒಂದಷ್ಟು ಬದಲಾವಣೆ ಕಾಣುತ್ತಾ ಸಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು